ರಿಯಾಲಿಟಿ ಶೋ ಆಯ್ಕೆ ವಿಫಲ, ಬಾಲಕ ಆತ್ಮಹತ್ಯೆ

ಶುಕ್ರವಾರ ರಾತ್ರಿ ತಂದೆ-ತಾಯಿ ಕೆಲಸಕ್ಕೆ ತೆರಳಿರುವ ವೇಳೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಟಿವಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಡ್ಯಾನ್ಸ್ ಶೋನಲ್ಲಿ ತಾನೂ ಭಾಗವಹಿಸಬೇಕೆಂಬುದು ಬಾಲಕನ ಇಚ್ಛೆಯಾಗಿತ್ತು. ಸಂದೀಪ್ ಅವರ ತಂದೆ ಸಿಡಿ, ಡಿವಿಡಿ ಮಾರಾಟ ಸಣ್ಣ ಮಳಿಗೆ ಹೊಂದಿದ್ದಾರೆ. ಹೆತ್ತವರಿಗೆ ಆರ್ಥಿಕ ಸಮಸ್ಯೆ ಇದ್ದುದರಿಂದ ಸಹಜವಾಗಿಯೇ ಅವರು ನಿರಾಕರಿಸಿದ್ದರು.
ಡಾನ್ಸ್ ಅಂದ್ರೆ ಪ್ರಾಣ: ಆದರೆ, ಶೋನಲ್ಲಿ ಭಾಗವಹಿಸಲೆಂದು ಬಾಲಕ ಕಳೆದ ಎರಡು ತಿಂಗಳಿಂದ ಅಭ್ಯಾಸವನ್ನು ಮುಂದುವರಿಸಿದ್ದ. ಸಂದೀಪ್ ಈ ಹಿಂದೆ ಸುಮಾರು ಆರರಷ್ಟು ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅವುಗಳಲ್ಲಿ ಬಹುಮಾನ ಪಡೆಯಲು ವಿಫಲನಾಗಿದ್ದ. ಆ ನಂತರ ಮಾನಸಿಕ ಖಿನ್ನತೆ ಒಳಗಾಗಿದ್ದ. ಡಾನ್ಸ್ ಅವನಿಗೆ ಸರ್ವಸ್ವವಾಗಿತ್ತು. ಮನೆಯಲ್ಲಿ ಅನುಕೂಲವಿಲ್ಲದಿದ್ದರೂ ನಿತ್ಯ ನಮ್ಮ ಹುಡುಗರ ಜೊತೆ ಅಭ್ಯಾಸ ಮಾಡುತ್ತಿದ್ದ ಎಂದು ನೆರಮನೆಯವರು ಹೇಳಿದ್ದಾರೆ.
ಶೋನಲ್ಲಿ ಪಾಲೊಳ್ಳಲು ತಗುಲುವ ಖರ್ಚನ್ನು ಪೋಷಕರು ಭರಿಸಲು ನಿರಾಕರಿಸಿದರು. ಇದರಿಂದ ಬಾಲಕ ಆತಹತ್ಯೆಗೆ ಶರಣಾಗಿದ್ದಾನೆ. ರಾತ್ರಿ ಒಂಭತ್ತರ ವೇಳೆಗೆ ಆತನ ತಾಯಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ವೇಳೆ ಬಾಲಕ ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ಕಸ್ಬಾ ಪೊಲೀಸ್ ಠಾಣಾಧಿಕಾರಿ ಗೌತಮ್ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.


Click it and Unblock the Notifications











