»   »  ಜೀ ಕನ್ನಡ ಜೋಗುಳಕ್ಕೆನೂರರ ಸಂಭ್ರಮ

ಜೀ ಕನ್ನಡ ಜೋಗುಳಕ್ಕೆನೂರರ ಸಂಭ್ರಮ

Subscribe to Filmibeat Kannada
Zee Kannada tele serial Jogula
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಜೋಗುಳ' ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ. ಮದುವೆಯಾಗಿ ಒಂಭತ್ತು ವರ್ಷಗಳಾದರೂ ಮಕ್ಕಳಾಗದೆ, ಮಗುವಿಗಾಗಿ ತೀವ್ರವಾಗಿ ಹಂಬಲಿಸುವ ಹೆಣ್ಣೊಬ್ಬಳು ತನ್ನ ಆಸೆ ಪೂರೈಕೆಗಾಗಿ ಬಾಡಿಗೆ ತಾಯಿಯನ್ನು ಪಡೆದು ಮಗು ಹೊಂದುವ ಪ್ರಕೃತಿ ವಿರುದ್ಧ ಕೆಲಸಕ್ಕೆ ಕೈಯಿಕ್ಕುತ್ತಾಳೆ. ಇಲ್ಲಿ ಬಾಡಿಗೆ ತಾಯಿಯ ಬವಣೆ ಹಾಗೂ ಮಗು ಪಡೆಯಲು ಇಚ್ಚಿಸಿದವಳು ಎದುರಿಸುವ ನೈತಿಕ ಪ್ರಶ್ನೆಗಳ ಹೊಯ್ದಾಟದ ತುಮುಲಗಳು ಕಥೆಯಾಗಿ ತೆರೆದುಕೊಂಡು ವೀಕ್ಷಕರ ಮೆಚ್ಚುಗೆ ಗಳಿಸಿದೆ.

ಹಳೇಬೀಡಿನ ಹುಡುಗಿ ದೇವಕಿ ಕಾಲ್‌ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಾ ಬೆಂಗಳೂರಿನಲ್ಲಿ ಅಣ್ಣನ ಮನೆಯಲ್ಲಿರುತ್ತಾಳೆ. ಸ್ನೇಹಿತ-ಪ್ರಿಯಕರ ವಾಸುವಿನ ಅಮೆರಿಕಾ ಕನಸನ್ನು ನನಸು ಮಾಡಲು ಹಣಕ್ಕಾಗಿ ದೇವಕಿ ಬಾಡಿಗೆ ತಾಯಿಗಾಗಿ ಹುಡುಕುತ್ತಿರುವ ರಘು-ಯಶೋಧಾರ ಮಗುವಿಗೆ ತಾಯಿಯಾಗಲು ಒಪ್ಪಿಕೊಳ್ಳುತ್ತಾಳೆ. ಮೊದಲು ಮುಂಬೈಲ್ಲಿ ಕೆಲಸ ಸಿಕ್ಕಿದೆ ಎಂದು ಸುಳ್ಳು ಹೇಳಿ ಎಲ್ಲರನ್ನೂ ನಂಬಿಸಿ ದೇವಕಿ ಮನೆಗೆ ಬರುವ ಯಶೋಧಾ ನಂತರ ಒಂದರ ಮೇಲೊಂದು ಸುಳ್ಳನ್ನು ಹೆಣೆಯುತ್ತಾ ಅದರಲ್ಲಿ ಸಿಕ್ಕು ನರಳಬೇಕಾಗುತ್ತದೆ.

