ಬಿಗ್ ಬಾಸ್ ಗೆ ಬಾಂಬ್ ಶೆಲ್ ಪಮೇಲಾ ಎಂಟ್ರಿ

ಲೋನಾವಾಲಾದಲ್ಲಿ ಬಿಗ್‌ಬಾಸ್ ಚಿತ್ರೀಕರಣ ನಡೆಯುತ್ತಿದೆ. ಜನಪ್ರಿಯ ಬ್ರಿಟಿಷ್ ರಿಯಾಲಿಟಿ ಶೋ ಬಿಗ್ ಬ್ರದರ್‌ಗೆ ಪ್ರತಿಯಾಗಿ ಭಾರತದಲ್ಲಿ ಬಿಗ್‌ಬಾಸ್ ಷೋ ಆರಂಭವಾಗಿದ್ದು, ಪ್ರತಿ ಕಂತಿನಲ್ಲೂ ಒಂದಲ್ಲಾ ಒಂದು ಗಲಾಟೆ ಇಲ್ಲದೆ ಮುಗಿಯುವುದಿಲ್ಲ. 3 ತಿಂಗಳ ಕಾಲ ಹೊರ ಜಗತ್ತಿನೊಂದಿಗೆ ಸಂಪರ್ಕ ಬೆಳೆಸದೆ ಬಿಗ್‌ಬಾಸ್ ಮನೆಯೊಳಗೆ ಮೊಕ್ಕಾಂ ಹೂಡುವ ಸ್ಫರ್ಧಿಗಳ ಚಲನವಲನಗಳ ಮೇಲೆ ಕನಿಷ್ಠ 60-70 ಕ್ಯಾಮರಾಗಳು ಕಣ್ಣಿಟ್ಟಿರುತ್ತವೆ.
ಪಮೇಲಾಗೂ ಮುಂಚೆ ಕೆಲ್ಲಿ ಬ್ರೂಕ್ ಗೆ ಭಾರಿ ಮೊತ್ತ ನೀಡಿ ಬಿಗ್ ಬಾಸ್ 4 ಮನೆಗೆ ಕರೆತರಲು ಕಲರ್ಸ್ ವಾಹಿನಿ ವಿಫಲ ಯತ್ನ ನಡೆಸಿತ್ತು. ಡಬ್ಲ್ಯೂಡಬ್ಲ್ಯೂಇ ಕುಸ್ತಿಪಟು ಗ್ರೇಟ್ ಖಲಿಯ ನಂತರ ಮನೆ ಹೊಕ್ಕ ಡಾಲಿ ಬಿಂದ್ರಾ ಯಾವುದೇ ಕಟ್ಟುಪಾಡಿಲ್ಲದೆ ಗಂಡು ಹೆಣ್ಣಿನ ವ್ಯತ್ಯಾಸವಿಲ್ಲದೆ ಸೊಂಟದ ಕೆಳಗಿನ ಭಾಷೆ ಬಳಸುತ್ತಾ ಎಲ್ಲರಿಗೂ ಕಿರಿಕಿರಿ ಉಂಟು ಮಾಡಿದ್ದಾರೆ.
ಆದರೂ, ಗಲಾಟೆ, ಕದನ, ರೋಮಾನ್ಸ್ ಇದ್ದರೆ ಟಿಆರ್ ಪಿ ಹೆಚ್ಚಿಸಲು ಸಾಧ್ಯ ಎಂದು ನಂಬಿರುವ ವಾಹಿನಿ, ವೀಣಾ ಮಲ್ಲಿಕ್ ಪ್ರೇಮ, ಸಾರಾ ಮದುವೆ ಎಲ್ಲವೂ ಸಾಂಗವಾಗಿ ನಡೆಯಲು ಬಿಟ್ಟು, ಇದೇನೂ ರೀಲೋ, ರಿಯಲ್ಲೋ ತಿಳಿಯದಂತೆ ಮಾಡಿದೆ. ಪ್ಲೇ ಬಾಯ್ ಮಾಡೆಲ್ ಪಮೇಲಾ ಎಂಟ್ರಿ ಖಚಿತವಗಿದ್ದರೂ, ಎಷ್ಟು ದಿನ ಅಡ್ಜೆಸ್ಟ್ ಮಾಡಿಕೊಂಡು ಉಳಿಯುತ್ತಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ನಾಲ್ಕು ಕೋಟಿ ಕೊಟ್ಟರೂ ಬಿಗ್ ಬಾಸ್ ಮನೆಯಲ್ಲಿ ರಾತ್ರಿ ಉಳಿದುಕೊಳ್ಳೋದಕ್ಕೆ ಪಮೇಲಾ ಒಲ್ಲೆ ಅಂದಳಂತೆ. ಪಮೇಲಾಗೆ ಪ್ರತ್ಯೇಕ ಬಂಗ್ಲೆ ಕೊಡುವ ಬಗ್ಗೆ ಚಿಂತನೆ ನಡೆದಿದೆ.


Click it and Unblock the Notifications











