ಕನ್ನಡದಲ್ಲೂ ಅಮೀರ್ ಸತ್ಯಮೇವ ಜಯತೇ ಡಬ್ಬಿಂಗ್
ರಾಮಾಯಣ, ಮಹಾಭಾರತ, ಚಂದ್ರಕಾಂತಾ ಮೆಗಾ ಸೀರಿಯಲ್ ಗಳು ಪ್ರಸಾರವಾದ ಸಮಯದಲ್ಲೇ 'ಸತ್ಯಮೇವ ಜಯತೇ' ಪ್ರಸಾರವಾಗಲಿ ಎಂಬುದು ಅಮೀರ್ ಖಾನ್ ಉದ್ದೇಶ.
ಇತಿಹಾಸ ನಿರ್ಮಾಣ: ಮೇ.6ರಿಂದ ಖಾಸಗಿ ವಾಹಿನಿ ಸ್ಟಾರ್ ಪ್ಲಸ್ ನಲ್ಲಿ ಆರಂಭವಾಗಲಿರುವ ಸತ್ಯಮೇವ ಜಯತೇ ರಾಷ್ಟ್ರ್ರೀಯ ವಾಹಿನಿ ದೂರದರ್ಶನ(ಡಿಡಿ 1)ರಲ್ಲೂ ಪ್ರಸಾರವಾಗಲಿದೆಯಂತೆ.
ಇದಲ್ಲದೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಈ ಕಾರ್ಯಕ್ರಮ ಡಬ್ ಆಗಲಿದೆ ಎಂದು ಅಮೀರ್ ಖಾನ್ ಹೇಳಿದ್ದಾರೆ. ಪಾಪ ಅಮೀರ್ ಗೆ ಕರ್ನಾಟಕದಲ್ಲಿ ಡಬ್ ಮಾಡುವುದು ನಿಷೇಧ ಎಂಬುದು ತಿಳಿದಿಲ್ಲ. ಒಂದು ಉತ್ತಮ ಕಾರ್ಯಕ್ರಮವನ್ನು ಕನ್ನಡಿಗರು ತಮ್ಮ ಭಾಷೆಯಲ್ಲಿ ನೋಡಲು ಸಾಧ್ಯವಿಲ್ಲ ಎಂಬ ಕೊರಗು ಮುಂದುವರೆಯಲಿದೆ.
ಭಾರತವನ್ನು ಒಗ್ಗೂಡಿಸುವ ಅಭಿಯಾನ ನನ್ನದು, ನಾನು ಸಾಸ್ ಬಹೂ ಸಿರಿಯಲ್ ಗಳಿಗೆ ಹೆದುರುವುದಿಲ್ಲ. TRPs (Television Rating Points) ಹಾಗೂ GRPs (Gross Rating Points) ಎಂದರೆ ಏನು ನನಗೆ ಗೊತ್ತಿಲ್ಲ. ಎಲ್ಲಾ ಜನರನ್ನು ನಾವು ತಲುಪಿದರೆ ಸಾಕು. ಆಗ ಮಾತ್ರ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ನನ್ನ ಅನಿಸಿಕೆ ಎಂದು ಅಮೀರ್ ಖಾನ್ ಹೇಳಿದ್ದಾರೆ.


Click it and Unblock the Notifications












