»   » ಡಬ್ಬಿಂಗ್ ನಿಷೇಧ ಎಂಬ ಅಡ್ಡಗೋಡೆ ಇನ್ನೆಷ್ಟು ದಿನ?

ಡಬ್ಬಿಂಗ್ ನಿಷೇಧ ಎಂಬ ಅಡ್ಡಗೋಡೆ ಇನ್ನೆಷ್ಟು ದಿನ?

Posted By: * ಮಹೇಶ್ ಎಂ.ಆರ್. ಬೆಂಗಳೂರು
Subscribe to Filmibeat Kannada
  Dubbing in KFI and Television
  ನಮ್ಮನ್ನು ಕನ್ನಡದಿಂದ ದೂರ ಸರಿಸುವ ಈ ಕಟ್ಟುಪಾಡನ್ನು ನಾವು ಒಪ್ಪಿಕೊಳ್ಳಬೇಕೇ.?

  ಹಿಸ್ಟರಿ ಟಿವಿ 18 ಎಂಬ ಚಾನಲ್ ಇಂಗ್ಲೀಷ್ ಜೊತೆಗೆ ಹಿಂದಿ ಸೇರಿದಂತೆ ಭಾರತದ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಇತ್ತೀಚಿಗೆ ಹೊರಬಿತ್ತು. ಭಾರತದಲ್ಲಿ ಒಟ್ಟು ಆರು ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಇಂಗ್ಲೀಷ್, ತೆಲುಗು, ಬೆಂಗಾಲಿ, ಮರಾಠಿ, ತಮಿಳು ಮತ್ತು ಹಿಂದಿಯಲ್ಲಿ ಲಭ್ಯವಿದೆ. ಆದರೆ ಈ ಸೌಲಭ್ಯ 6 ಕೋಟಿಗಿಂತಲೂ ಹೆಚ್ಚು ಗ್ರಾಹಕರಿರುವ ಕನ್ನಡಕ್ಕೆ ಮಾತ್ರ ಲಭ್ಯವಿಲ್ಲ.

  ಡಬ್ಬಿಂಗ್ ನಿಷೇಧ ಎಂಬ ಅಡ್ಡಗೋಡೆ: ಭಾರತದ ಪ್ರಮುಖ ಭಾಷೆಯಾಗಿರುವ ಮತ್ತು ಕೋಟಿಗಟ್ಟಲೇ ಗ್ರಾಹಕರಿರುವ ಒಂದು ಭಾಷೆಯಲ್ಲಿ ಸೇವೆ ಒದಗಿಸದೇ ಇರಲು ಕಾರಣವೇನು.? ಕನ್ನಡಿಗರು ಹಿಸ್ಟರಿ ಚಾನಲ್ ಒದಗಿಸುವ ಮನರಂಜನೆಯನ್ನು ಕನ್ನಡದಲ್ಲಿ ಪಡೆಯಬಾರದೇಕೇ ಎಂದು ಅನೇಕ ಗ್ರಾಹಕರು ಅವರ ಫೇಸಬುಕ್ ಖಾತೆ ಮೂಲಕ ಕೇಳಿದಾಗ ಅವರು ಕೊಟ್ಟ ಉತ್ತರ ಸರಕು ನಿಯಮ ಪ್ರಕಾರ ಕರ್ನಾಟಕದಲ್ಲಿ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಡಬ್ಬಿಂಗ್ ನಿಷೇಧ ಇದೆ.

  ಆದರೆ ಎಲ್ಲ ಕಡೆಗಳಲ್ಲೂ ಇಂಗ್ಲೀಶ್ ಹಿಂದಿಯಲ್ಲಿ ಲಭ್ಯವಿದೆ ಎಂದು. ಯಾರೋ ಕೆಲವರು ತಮ್ಮ ಸ್ವಹಿತಾಸಕ್ತಿಗೆ ಅನುಗುಣವಾಗಿ ಮಾಡಿರುವ ಒಂದು ನಿಯಮ ಇವತ್ತು ನಮಗೆ ಜಗತ್ತಿನ ಅನೇಕ ಶೈಕ್ಷಣಿಕ ಉಪಯುಕ್ತ ಮಾಹಿತಿಗಳನ್ನು, ವಿಸ್ಮಯಕಾರಿ ಸಂಗತಿಗಳನ್ನು, ಒಳ್ಳೆಯ ಮನರಂಜನೆಯನ್ನು ನಾವಾಡುವ ನುಡಿಯಲ್ಲಿ ಪಡೆದುಕೊಳ್ಳಲು ಬಿಡುತ್ತಿಲ್ಲ ಎಂದರೆ ಅದಕ್ಕಿಂತ ದುರಂತ ಮತ್ತೇನಿದೆ ಗೆಳೆಯರೇ.

