»   »  ಜೀ ಕನ್ನಡಕ್ಕೆ ಮೂರನೇ ಹುಟ್ಟುಹಬ್ಬದ ಸಂಭ್ರಮ

ಜೀ ಕನ್ನಡಕ್ಕೆ ಮೂರನೇ ಹುಟ್ಟುಹಬ್ಬದ ಸಂಭ್ರಮ

Subscribe to Filmibeat Kannada
Zee Kannada completes three years
ಕನ್ನಡಿಗರ ಕಣ್ಮಣಿ ಜೀ ಕನ್ನಡ, ಕರ್ನಾಟಕದ ಕಿರುತೆರೆಗೆ ಪಾದಾರ್ಪಣೆ ಮಾಡಿ ಈ ಮೇ 11ಕ್ಕೆ ಮೂರು ವರ್ಷಗಳನ್ನು ಪೂರೈಸಿದೆ. ಕರ್ನಾಟಕದ ಕಿರುತೆರೆಯಲ್ಲಿ ಹೊಸ ಕಾರ್ಯಕ್ರಮಗಳ ಹೊಸ ಅಲೆಯನ್ನೇ ಎಬ್ಬಿಸಿದ ಜೀ ಕನ್ನಡ ಇವತ್ತು ಕರ್ನಾಟಕದಾದ್ಯಂತ ಮನೆ ಮಾತಾಗಿದೆ.

ಕುಣಿಯೋಣು ಬಾರಾ, ಸರಿಗಮಪ ಲಿಟ್ಲ್‌ಚಾಂಪ್ಸ್, ರಾಕ್ ಆಂಡ್ ರೋಲ್ ಮುಂತಾದ ಉತ್ತಮ ಹಾಗೂ ಹೊಸ ರೀತಿಯ ಕಾರ್ಯಕ್ರಮಗಳ ಜೊತೆಗೆ ಇಲ್ಲಿರುವುದು ಸುಮ್ಮನೆ, ಜೋಗುಳ, ರೀತಿಯ ಉತ್ತಮ ಕಥಾ ಹಂದರ ಹಾಗೂ ಉತ್ತಮ ಅಭಿರುಚಿಯ ಧಾರಾವಾಹಿಗಳನ್ನೂ ದಾರಿ ದೀಪ ರೀತಿಯ ಜನಪ್ರಿಯ ಭವಿಷ್ಯ ದರ್ಪಣ ಕಾರ್ಯಕ್ರಮವನ್ನೂ ನೀಡುವ ಮೂಲಕ ಕರ್ನಾಟಕದ ನಂ 1 ವಾಹಿನಿಯಾಗುವತ್ತ ದಾಪುಗಾಲಿಕ್ಕುತ್ತಿದೆ.

ಡ್ಯಾಡಿ ನಂ 1 ರೀತಿಯ ಹೈ ಬಡ್ಜೆಟ್ ಕಾರ್ಯಕ್ರಮವನ್ನು ಕಿರುತೆರೆಗೆ ತಂದಿದ್ದಲ್ಲದೇ ಗುಣಗಾನ ರೀತಿಯ ಅತ್ಯುತ್ತಮ ಕ್ಲಾಸಿಕ್ ಕಾರ್ಯಕ್ರಮಗಳನ್ನೂ ಕರ್ನಾಟಕದಂತಹ ಸೀಮಿತ ಮಾರುಕಟ್ಟೆಯಲ್ಲೂ ಪರಿಚಯಿಸಿ ವೀಕ್ಷಕರಿಂದ ಸೈ ಎನಿಸಿಕೊಂಡಿದೆ. ಇಂದಿಗೂ ಕೂಡ ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್ ಕನ್ನಡ ಕಿರುತೆರೆಯ ನಂ 1 ಸಂಗೀತ ಕಾರ್ಯಕ್ರಮವಾಗಿದೆ. ಬಾಡಿಗೆ ತಾಯಿ ರೀತಿಯ ಸೂಕ್ಷ್ಮ ವಿಷಯವನ್ನು ಆಧಾರವಾಗಿರಿಸಿಕೊಂಡಿರುವ ಧಾರಾವಾಹಿ ಜೋಗುಳ ಮನೆ ಮನೆಯಲ್ಲಿ ಚರ್ಚಿತವಾಗುತ್ತಿದೆ. ವೀಕ್ಷಕರನ್ನು ಸೂಕ್ಷ್ಮ ಜಿಜ್ಞಾಸೆಗೆ ಈ ಧಾರಾವಾಹಿ ಒಳಪಡಿಸಿದೆ.

