For Quick Alerts
  ALLOW NOTIFICATIONS  
  For Daily Alerts

  ಕೋಟ್ಯಾಧಿಪತಿ ವಿರುದ್ದ ಆಖಾಡಕ್ಕೆ ಇಳಿದ ಉದಯಟಿವಿ

  |

  ಕಿರುತೆರೆಯಲ್ಲಿ ಸುವರ್ಣ ಮತ್ತು ಉದಯ ಟಿವಿ ಹಿತಕರ ಪೈಪೋಟಿಗೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ. ಇಂದಿನಿಂದ (ಮಾ 12) ಸುವರ್ಣ ವಾಹಿನಿಯಲ್ಲಿ ಪುನೀತ್ ರಾಜಕುಮಾರ್ ನಿರೂಪಿಸುವ ಬಹುನಿರೀಕ್ಷಿತ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಆರಂಭವಾಗಲಿದೆ.

  ಈ ಕಾರ್ಯಕ್ರಮದ ಮೂಲಕ ಸುವರ್ಣ ವಾಹಿನಿಯ ಟಿಆರ್ಪಿ ಗಣನೀಯವಾಗಿ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಬಲ್ಲವರ ಮಾತು. ಆದರೆ ಕಿರುತೆರೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಉದಯವಾಹಿನಿ ಇದಕ್ಕೆ ಇದೇ ರೀತಿಯ ಇನ್ನೊಂದು ಕಾರ್ಯಕ್ರಮದ ಮೂಲಕ ತಿರುಗೇಟು ನೀಡಲು ಸಿದ್ದವಾಗಿದೆ.

  ವಿವೇಲ್ ಅರ್ಪಿಸುವ "ಕೈಯಲ್ಲಿ ಕೋಟಿ, ಹೇಳ್ಬಿಟ್ಟು ಹೊಡೀರಿ' ಎನ್ನುವ ಶೀರ್ಷಿಕೆಯಡಿಯಲಿ ಹೊಸ ಕಾರ್ಯಕ್ರಮ ಆರಂಭವಾಗಲಿದೆ. "ಪ್ರಶ್ತ್ನೆಗೆ ಮುನ್ನವೇ ಒಂದು ಕೋಟಿ, ಜೋಡಿಯಾಗಿ ಬನ್ನಿ, ಏಳು ಪ್ರಶ್ತ್ನೆ ಉತ್ತರಿಸಿ ಒಂದು ಕೋಟಿ ಗೆಲ್ಲಿ" ಎನ್ನುವುದು ಈ ಕಾರ್ಯಕ್ರಮದ ಪಂಚಿಂಗ್ ಡೈಲಾಗ್, ಹಾಗೂ ಕಾರ್ಯಕ್ರಮದ ನಿರೂಪಕರು ನವರಸನಾಯಕ ಜಗ್ಗೇಶ್.

  ಆದರೆ ಈ ಶೋ ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಉದಯವಾಹಿನಿ ಸ್ಪಷ್ಟ ಪಡಿಸಲಿಲ್ಲ. ಅತಿ ಶೀಘ್ರದಲ್ಲೇ.. ಎಂದು ಗಂಟೆಗೆ ಮೂರುಬಾರಿಯಂತೆ ಜಾಹೀರಾತು ಪ್ರಕಟಿಸುತ್ತಿದೆ.

  ಒಟ್ಟಿನಲ್ಲಿ ಸುವರ್ಣವಾಹಿನಿ ಪ್ರೈಮ್ ಟೈಮ್ ಎಂಟು ಗಂಟೆಗೆ ಈ ಕಾರ್ಯಕ್ರಮ ಆರಂಭಿಸಲಿದೆ. ಅದೇ ಸಮಯಕ್ಕೆ ಉದಯವಾಹಿನಿ ಕೂಡ ಕಾರ್ಯಕ್ರಮ ಆರಂಭಿಸಿ ತನ್ನ ಜನಪ್ರಿಯತೆಗೆ ಧಕ್ಕೆ ಬರದಂತೆ ನೋಡಿಕೊಂಡರೆ ಉದಯ ಮತ್ತು ಸುವರ್ಣ ವಾಹಿನಿಯ ನಡುವೆ ಹಿತಕರ ಪೈಪೋಟಿಗೆ ಭರ್ಜರಿಯಾಗಿ ವೇದಿಕೆಯಾಗಲಿದೆ.

  ನಿರೂಪಣೆಯ ವಿಷಯದಲ್ಲಿ ಪುನೀತ್ ರಾಜಕುಮಾರ್ ಅವರ ಜನಪ್ರಿಯತೆ ಜಗ್ಗೇಶ್ ಗಿಂತ ಹೆಚ್ಚು ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ಎರಡೂ ಶೋಗಳಲ್ಲಿ ಬರುವುದು ಹಣ..ಹಣ.. ಹಣಕ್ಕೆ ಯಾವ ಭೇದಭಾವವಿಲ್ಲ. ಯಾರೂ ಕೊಟ್ಟರೂ, ಎಲ್ಲಿ ಗೆದ್ದರೂ ದುಡ್ಡು ದುಡ್ಡೇ..ವೀಕ್ಷಕರಿಗಂತೂ ಒಳ್ಳೆ ಅವಕಾಶ.

  ದುಡ್ಡೇ ದೊಡ್ಡಪ್ಪ ಎನ್ನುವ ಈ ಕಾಲದಲ್ಲಿ ಎರಡು ವಾಹಿನಿಗಳ ಈ ಪೈಪೋಟಿ ನಡುವೆ ಇದರ ಲಾಭ ಪಡೆದವನೇ ಜಾಣ.

  English summary
  Udaya TV to start new game show shortly. Kaiyalli koti helbittu hodeeri is the title of this show. Jaggesh to host this game show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X