ದೇವಕಿ ಪಾತ್ರದಲ್ಲಿ ಜ್ಯೋತಿ ರೈ, ಯಶೋಧಾ ಪಾತ್ರದಲ್ಲಿ ನಂದಿನಿ ಆರ್ಯನ್ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಹೊರದೇಶಗಳಲ್ಲಿ ಬಾಡಿಗೆ ತಾಯಿ ಪ್ರಕರಣಗಳು ಸಾಕಷ್ಟು ಕೇಳಿ ಬರುತ್ತಿದೆ. ನಮ್ಮ ದೇಶದಲ್ಲೂ ಕೂಡ ಅಂತಹ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ವಿಜ್ಞಾನದ ದೃಷ್ಟಿಯಲ್ಲಿ ಬಾಡಿಗೆತಾಯಿಯಾಗುವುದು ಒಂದು ಸರಳ ಪ್ರಕ್ರಿಯೆ. ಹಾಗೆಯೇ ಮಗು ಬೇಕಾದವರಿಗೆ ಅದೊಂದು ವ್ಯವಹಾರ-ಕಾಂಟ್ರ್ಯಾಕ್ಟ್ ಅಷ್ಟೆ. ಆದರೆ ಇನ್ನೊಬ್ಬರ ಮಗುವನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು ಕೊಡುವ ಮಹಿಳೆಯ ಮಾನಸಿಕ ಸ್ಥಿತಿಯನ್ನು ತೆರೆದಿಡುವಲ್ಲಿ ಜೋಗುಳ ಯಶಸ್ವಿಯಾಗಿದೆ.

ಕಿರುತೆರೆ ಧಾರಾವಹಿಗಳ ಮಟ್ಟಿಗೆ ಹೊಸ ಭಾಷ್ಯ ಬರೆದ ಧಾರಾವಾಹಿ ಜೋಗುಳ, ಎಲ್ಲ ರೀತಿಯಿಂದಲೂ ಉಳಿದ ಧಾರಾವಾಹಿಗಳಿಗಿಂತ ಭಿನ್ನ. ವಿನುಬಳಂಜ ಅವರ ಉತ್ತಮ ನಿರ್ದೇಶನ, ಎ.ಎನ್ ಪ್ರಭಾಕರ್ ಮತ್ತು ಮಂಜು ಮಂಡ್ಯ ಅವರ ಉತ್ತಮ ಛಾಯಾಗ್ರಹಣ, ಹಾಗೂ ಉತ್ತಮ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ. ಜೋಗುಳ ಈ ಎಲ್ಲಾ ಕಾರಣಗಳಿಂದ ಜನರ ಮೆಚ್ಚುಗೆ ಗಳಿಸಿದೆ ಎಂದು ಜೀ ಕನ್ನಡ ಮುಖ್ಯಸ್ಥ ಶೇಖರ್.ಜೆ ಹೇಳಿದ್ದಾರೆ.

ಜೋಗುಳ ತಾರಾಗಣದಲ್ಲಿ ಖ್ಯಾತ ಕಿರುತೆರೆ ನಟಿ ಅಪರ್ಣಾ, ನಂದಿನಿ ಆರ್ಯನ್, ಜ್ಯೋತಿ ರೈ, ಮಂಜುನಾಥ್ ಹೆಗಡೆ, ಸುರೇಶ್ ರೈ, ಹಿರಣ್ಣಯ್ಯ ಹಾರ್ನಳ್ಳಿ, ಸುರೇಶ್ ಮಂಗಳೂರು, ಸುಂದರಶ್ರೀ, ಸಿದ್ಧರಾಜ್ ಕಲ್ಯಾಣ್‌ಕರ್, ಮಧು ಹೆಗಡೆ, ಗ್ರೀಷ್ಮಾ, ನಿಷಿತಾ ಗೌಡ್, ಶಾಂತಲಾ ಕಾಮತ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸನ್ ನೆಟ್ವರ್ಕ್ ನಿಂದ ಮತ್ತೊಂದು ಚಾನೆಲ್
ಸನ್ ನೆಟ್ ವರ್ಕ್ ನಿಂದ ಮತ್ತೊಂದು ಕನ್ನಡ ಟಿವಿ
'ಡಾ.ರಾಜ್ ಜೀವನಧಾರೆ' ಡಿವಿಡಿ ಬಿಡುಗಡೆ
ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada