»   »  ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ

ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ

Posted By: Staff
Subscribe to Filmibeat Kannada
Aparna in Cable TV awards
ಕಿರುತೆರೆಯ ಕಲಾವಿದರು, ತಂತ್ರಜ್ಞರನ್ನು ಗುರುತಿಸಲು ಇದೇ ಮೊದಲ ಬಾರಿಗೆ ಆಕ್ಟ್ ಕೇಬಲ್ ಟಿವಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಿರುತೆರೆ ಧಾರವಾಹಿಗಳ ಅನಭಿಷಿಕ್ತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿದರೆ, ಕಿರುತೆರೆ ನಟ ರವಿಕಿರಣ್ ಗೆ 'ಎವರ್ ಗ್ರೀನ್ ಅವಾರ್ಡ್' ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಟ್ಟಿಯಲ್ಲಿ ಟಿವಿ 9ನ 'ಹೀಗೂ ಉಂಟೆ?' ಕಾರ್ಯಕ್ರಮ, ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿ ಮುಂತಾದವರು ಸ್ಥಾನ ಪಡೆದಿರುವುದು ವಿಶೇಷ. ಎಚ್ ಎಂ ಕೆ ಮೂರ್ತಿ, ಸಿಹಿಕಹಿ ಚಂದ್ರು, ಎಂ.ಎಸ್. ನರಸಿಂಹಮೂರ್ತಿ ಮತ್ತು ಅಪರ್ಣಾ ಅವರಿಗೆ ಜೀವ ಮಾನ ಸಾಧನೆ ಪ್ರಶಸ್ತಿಗಳನ್ನು ನೀಡಲಾಗಿದೆ.