  ಇಂಗ್ಲೀಶ್, ತೆಲುಗು, ಬೆಂಗಾಲಿ, ಮರಾಠಿ, ತಮಿಳು ಮತ್ತು ಹಿಂದಿ ಬಲ್ಲವರಿಗೆ ಇರುವ ಸೌಕರ್ಯವನ್ನು ಕನ್ನಡ ಬಲ್ಲವರಿಗೆ ಸಿಗದ ಹಾಗೆ ಮಾಡುವುದು ಒಂದು ಸಾಮಾಜಿಕ ಚಿಂತನೆಯುಳ್ಳ ಕಟ್ಟುಪಾಡೇ ಅಥವಾ ಹುನ್ನಾರದ ಕಟ್ಟುಪಾಡೇ.

  ಅನೇಕ ವಾಹಿನಿಯವರು ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರಮಾಡಲು ತಯಾರಾಗಿದ್ದರೂ ಅದನ್ನು ತಡೆಯುವುದು ಜನಾಬಿಪ್ರಾಯದ ಕಟ್ಟುಪಾಡೇ.? ಅಥವಾ ಪಾಳೆಗಾರಿಕೆಯ ಕಟ್ಟುಪಾಡೇ.? ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆ ಸಿಗದ ಹಾಗೆ ನಿಯಮ ಮಾಡುವುದು ಕನ್ನಡಪರ ಕಟ್ಟುಪಾಡೇ ಅಥವಾ ಕನ್ನಡ ವಿರೋದಿ ಕಟ್ಟುಪಾಡೇ.?

  ಇಷ್ಟಕ್ಕೂ ನೂರು ಕಟ್ಟುಪಾಡುಗಳಿದ್ದರೂ ನನ್ನಂಥ ಸಾಮಾನ್ಯ ಕನ್ನಡ ಗ್ರಾಹಕನಿಗೆ ಬೇಡವಾದದ್ದು. ಹಿಸ್ಟರಿ ವಾಹಿನಿಯನ್ನು ಕನ್ನಡದಲ್ಲೇ ನೋಡಬೇಕೆನ್ನುವ ಹಂಬಲ ಅವನದು. ಕೆಲವರು ಮಾಡುವ ಕಟ್ಟುಪಾಡು, ಡಬ್ಬಿಂಗಿನಿಂದ ಒದಗಬಹುದಾದ ಸಮಸ್ಯೆ, ತುಟಿ ಚಲನೆ ಸಮಸ್ಯೆ, ಭಾಷೆಯ ಬುಡಕ್ಕೆ ಪೆಟ್ಟು, ಸಂಸ್ಕ್ರುತಿ ನಾಶ ಈ ತರಹದ ಕಂಡು ಕೇಳರಿಯದ ಸಂಗತಿಗಳು ಅವನಿಗೆ ಅಪ್ರಸ್ತುತ.

  ತನ್ನನ್ನು ಕನ್ನಡದಿಂದ ಸಿಗುವ ಸೌಲಭ್ಯದಿಂದ ದೂರ ಸರಿಸುವ ಯಾವುದೇ ಕಟ್ಟುಪಾಡನ್ನು ಅವನು ಒಪ್ಪುವುದಿಲ್ಲ. ಕನ್ನಡ ಸಮಾಜದ ಹೆಸರಿನಲ್ಲಿ ಕಟ್ಟುಪಾಡು ಮಾಡಿಕೊಂಡು ತನಗೆ ಕನ್ನಡದಲ್ಲಿ ಮನರಂಜನೆ, ಮಾಹಿತಿ, ವಿಷಯಗಳು ದೊರಕದ ಹಾಗೆ ಮಾಡುತ್ತಿರುವವರಲ್ಲೇ ಅವನಿಗೆ ಹುನ್ನಾರ ಎದ್ದು ಕಾಣುತ್ತದೆ ಹೊರತು ಕನ್ನಡದಲ್ಲಿ ಸೇವೆ ಒದಗಿಸಲು ಮುಂದೆ ಬರುವ ಬಂಡವಾಳಶಾಹಿಗಳಲ್ಲಲ್ಲ.!

  ಡಬ್ಬಿಂಗ್ ನಿಷೇಧ ಎಂಬ ಕನ್ನಡ ವಿರೋಧಿ ಕಟ್ಟುಪಾಡು ಕೊನೆಗೊಳ್ಳಲಿ. ಎಲ್ಲ ಕನ್ನಡಿಗರಿಗೂ ಕನ್ನಡದಲ್ಲಿ ಮನರಂಜನೆ ಸಿಗುವಂತಾಗಲಿ. ಗ್ರಾಹಕನಿಗೆ ಆಯ್ಕೆ ಸ್ವಾತಂತ್ರ್ಯ ದೊರೆಯಲಿ.

  English summary
  Histroy channel 18 is now available in Tamil, Telugu and other regional languages but Kannada is kept aside. Due to this negative attitude Kannada children are missing information needed. Ban on Dubbing should be revoked at least for scientific and Environmental programs reports Citizen Journalist Mahesh MR

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more