For Quick Alerts
  ALLOW NOTIFICATIONS  
  For Daily Alerts

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಿಗೆ ಮಹತ್ತರ ತಿರುವು

  By Rajendra
  |

  ಸುವರ್ಣ ವಾಹಿನಿಯ ವಿಭಿನ್ನ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು. ಈ ಕಾರ್ಯಕ್ರಮದ ಸೀಸನ್ 2 ಚಿತ್ರೀಕರಣ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಭರದಿಂದ ಸಾಗಿದೆ. ಉತ್ತರ ಕರ್ನಾಟಕದ ವೈವಿಧ್ಯತೆಗಳ ಜತೆಗೆ ಗ್ರಾಮೀಣ ಬದುಕನ್ನು ಈ ರಿಯಾಲಿಟಿ ಶೋನಲ್ಲಿ ಅನಾವರಣಗೊಳ್ಳುತ್ತಿವೆ.

  ನಗರದ ಬದುಕನ್ನೇ ಮಹಾನ್ ಎಂದುಕೊಂಡಿರುವ ಪ್ಯಾಟೆ ಹುಡ್ಗೀರ್‌ಗೆ ಈ ಕಾರ್ಯಕ್ರಮಮದ ಮೂಲಕ ಹಳ್ಳಿ ಬದುಕಿನ ಬಹುಮುಖತೆಯನ್ನು ಪರಿಚಯಿಸಲಾಗುತ್ತಿದೆ. ಸದಭಿರುಚಿಯ ಈ ಶೋನಲ್ಲಿ ಅಕ್ಷತಾ, ಪೂರ್ಣಿಮಾ, ಸಂಗೀತಾ, ಅಪೂರ್ವ, ನಿಶಾ, ಕುಮುದಾ, ಪ್ರಿಯಾಂಕಾ ಪ್ರಭು, ಗಾಯಿತ್ರಿ, ರಂಜಿತಾ, ನಳಿನಿ, ಶ್ವೇತಾ, ಸ್ವಾತಿ ಹಳ್ಳಿಯ ನೋವು, ನಲಿವುಗಳನ್ನು ಕಂಡಿದ್ದಾರೆ.

  ಸಾಕಷ್ಟು ಸೋಲು, ಗೆಲುವುಗಳ ಮೂಲಕ ಆರು ಮಂದಿ ಮಾತ್ರ ಕೆರಕಲಮಟ್ಟಿ ಗ್ರಾಮದಲ್ಲಿದ್ದಾರೆ. ಸದ್ಯಕ್ಕೆ ಒಂದು ಮುಖ್ಯ ಘಟ್ಟಕ್ಕೆ ಬಂದು ನಿಂತಿರುವ ಶೋ ಮಹತ್ತರ ತಿರುವು ಪಡೆಯಲು ಸಿದ್ಧವಾಗಿದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು -1ರಲ್ಲಿ ಭಾಗವಹಿಸಿ ಹಳ್ಳಿ ಲೈಫನ್ನು ಯಶಸ್ವಿಯಾಗಿ ಪೂರೈಸಿದ್ದ ರ‌್ಯಾಂಬೋ ಅರ್ಪಿತಾ, ಕೋಳಿ ರಮ್ಯಾ ಹಾಗೂ ನಯನಾ ಏಪ್ರಿಲ್ 18ರಂದು ಈ ಶೋನಲ್ಲಿ ಭಾಗವಹಿಸುವ ಮೂಲಕ ಶೋಗೆ ಹೊಸ ತಿರುವು ಸಿಗಲಿದೆ. ಪ್ರತಿ ರಾತ್ರಿ 8 ಗಂಟೆಗೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫನ್ನು ಸುವರ್ಣ ವಾಹಿನಿಯಲ್ಲಿ ನೋಡಬಹುದು.

  English summary
  Suvarna Tv’s second season of its jungle theme reality show, Pyate Hudigiru Halli Lifu (PHHL-City Girl Village life) to take a new twist on April 18. Pyate Hudigiru Halli Lifu season one winners Rambo Arpita, Koli Ramya and Nayana to participating in the show. The show will run daily Monday to Friday at 8 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X