*ಅತ್ಯುತ್ತಮ ನಿರ್ದೇಶಕ: ಟಿ ಎನ್ ಸೀತಾರಾಮ್ (ಮುಕ್ತ ಮುಕ್ತ)
*ಅತ್ಯುತ್ತಮ ನಿರ್ಮಾಣ ಸಂಸ್ಥೆ: ಮೀಡಿಯಾ ಹೌಸ್
*ಅತ್ಯುತ್ತಮ ಧಾರಾವಾಹಿ: ಮುಕ್ತ ಮುಕ್ತ
*ಅತ್ಯ್ಯುತ್ತಮ ನಟ: ರಾಜೇಶ್ (ಗುಪ್ತಗಾಮಿನಿ)
*ಅತ್ಯುತ್ತಮ ನಟಿ: ಪ್ರೀತಿ ಚಂದ್ರಶೇಖರ್ (ವಾತ್ಸಲ್ಯ)
*ಅತ್ಯುತ್ತಮ ಪೋಷಕ ನಟ: ಡಿ ಸಿ ಕೃಷ್ಣಮೂರ್ತಿ (ಮುಕ್ತ ಮುಕ್ತ)
*ಅತ್ಯುತ್ತಮ ಪೋಷಕ ನಟಿ: ಗಿರಿಜಾ ಲೋಕೇಶ್ (ಮುತ್ತಿನ ತೋರಣ)
*ಅತ್ಯುತ್ತಮ ಹಾಸ್ಯ ನಟ: ಮಾಸ್ಟರ್ ಆನಂದ್ (SSLC ನನ್ ಮಕ್ಳು)
*ಅತ್ಯುತ್ತಮ ಹಾಸ್ಯನಟಿ: ಪ್ರಮೋದಿನಿ (ಪಾಯಿಂಟ್ ಮರಿಮಳ)
*ಅತ್ಯುತ್ತಮ ಖಳನಟ: ಹುಲಿವನ್ ಗಂಗಾಧರಯ್ಯ (ಮುಕ್ತ ಮುಕ್ತ)
*ಅತ್ಯುತ್ತಮ ಖಳ ನಟಿ: ಇಳಾ ವಿಟಲ್ (ಕಾದಂಬರಿ)
*ಅತ್ಯುತ್ತಮ ಬಾಲ ನಟ: ಮಾಸ್ಟರ್ ಸಮೀರ್ ಪುರಾಣಿಕ್(ಶಿವಲೀಲಾಮೃತ)
*ಅತ್ಯುತ್ತಮ ಬಾಲ ನಟಿ: ಸುರಿತಾ (ಥಕಧಿಮಿತಾ)
*ಅತ್ಯುತ್ತಮ ನಿರೂಪಕ: ಗಿರೀಶ್ ಅಕ್ಕಿ (ಟಿವಿ 9)
*ಅತ್ಯುತ್ತಮ ನಿರೂಪಕಿ:ವರ್ಷಾ (ಗುಣಗಾನ-ಜಿ ಟಿವಿ)
*ಅತ್ಯುತ್ತಮ ವಾರ್ತಾ ವಾಚಕಿ: ವೀಣಾ ಪೂಜಾರಿ (ಈ ಟಿವಿ)
*ಅತ್ಯುತ್ತಮ ವಾರ್ತಾ ವಾಚಕ: ಹಮೀದ್ ಪಾಳ್ಯ (ಟಿವಿ 9)
*ಅತ್ಯುತ್ತಮ ಸಂಗೀತ ನಿರ್ದೇಶಕ: ಪ್ರವೀಣ್ ಡಿ ರಾವ್ (ಗುಪ್ತಗಾಮಿನಿ)
*ಅತ್ಯುತ್ತಮ ಗಾಯಕ: ಫಯಾಜ್ ಖಾನ್ (ನಾಕುತಂತಿ)
*ಅತ್ಯುತ್ತಮ ಗಾಯಕಿ: ಸುಪ್ರಿಯಾ ಆಚಾರ್ಯ
*ಅತ್ಯುತ್ತಮ ರಿಯಾಲಿಟಿ ಷೋ: ಸರಿಗಮಪ (ಜೀ ಕನ್ನಡ)
*ಅತ್ಯುತ್ತಮ ಸಂಭಾಷಣೆಕಾರ: ಎಂ ಎಸ್ ನರಸಿಂಹ ಮೂರ್ತಿ (ಪಾಯಿಂಟ್ ಪರಿಮಳ)
*ಅತ್ಯುತ್ತಮ ಸಾಹಿತಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ(ರಾಧಾ)
*ಅತ್ಯುತ್ತಮ ಛಾಯಾಗ್ರಾಹಕ: ರಾಜು ಸಿಡಿ (ನಾಕುತಂತಿ)
*ಅತ್ಯುತ್ತಮ ಸಂಕಲನ: ಬಾಲರಾಜ್
*ಅತ್ಯುತ್ತಮ ಮೇಕಪ್: ಡಿ ಸಿ ವೀರೇಂದ್ರ
*ಅತ್ಯುತ್ತಮ ವಾರದ ಕಾರ್ಯಕ್ರಮ: ಹೀಗೂ ಉಂಟೆ? (ನಾರಾಯಣ ಸ್ವಾಮಿ ಟಿವಿ9)
*ವಿಶೇಷ ಪ್ರತಿಭಾ ಪುರಸ್ಕಾರ: ಇಂದುಶ್ರೀ
*ಚಂದ್ರಮುಖಿ ಪ್ರಾಣಸಖ: ರಾಧಿಕಾ ರಾಣಿ ಮತ್ತು ರಂಗನಾಥ್ ಭಾರದ್ವಾಜ್
*ಎರಡು ವಿಶೇಷ ಪ್ರಶಸ್ತಿಗಳು ಸಿದ್ದು (ಫೋರ್ ಎಂ) ಮತ್ತು ಸಿದ್ದೇಶ್(ಟಿವಿ 9)

(ದಟ್ಸ್ ಕನ್ನಡ ಚಿತ್ರವಾರ್ತೆ)

ಕಿರುತೆರೆಯ ಬಾದ್ ಷಾ ರವಿಕಿರಣ್ ಗೆ ಪ್ರಶಸ್ತಿ
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ವಿವಾಹ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada