For Quick Alerts
  ALLOW NOTIFICATIONS  
  For Daily Alerts

  ಧಾರಾವಾಹಿ ರೂಪದಲ್ಲಿ ಕನ್ನಡ ಚಲನಚಿತ್ರಗಳು

  By Rajendra
  |

  ಬೆಂಗಳೂರು ದೂರದರ್ಶನ ಕೇಂದ್ರ 'ಚಂದನ ವಾಹಿನಿ' ತನ್ನ ವಿಭಿನ್ನ ಕಾರ್ಯಕ್ರಮ ಮೂಲಕ ಈಗಾಗಲೆ ಪ್ರೇಕ್ಷಕರ ಮನಗೆದ್ದಿದೆ. ಹೊಸ ಹೊಸ ಪ್ರಯೋಗಗಳಿಗೆ ಸದಾ ಮುಂದಿರುವ ಚಂದನ ವಾಹಿನಿ ಈಗ ಮತ್ತೊಂದು ವಿಭಿನ್ನ ಕಾರ್ಯಕ್ರವನ್ನು ಪ್ರಸಾರ ಮಾಡಲು ಮುಂದಾಗಿದೆ.

  ಹಳೆಯ ಸದಭಿರುಚಿಯ ಕನ್ನಡ ಚಿತ್ರಗಳನ್ನು ಧಾರಾವಾಹಿಯಾಗಿ ಪ್ರಸಾರ ಮಾಡಲು ಚಂದನ ವಾಹಿನಿ ಮುಂದಡಿಯಿಟ್ಟಿದೆ. ಹಳೆಯ ಹಿಟ್ ಚಿತ್ರವೊಂದನ್ನು ಐದು ಕಂತುಗಳಲ್ಲಿ ಪ್ರಸಾರ ಮಾಡಲಿದೆ. ಸೋಮವಾರದಿಂದ ಶುಕ್ರವಾರದತನಕ ಪ್ರತಿದಿನ ಸಂಜೆ 5.30ಕ್ಕೆ ಈ ಕಾರ್ಯಕ್ರಮ ನಿಮ್ಮ ನೆಚ್ಚಿನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  ಚಿತ್ರದ ಬಗೆಗಿನ ಮಹತ್ವದ ಮಾಹಿತಿಯ ಜೊತೆಜೊತೆಗೆ ಚಲನಚಿತ್ರವನ್ನು ನೋಡುವ ಸೌಭಾಗ್ಯ ಪ್ರೇಕ್ಷಕರಾಗಲಿದೆ. ಹಾಗೆಯೇ ಚಿತ್ರದ ಬಗ್ಗೆ ಇದುವರೆಗೂ ಗೊತ್ತಿರದ ಮಾಹಿತಿಯನ್ನು ಈ ಕಾರ್ಯಕ್ರಮದಲ್ಲಿ ನೀಡುತ್ತಿರುವುದು ವಿಶೇಷ. ಈಗಾಗಲೆ ಪುಟ್ಟಣ್ಣ ಕಣಗಾಲ್ ಅವರ 'ಧರ್ಮಸೆರೆ'(1979) ಚಿತ್ರವನ್ನು ಪ್ರಸಾರ ಮಾಡಲಾಗಿದೆ.

  ಈ ವಾರ(ಸೆ.13 ರಿಂದ ಸೆ.17) 1972ರಲ್ಲಿ ತೆರೆಕಂಡ 'ಸಿಪಾಯಿ ರಾಮು' ಚಿತ್ರ ಪ್ರಸಾರವಾಗಲಿದೆ. ವರನಟ ಡಾ.ರಾಜ್ ಕುಮಾರ್, ಲೀಲಾವತಿ, ತೂಗುದೀಪ ಶ್ರೀನಿವಾಸ್, ಅಶ್ವತ್ಥ್, ವಜ್ರಮುನಿ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ವೈ ಆರ್ ಸ್ವಾಮಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸುಮಧುರ ಗೀತೆಗಳಿಗೆ, ಮೈನವಿರೇಳಿಸುವ ಸಾಹಸ ಸಂಯೋಜನೆಯಿಂದ ಚಿತ್ರ ರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದ ಚಿತ್ರ.

  ಹಳೆಯ ಕನ್ನಡ ಚಲನಚಿತ್ರಗಳಾದ'ಎರಡು ಕನಸು', 'ಭುಜಂಗಯ್ಯನ ದಶಾವತಾರ' ಮತ್ತು 'ಹಂಸಗೀತೆ' ಚಿತ್ರಗಳು ಧಾರಾವಾಹಿ ರೂಪದಲ್ಲಿ ಪ್ರಸಾರವಾಗಲಿವೆ. ಈ ಕಾರ್ಯಕ್ರಮವನ್ನು ಮಂಗಳ ನಾಗರಾಜ್ ಅವರು ನಿರೂಪಿಸಲಿದ್ದಾರೆ. ಕಾರ್ಯಕ್ರಮಕ್ಕೆ ಚಿತ್ರಸಾಹಿತ್ಯ ಒದಗಿಸುತ್ತಿರುವವರು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X