For Quick Alerts
  ALLOW NOTIFICATIONS  
  For Daily Alerts

  ಏಳು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿದ ದರ್ಶನ್ 'ಸಾರಥಿ'

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರಕ್ಕೆ ಮತ್ತೊಂದಷ್ಟು ಗರಿಗಳು ಸೇರ್ಪಡೆಯಾಗಿವೆ. ಒಟ್ಟು ಏಳು ವಿಭಾಗಗಳಲ್ಲಿ ಈ ಬ್ಲಾಕ್ ಬಸ್ಟರ್ ಚಿತ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 'ಟಿವಿ 9 ಸ್ಯಾಂಡಲ್‌ವುಡ್ ಅವಾರ್ಡ್ಸ್ 2012' ರಲ್ಲಿ 'ಸಾರಥಿ' ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯಾಗಿದೆ.

  ಈ ಚಿತ್ರದಲ್ಲಿನ ಅಭಿನಯಕ್ಕಾಗಿ ದರ್ಶನ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿ ಭಾಜನರಾಗಿದ್ದಾರೆ. ಉಳಿದಂತೆ 'ಅತ್ಯುತ್ತಮ ನಿರ್ದೇಶಕ', 'ಅತ್ಯುತ್ತಮ ಚಿತ್ರಕಥೆ' ವಿಭಾಗಳಲ್ಲಿ ದಿನಕರ್ ತೂಗುದೀಪ್ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 'ಅತ್ಯುತ್ತಮ ಕಲೆ' ಪ್ರಶಸ್ತಿ ಈಶ್ವರಿ ಕುಮಾರ್ ಅವರ ಕೈ ಸೇರಿದೆ.

  ಉಳಿದಂತೆ 'ಅತ್ಯುತ್ತಮ ಸಾಹಸ' ಪ್ರಶಸ್ತಿ ರವಿವರ್ಮ, 'ಅತ್ಯುತ್ತಮ ಹಾಸ್ಯನಟ' ಪ್ರಶಸ್ತಿಗೆ ಬುಲೆಟ್ ಪ್ರಕಾಶ್ ಅವರ ಪಾಲಾಗಿದೆ. 2011ರ 'ಅತ್ಯುತ್ತಮ ಚಿತ್ರ'ವಾಗಿಯೂ 'ಸಾರಥಿ' ಆಯ್ಕೆಯಾಗಿದೆ. ಅಂದಹಾಗೆ ದರ್ಶನ್ ತಮ್ಮ ಅತ್ಯುತ್ತಮ ನಟ ಪ್ರಶಸ್ತಿಯನ್ನು ತನ್ನ ಅಭಿಮಾನಿಗಳಿಗೆ ಅರ್ಪಿಸಿ ಅಭಿಮಾನಿಗಳ ಮೇಲಿನ ತಮ್ಮ ಹೃದಯ ವೈಶಾಲ್ಯವನ್ನು ಮೆರೆದಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Challenging Star Darsha's lead Kannada movie Sarathi bagging top 7 honors including best film, best director, best actor, best comedy actor awards in "TV 9 Sandalwood awards 2012".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X