ಜೀ ಕನ್ನಡ ಮೂರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳು ಎಲ್ಲ ವೀಕ್ಷಕರನ್ನು ತಲುಪಲಿ ಎಂಬ ಉದ್ದೇಶ ಹಾಗೂ ಹೆಚ್ಚಿನ ವೀಕ್ಷಕರ ಒತ್ತಾಯದ ಮೇರೆಗೆ ಜೀ ಕನ್ನಡ ಮೇ 11ರಿಂದ ವಾರಪೂರ್ತಿ ಪ್ರತಿದಿನ ರಾತ್ರಿ 9 ಗಂಟೆಗೆ ರಿಯಾಲಿಟಿ ಹಾಗೂ ಗೇಮ್ ಶೋಗಳನ್ನು ಪ್ರಸಾರ ಮಾಡಲಿದೆ.

ಈ ವಾರದಿಂದ ಪ್ರತೀ ಸೋಮವಾರ ಮತ್ತು ಮಂಗಳವಾರ ರಾತ್ರಿ 9ಗಂಟೆಗೆ ಜೀ ಕನ್ನಡದ ಜನಪ್ರಿಯ ನಿರೂಪಕಿಯರ ನೃತ್ಯ ಇರುವ ಕುಣಿಯೋಣು ಬಾರಾ, ಬುಧವಾರ ಮತ್ತು ಗುರುವಾರ ರಾತ್ರಿ ಸಂಗೀತ ನೃತ್ಯದ ಜುಗಲ್‌ಬಂದಿಯ ರಾಕ್ ಅಂಡ್ ರೋಲ್, ಶುಕ್ರವಾರ ಡ್ಯಾಡಿ ನಂ 1, ಶನಿವಾರ ಮತ್ತು ಭಾನುವಾರ ಮರಿಕೋಗಿಲೆಗಳ ಗಾನ ಮಾಧುರ್ಯದ ಜನಪ್ರಿಯ ಸರಿಗಮಪ ಲಿಟ್ಲ್‌ಚಾಂಪ್ಸ್ ಪ್ರಸಾರವಾಗಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸೇತುರಾಮ್ ನಿರ್ದೇಶನದ ದಿಬ್ಬಣ ಬದಲಾದ ಸಮಯದಲ್ಲಿ, 8.30ಕ್ಕೆ ಜೋಗುಳ ಹಾಗೂ 10.30 ಕ್ಕೆ ಸಿಹಿ ಕಹಿ ಚಂದ್ರು ನಿರ್ದೇಶನದ ಪಾರ್ವತಿ ಪರಮೇಶ್ವರ ಹಾಸ್ಯ ಧಾರಾವಾಹಿ ಪ್ರಸಾರವಾಗಲಿದೆ.

ಡ್ಯಾಡಿ ನಂ 1 ರೀತಿಯ ಉತ್ತಮ ಕಾರ್ಯಕ್ರಮಗಳನ್ನು ನೀಡಿದ ಜೀ ಕನ್ನಡ ಇನ್ನೂ ಅದ್ದೂರಿ ಹಾಗೂ ಪ್ರೇಕ್ಷಕರು ಮೆಚ್ಚುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆ. ಜೀ ಕನ್ನಡದ ಯಶಸ್ಸಿನ ಪಯಣಕ್ಕೆ ಕರ್ನಾಟಕದ ಸಮಸ್ತ ವೀಕ್ಷಕರ ಪ್ರೋತ್ಸಾಹ ಸದಾ ಇರಲಿ ಎಂದು ಜೀ ಕನ್ನಡದ ಮುಖ್ಯಸ್ಥ ಜೆ.ಶೇಖರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ

ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾದ ಶ್ರುತಿ!
ಟಿವಿ 9 : ಚಕ್ರವ್ಯೂಹದಲ್ಲಿ ಸಿಲುಕಿದ ಶ್ರುತಿ
ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada