»   » ಸುವರ್ಣದಲ್ಲಿ 'ಗಾಳಿಪಟ'; ಕಸ್ತೂರಿಯಲ್ಲಿ 'ಈ ಬಂಧನ'

ಸುವರ್ಣದಲ್ಲಿ 'ಗಾಳಿಪಟ'; ಕಸ್ತೂರಿಯಲ್ಲಿ 'ಈ ಬಂಧನ'

Subscribe to Filmibeat Kannada

ಹಬ್ಬ ಹರಿದಿನ, ಬಿಡುವಿನ ದಿನಗಳಂದು ಟಿವಿ ವಾಹಿನಿಗಳು ಪೈಪೋಟಿಗೆ ಬಿದ್ದಂತೆ ಹಿಟ್ ಚಿತ್ರಗಳನ್ನು ಪ್ರಸಾರ ಮಾಡುವುದು ವಾಡಿಕೆ. ಆದರೆ ಈ ಬಾರಿ ಸುವರ್ಣ ವಾಹಿನಿ ಹೊರತು ಪಡಿಸಿ ಉಳಿದ ಚಾನಲ್ ನಲ್ಲಿ ಈ ಹಿಂದೆ ಬಂದ ಚಿತ್ರಗಳೇ ಮರು ಪ್ರಸಾರಗೊಳ್ಳುತ್ತಿದೆ. 2008 ರಲ್ಲಿ ಯೋಗರಾಜ್ ಭಟ್ - ಗಣೇಶ್ ಕಾಂಬಿನೇಶನ್ ನಲ್ಲಿ ಬಂದ ಸೂಪರ್ ಹಿಟ್ ಚಿತ್ರ'ಗಾಳಿಪಟ' ಚಿತ್ರ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.

ಉದಯ ವಾಹಿನಿಯಲ್ಲಿ ಮಾದೇಶ
'ಸಂತ' ಚಿತ್ರದ ನಂತರ ಶಿವರಾಜ್ ಕುಮಾರ್ ಇಲ್ಲಿ ಮತ್ತೊಮ್ಮೆ ಭೂಗತ ಲೋಕದ ವ್ಯಕ್ತಿಯಾಗಿ ಅವತಾರವೆತ್ತಿದ್ದಾರೆ. ಚಿತ್ರಕ್ಕಾಗಿ ಅವರ ಚಹರೆ ಸಹ ಬದಲಾಗಿದೆ. ಸಾಕಷ್ಟು ವಿವಾದಗಳು ಚಿತ್ರಕ್ಕೆ ಸುತ್ತಿಕೊಂಡು ಬಿಡುಗಡೆಯಾದ ಚಿತ್ರ. ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಮನೋಮೂರ್ತಿ ಸಂಗೀತ. ಚಿತ್ರದ ತಾರಾ ಬಳಗದಲ್ಲಿ ಸೋನು ಭಾಟಿಯಾ, ರವಿ ಬೆಳಗೆರೆ, ರವಿ ಕಾಳೆ, ರಮೇಶ್ ಪಂಡಿತ್, ಹರೀಶ್ ರೈ, ಪದ್ಮಜಾ ರಾವ್, ದತ್ತಣ್ಣ, ಬುಲ್ಲೆಟ್ ಪ್ರಕಾಶ್, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ. ಜಗ್ಗೇಶರ ಪುತ್ರ ಯತಿ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಮಾದೇಶ ಚಿತ್ರದ ವಿಮರ್ಶೆ

ಸುವರ್ಣ ವಾಹಿನಿಯಲ್ಲಿ ಗಾಳಿಪಟ
ಸುವರ್ಣ ವಾಹಿನಿ ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ' ಚಿತ್ರವನ್ನು ಸಂಕ್ರಾಂತಿ ಕಾಣಿಕೆಯಾಗಿ ಪ್ರೇಕ್ಷಕರಿಗೆ ನೀಡುತ್ತಿದೆ. ಜ.14ರಂದು ಮಧ್ಯಾಹ್ನ 1 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಗಣೇಶ್, ದಿಗಂತ್, ರಾಜೇಶ್ ಕೃಷ್ಣ, ಅನಂತ್ ನಾಗ್, ಡೈಸಿ ಬೋಪಣ್ಣ ಚಿತ್ರದ ತಾರಾಬಳಗದಲ್ಲಿದ್ದಾರೆ. ಬ್ಲಾಗ್‌ಮಂಡಲದಲ್ಲಿ ಗಾಳಿಪಟ ಚಿತ್ರವಿಮರ್ಶೆ

ಕಸ್ತೂರಿಯಲ್ಲಿ ಈ ಬಂಧನ
ಲಾಂಗು, ಮಚ್ಚು ಚಿತ್ರಗಳ ನಡುವೆ ಕೌಟುಂಬಿಕ ಕಥಾಹಂದರದ ಚಿತ್ರ ಈ ಬಂಧನ. ಈ ಚಿತ್ರಕ್ಕೆ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ. ಜ.14ರಂದು ಕಸೂರಿ ವಾಹಿನಿಯಲ್ಲಿ ಸಂಜೆ 5ಗಂಟೆಗೆ ಪ್ರಸಾರವಾಗಲಿದೆ. ತಾರಾ ಬಳಗದಲ್ಲಿ ವಿಷ್ಣು, ಜಯಪ್ರದಾ ಜೊತೆಗೆ ದರ್ಶನ್, ಜೆನಿಫರ್, ವೈಭವಿ, ಆರುಂಧತಿ ಜಟ್ಕರ್ ಸಹ ಅಭಿನಯಿಸಿದ್ದಾರೆ. ಚಿತ್ರ ನೋಡುವ ಮುನ್ನ ಈ ಬಂಧನ ಚಿತ್ರ ವಿಮರ್ಶೆ ಮೇಲೆ ಕಣ್ಣಾಡಿಸಲೂ ಬಹುದು.

ಜೀ ಕನ್ನಡದಲ್ಲಿ 'ಮಳೆ ಬರಲಿ ಮಂಜು ಇರಲಿ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada