»   » ರಿಯಾಲಿಟಿ ಶೋನಲ್ಲಿ ಟೈಗರ್ ವುಡ್ಸ್ ರಾಸಲೀಲೆಗಳು

ರಿಯಾಲಿಟಿ ಶೋನಲ್ಲಿ ಟೈಗರ್ ವುಡ್ಸ್ ರಾಸಲೀಲೆಗಳು

Posted By:
Subscribe to Filmibeat Kannada
Tiger Woods
ಅಂತೂ ಇಂತೂ ಖ್ಯಾತ ಗಾಲ್ಫ್ ಪಟು ಟೈಗರ್ ವುಡ್ಸ್ ರಾಸಲೀಲೆಗಳು ಜನಪ್ರಿಯ ರಿಯಾಲಿಟಿ ಶೋ ಒಂದರಲ್ಲಿ ಬಯಲಾಗಲು ಮುಹೂರ್ತ ನಿಗದಿಯಾಗಿದೆ. ಇದನ್ನು ಬಯಲು ಮಾಡಲಿರುವವರು ಬೇರಾರು ಅಲ್ಲ , ಆತನ ಮೊದಲ ಪತ್ನಿ ರಾಚೆಲ್ ಯುಚಿಟೆಲ್.

ಜನಪ್ರಿಯ ರಿಯಾಲಿಟಿ ಶೋ ಸೆಲೆಬ್ರಿಟಿ ಬಿಗ್ ಬ್ರದರ್‌ನ ನಿರ್ಮಾಪಕರನ್ನು ಈಗಾಗಲೆ ಆಕೆ ಸಂಪರ್ಕಿಸಿದ್ದು, ತಮ್ಮ ಬಹು 'ಪತ್ನಿ' ವಲ್ಲಭನ ಘನಂದಾರಿ ಕೆಲಸಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಈ ರಸಿಕ ಮಹಾಶಯನ ಸೆಕ್ಸ್ ಸೀಕ್ರೆಟ್‌ಗಳು ಜಗಜ್ಜಾಹೀರು ಮಾಡುವುದಾಗಿ ಆಕೆ ತಿಳಿಸಿದ್ದಾರೆ.

"ಈಕೆ ನಮ್ಮ ಕಾರ್ಯಕ್ರಮಕ್ಕೆ ಡೈನಮೇಟ್ ಇದ್ದಂತೆ. ಕ್ರೀಡೆಯಲ್ಲಿ ಟೈಗರ್ ವುಡ್ಸ್ ಕ್ಲೀನ್ ಮನುಷ್ಯ. ಆತನ ಬಗ್ಗೆ ಆತನ ಪತ್ನಿ ಮಾತನಾಡಲಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ" ಎಂದು ಸೆಲೆಬ್ರಿಟಿ ಬಿಗ್ ಬ್ರದರ್ ನಿರ್ಮಾಪಕರು ತಿಳಿಸಿದ್ದಾಗಿ ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. (ಏಜೆನ್ಸೀಸ್)

English summary
Tiger Woods’ first mistress Rachel Uchitel is in advanced talks with the producers of the Celebrity Big Brother show, who hope that the hot television correspondent will finally spill the beans on her romps with the ace golfer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada