twitter
    For Quick Alerts
    ALLOW NOTIFICATIONS  
    For Daily Alerts

    ಕೌಮಾರ್ಯ ಹರಾಜಿಗೆ ರಿಯಾಲಿಟಿ ಶೋ

    By * ಲೋdyashy
    |

    Reality show to auction virgins
    ಕಪಿಲ್ ದೇವ್ ರವರ ಐ ಸಿ ಎಲ್ ಗೆ ಪ್ರತಿಸ್ಪರ್ಧಿಯಾಗಿ ಉದ್ಯಮಿ ಲಲಿತ್ ಮೋದಿ ಬೆಸೆದ ಐ ಪಿ ಎಲ್ ಬಗ್ಗೆ ಈಗಾಗಲೇ ಸಾಕಷ್ಟು ಗೊಂದಲಗಳು ವಿಶ್ವದ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಜಗಜ್ಜಾಹಿರವಾಗಿವೆ.

    ಇದೇನಪ್ಪಾ ಇದು, ಗಣಪತಿ ಹಬ್ಬದ ದಿನ ಹೂವಿನ ಹಾರಗಳನ್ನು ಹರಾಜ್ ಹಾಕಿದ ಹಾಗೆ ನಮ್ಮ ಕ್ರಿಕೇಟಿಗರನ್ನೇ ಹರಾಜ್ ಹಾಕ್ತಾರಲ್ಲಾ ಇವರು ಏನಿದು ಸಮಾಚಾರ ಅಂತೇಳಿ ಸಾಮಾನ್ಯ ಮನುಷ್ಯನಿಗೆ ಅರ್ಥವಾಗೋ ವೇಳೆಗೆ ಮೂರು ವರ್ಷ ಮುಗಿದೇ ಹೋಯಿತು. ಇಲ್ಲಿಯತನಕ ಐಪಿಎಲ್ ಪಂದ್ಯಾವಳಿಯ ವಾಣಿಜ್ಯ ವಿಭಾಗದಲ್ಲಿ ಹಣ ಎಣಿಸಿಕೊಂಡಿದ್ದ ಮೋದಿಯ ಮೇಲೆ ಸಾಕಷ್ಟು ಆರೋಪಗಳ ಸುರಿಮಳೆಯೇ ಹರಿದು ಬರುತ್ತಿದೆ. ಅದೇನೇ ಇರಲಿ. ಇದರಿಂದ ಮೋದಿ ಹೇಗೆ ಹೊರಗೆ ಬರ್ತಾರೆ ಅನ್ನೋ ಪ್ರಶ್ನೆಗಳಿಗೆ ಉತ್ತರವನ್ನು ಕೇಳಲು ನಾವು ವರುಷಗಟ್ಟಳೆ ಕಾಯೋಣವಂತೆ.

    ಇದೇ ವೇಳೆ, ಆಸ್ಟೇಲಿಯಾದಲ್ಲಿ ಒಬ್ಬ ಚಿತ್ರ ನಿರ್ದೇಶಕ, ಇದೇ ರೀತಿಯ ಒಂದು ಹೊಸ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದಾನೆ. ಆತನೇ ಜಾನ್ ಸಿಸ್ಸೆಯ್. ಈತನ ಕಣ್ಣು ನೆಟ್ಟಿರುವುದು ನಟ, ನಟಿಯರ ಮೇಲಲ್ಲ. ಅಥವ ಕ್ರಿಕೆಟಿಗರೂ ಅಲ್ಲ. ಹದಿ ಹರೆಯದ ಕುಮಾರ, ಕನ್ಯಾಮಣಿಗಳೇ ಈತನ ಪಂದ್ಯಾವಳಿಯ ಹರಾಜು ಸರಕುಗಳು.

    ನಮ್ಮ ಐ ಪಿ ಎಲ್ ತರನೇ ಸಿಸ್ಸೆಯ್ ಸಹ ಭಾಗವಹಿಸಲಿಚ್ಚಸುವ ಕುಮಾರ,ಕನ್ಯೆಯರನ್ನು ಹರಾಜಿನಲ್ಲಿ ತೊಡಗಿಸುತ್ತಾನೆ.ಈ ರೀತಿ ಹರಾಜಿನಲ್ಲಿ ಬಂದ ಮೊತ್ತದ ಶೇ 90 ಭಾಗವನ್ನು ಸ್ಪರ್ಧಿಗಳಿಗೇ ನೀಡುತ್ತಾನೆ. ಉಳಿದ ಶೇ 10 ಭಾಗವನ್ನು ಪಂದ್ಯಾವಳಿಗಳನ್ನು ನಡೆಸಲು ಅವಕಾಶ ಮಾಡಿಕೊಡುವ ಸ್ಟೇಡಿಯಂಗಳಿಗೆ ಕೊಡುತ್ತಾನೆ. ಇದಿಷ್ಟೇ ಅಲ್ಲದೇ ಈತ ತನ್ನದೇ ಕಿಸೆಯಿಂದ ಪ್ರತಿಯೊಬ್ಬ ಸ್ಪರ್ಧಾಳುವಿಗೆ 20 ಸಾವಿರ ಅಮೇರಿಕನ್ ಡಾಲರ್ ನೀಡುತ್ತಾನಂತೆ.

    ಐ ಪಿ ಎಲ್ ನಲ್ಲಿ, ಸಾವಿರಾರು ಜನಗಳ ಮದ್ಯೆ, ನೂರಾರು ಕ್ಯಾಮೆರಾಗಳ ಮಧ್ಯೆ ಹನ್ನೊಂದು ಆಟಗಾರರ ಎರಡು ಟೀಂಗಳ ಮದ್ಯೆ ಸೆಣಸಾಟ ನಡೆಯುತ್ತದೆ. ಆದರೆ ಇಲ್ಲಿ ಏನು ಆಟ ಅಂತ ನೀವು ಪ್ರಶ್ನೆ ಹಾಕಬಹುದು. ಭಾಗವಹಿಸಲು ಇಚ್ಚಿಸುವ ಕುಮಾರರು, ಕನ್ಯೆಯರು ಕ್ಯಾಮೆರಾಗಳ ಕಣ್ಣೆದುರಿಗೆ ತಮ್ಮ "ಕೌಮಾರ್ಯ" ವನ್ನು ತ್ಯಜಿಸಬೇಕು. ಅಷ್ಟೇ. ಇದನ್ನು ವೇಶ್ಯಾವಾಟಿಕೆ ಎಂದು ದೂರುವಂತಿಲ್ಲ. ಇದಕ್ಕೇ ಬೇರೆಯದೇ ಆದ ನಿಯಮಗಳಿವೆಯಂತೆ. ಈ ಕಾರ್ಯಕ್ರಮ ರಿಯಾಲಿಟಿ ಶೋ ಮಾದರಿಯಲ್ಲಿ ಇರುತ್ತದೆ. ಆನಂತರ ಫುಟೇಜುಗಳನ್ನು ಆಧರಿಸಿ ಸಾಕ್ಷ್ಯಚಿತ್ರವನ್ನು ತಯಾರಿಸಲಾಗುತ್ತದೆ.

    ಇದೇನಪ್ಪಾ ಇಂತದ್ದಕ್ಕೆಲ್ಲಾ ಜನ ಪ್ರೋತ್ಸಾಹ ನೀಡುತ್ತಾರಾ ಅಂತ ಗೊಂದಲಕ್ಕೊಳಗಾಗಬೇಡಿ. ಅನೇಕ ಯುವಕ ಯುವತಿಯರು ಈ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬಲು ಉತ್ಸಾಹದಿಂದಲೇ ಮಾಧ್ಯಮಗಳ ಮುಂದೆ ತಮ್ಮಿಷ್ಟ ತೋಡಿಕೊಂಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಪೋಷಕವರ್ಗದಿಂದ ಈ ಆಟಕ್ಕೆ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿದೆ. ಆದ್ದರಿಂದ ಇದರ ನೇತಾರ, ಜಾನ್ ಸಿಸ್ಸಯ್, ಆಸ್ಟೇಲಿಯಾ ಬಿಟ್ಟು ಅಮೇರಿಕದಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗಿದ್ದಾನೆ.

    ಒಟ್ಟಲ್ಲಿ ಐ ಪಿ ಎಲ್ ನ ನಿಯಮಗಳನ್ನೇ ಅನುಸರಿಸಿ ಮತ್ತೊಂದು ಹೊಸ ಯೋಜನೆಯೊಂದಿಗೆ ಈಗ ಭಾರೀ ಸುದ್ದಿಯಲ್ಲಿರುವ ಜಾನ್ ಸಿಸ್ಸೆಯ್ ಅವರ ಈ ಯೋಜನೆಗೆ ಎಷ್ಟರಮಟ್ಟಿನ ಯಶಸ್ಸು ಸಿಕ್ಕತ್ತೋ ಎನ್ನುವುದನ್ನು ಕಾದೇ ನೋಡಬೇಕು.

    Wednesday, May 12, 2010, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X