»   » ಉದಯ ಟಿವಿ ಜಾಹೀರಾತು ದರ ಸಿಕ್ಕಾಪಟ್ಟೆ ತುಟ್ಟಿ

ಉದಯ ಟಿವಿ ಜಾಹೀರಾತು ದರ ಸಿಕ್ಕಾಪಟ್ಟೆ ತುಟ್ಟಿ

Subscribe to Filmibeat Kannada

ದಕ್ಷಿಣ ಭಾರತದ ಮುಂಚೂಣಿಯಲ್ಲಿರುವ ದೂರದರ್ಶನ ಪ್ರಸರಣ ಸಂಸ್ಥೆ ಸನ್ ಟಿವಿ ನೆಟ್ ವರ್ಕ್ ಜಾಹೀರಾತು ದರಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಸನ್ ನೆಟ್ ವರ್ಕ್ ನ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನ ಮನರಂಜನಾ ವಾಹಿನಿಗಳಿಗೆ ಜಾಹೀರಾತು ದರ ಏರಿಕೆಯ ಬಿಸಿ ಹೊಸ ವರ್ಷದಿಂದ(ಜ.1, 2010) ತಟ್ಟಲಿದೆ.

ಕಂಟೆಂಟ್ ಪ್ರೊಡ್ಯೂಸರ್ ಗಳ ಪ್ರಸರಣ ಶುಲ್ಕವನ್ನು ಸನ್ ನೆಟ್ ವರ್ಕ್ ಹೆಚ್ಚಿಸಲಿದೆ ಹಾಗಾಗಿ ಸನ್ ನೆಟ್ ವರ್ಕ್ ನ ಎಲ್ಲಾ ಭಾಷೆಯ ವಾಹಿನಿಗಳಿಗೆ ಹೊಸ ವರ್ಷದಿಂದ ಈ ಹೊರೆ ತಪ್ಪಿದ್ದಲ್ಲ. ಉದಯ ವಾಹಿನಿಯ ಜಾಹೀರಾತು ದರಗಳನ್ನು ಶೇ.10ರಷ್ಟು ಏರಿಕೆ ಮಾಡಲಾಗಿದೆ.

ಉಳಿದಂತೆ ತಮಿಳಿನ ಸನ್ ಟಿವಿ ಜಾಹೀರಾತು ದರವನ್ನು ಶೇ.9ರಿಂದ 33ರಷ್ಟು ಏರಿಕೆ ಮಾಡಲಿದೆ. ತೆಲುಗಿನ ಜೆಮಿನಿ ಟಿವಿ ಜಾಹೀರಾತು ದರಗಳು ಶೇ.6ರಿಂದ 16ರಷ್ಟು ಹೆಚ್ಚಿಸಲಾತುತ್ತದೆ. ಮಲಯಾಳಂನ ಸೂರ್ಯ ಟಿವಿಯ ಜಾಹೀರಾತು ದರಗಳನ್ನು ಶೇ.5ರಷ್ಟು ಏರಿಕೆ ಮಾಡಲಾಗುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada