»   » ಜೀ ಕನ್ನಡದಲ್ಲಿ 'ಮಳೆ ಬರಲಿ ಮಂಜು ಇರಲಿ'

ಜೀ ಕನ್ನಡದಲ್ಲಿ 'ಮಳೆ ಬರಲಿ ಮಂಜು ಇರಲಿ'

Subscribe to Filmibeat Kannada

ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 2009ನೇ ಸಾಲಿನ ಒಳ್ಳೆಯ ಚಲನಚಿತ್ರ 'ಮಳೆ ಬರಲಿ ಮಂಜು ಇರಲಿ', ಸಂಕ್ರಾಂತಿ ಹಬ್ಬದ ವಿಶೇಷಗಳಲ್ಲೊಂದಾಗಿ ಜನವರಿ 14ರ ಗುರುವಾರ ಸಂಜೆ 4 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ನವಿರಾದ ಪ್ರೇಮ ಕಥಾನಕವುಳ್ಳ ಮಳೆ ಬರಲಿ ಮಂಜು ಇರಲಿ ಚಿತ್ರ, ನಿರ್ದೇಶಕರ ಎರಡನೇ ಚಿತ್ರವಾಗಿದ್ದು, ಶಾಸ್ತ್ರೀಯ ಶೈಲಿಯಲ್ಲಿ ನಿರೂಪಿಸಲಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಷ್ಟೇ ತೆರೆಕಂಡಿದ್ದ ಚಿತ್ರ, ಹೆಣ್ಣಿನಂತರಂಗದ ಭಾವನೆಗಳನ್ನೇ ಪ್ರಧಾನವಾಗಿರಿಸಿಕೊಂಡಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರದಲ್ಲಿ ಮಲೆನಾಡಿನ ಪ್ರಕೃತಿ ಐಸಿರಿಯ ನಡುವೆ ಅತ್ಯಂತ ಮನಮೋಹಕವಾಗಿ ಚಿತ್ರಿಸಲಾಗಿದೆ. 2009ನೇ ಸಾಲಿನಲ್ಲಿ ಸಾಲು ಸಾಲು ಚಿತ್ರಗಳು ಸೋಲುಂಡಿದ್ದರೂ ಮಳೆ ಬರಲಿ ಮಂಜು ಇರಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡುವಲ್ಲಿ ಹಿಂದೆ ಬಿದ್ದಿರಲಿಲ್ಲ.

ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಯೋಜಿಸಿರುವ ಮಧುರವಾದ ಹಾಡುಗಳಿವೆ. ಚಿತ್ರದ ಬಹಳಷ್ಟು ಭಾಗವನ್ನು ಸಕಲೇಶಪುರ, ಚಿಕ್ಕಮಗಳೂರಿನ ಮಲೆನಾಡಿನ ಭಾಗಗಳಲ್ಲಿ ಚಿತ್ರಿಸಲಾಗಿದ್ದು ಕಣ್ಣಿಗೆ ಸೌಂದರ್ಯದ ಹಬ್ಬ ಹೂರಣ ಉಣಬಡಿಸಲಿದೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಪಾರ್ವತಿ ಮೆನನ್, ನಾಗಕಿರಣ್ ಹಾಗೂ ಜೈಜಗದೀಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಹಿಟ್ ಹಾಗೂ ಅದ್ದೂರಿ ಚಿತ್ರಗಳನ್ನು ಬಹು ಬೇಗ ನಾಡಿನ ಪ್ರೇಕ್ಷಕ ಮಹಾಶಯರಿಗೆ ತಲುಪಿಸುವಲ್ಲಿ ಸದಾ ಮುಂದಿರುವ ಕನ್ನಡಿಗರ ಕಣ್ಮಣಿ ಜೀ ಕನ್ನಡ 2009ನೇ ಸಾಲಿನ ಹೊಚ್ಚ ಹೊಸ ಸೂಪರ್ ಡೂಪರ್ ಚಿತ್ರವೊಂದನ್ನು ಪುನಹ ತನ್ನ ವೀಕ್ಷಕರ ಮನೆ ಮನೆಗೆ ಹಬ್ಬದ ಸಂಭ್ರಮದೊಂದಿಗೆ ಈ ಮೂಲಕ ತರುತ್ತಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada