»   » ಚಕ್ರವ್ಯೂಹದಲ್ಲಿ ನಿರ್ಮಾಪಕ ಮುನಿರತ್ನ ಬಾಯ್ಬಿಟ್ಟ ಸತ್ಯ

ಚಕ್ರವ್ಯೂಹದಲ್ಲಿ ನಿರ್ಮಾಪಕ ಮುನಿರತ್ನ ಬಾಯ್ಬಿಟ್ಟ ಸತ್ಯ

Posted By:
Subscribe to Filmibeat Kannada
Ambarish, Muniratna, K Manju
ತಮ್ಮದೇ ಚಿತ್ರ ಮೊದಲು ಬಿಡುಗಡೆಯಾಗಬೇಕೆಂದು ಜಿದ್ದಿಗೆ ಬಿದ್ದಿರುವ ಕನ್ನಡದ ಇಬ್ಬರು ಪ್ರಮುಖ ನಿರ್ಮಾಪಕರಾದ ಮುನಿರತ್ನ ನಾಯ್ಡು ಮತ್ತು ಕೊಬ್ಬರಿ ಮಂಜು ನಡುವಣ ವಿವಾದ ಈಗ ರೆಬಲ್ ಸ್ಟಾರ್ ಅಂಬರೀಶ್ ಮನೆಯಂಗಣದಲ್ಲಿ ಬಿದ್ದಿದೆ. tv9 ವಾಹಿನಿಯ ಜನಪ್ರಿಯ ಚಕ್ರವ್ಯೂಹ ಕಾರ್ಯಕ್ರಮದ ಭಾನುವಾರ (ಏ 15) ರಾತ್ರಿ ಪ್ರಸಾರವಾದ ಎಪಿಸೋಡ್ ನಲ್ಲಿ ನಿರ್ಮಾಪಕ ಮತ್ತು ಕಾರ್ಪೊರೇಟರ್ ಮುನಿರತ್ನ ಹೇಳಿರುವ ಕೆಲವೊಂದು ಹೇಳಿಕೆಯ ಆಯ್ದ ಭಾಗ ಇಂತಿದೆ:

* ಗಾಡ್ ಫಾದರ್ ಚಿತ್ರವನ್ನು ಏಪ್ರಿಲ್ 27ರಂದೇ ಬಿಡುಗಡೆ ಮಾಡಬೇಕೆನ್ನುವ ಮಂಜು ನಿರ್ಧಾರದ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಇದು ಮಂಜು ಅವರ ಸ್ವಂತ ನಿರ್ಧಾರವಂತೂ ಅಲ್ಲವೇ ಅಲ್ಲ. ಆ ಕಾಣದ ಕೈ ಯಾವುದೆಂದು ನನಗೆ ತಿಳಿದಿದೆ, ಸಮಯ ಬಂದಾಗ ಬಾಯಿ ಬಿಡುವೆ.
* ಡಾ. ರಾಜ್, ಡಾ. ವಿಷ್ಣು ನಂತರ ಕನ್ನಡ ಚಿತ್ರರಂಗಕ್ಕೆ ಈಗ ಅಂಬರೀಶ್ ಅಣ್ಣ. ಏಪ್ರಿಲ್ 18ಕ್ಕೆ ಮೀಟಿಂಗ್ ಕರೆದಿದ್ದಾರೆ. ನೋಡೋಣ ಏನು ಆಗುತ್ತಂತ..
* ಅಣ್ಣಾಬಾಂಡ್ ಚಿತ್ರಕ್ಕೆ ಪೈಪೋಟಿ ನೀಡುವ ಉದ್ದೇಶ ನನ್ನದಲ್ಲ. ರಾಘವೇಂದ್ರ ರಾಜಕುಮಾರ್ ಫೋನ್ ಮಾಡಿದ್ರು, ಅಣ್ಣಾಬಾಂಡ್ ಮತ್ತು ನಿಮ್ಮ ಚಿತ್ರಕ್ಕೆ ಥಿಯೇಟರ್ ಕ್ಲ್ಯಾಶ್ ಆಗದ ಹಾಗೆ ನೋಡಿಕೊಳ್ಳಿ ಎಂದಿದ್ದಾರೆ.
* ನಟ ದಿಗಂತ್ ಮತ್ತು ಯಶ್ ನಿರ್ಮಾಪಕರ ಬಳಿ ದುಡ್ಡು ತೆಗೆದುಕೊಂಡು ಅವರಿಗೆ ಕಾಲ್ ಶೀಟ್ ನೀಡಿರಲಿಲ್ಲ. ಇಬ್ಬರನ್ನು ಕರೆದು ಬುದ್ದಿಮಾತು ಹೇಳಿದ್ದೇನೆ.
* ನಟಿ ನಿಖಿತಾ ಪ್ರಕರಣದಲ್ಲಿ ನಾನು ಅಂದು ನೀಡಿದ ಹೇಳಿಕೆಗೆ ಇಂದೂ ಬದ್ದನಾಗಿದ್ದೇನೆ. ಹಿಂದಕ್ಕೆ ತೆಗೆದುಕೊಳ್ಳುವ ಮಾತೇ ಇಲ್ಲ.
* ನಟಿ ನಿಖಿತಾಳನ್ನು ನನ್ನ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಸಲು ನನಗೇನೂ ದರ್ದ್ ಇಲ್ಲ. ನನ್ನ ಯಾವುದೇ ಚಿತ್ರಕ್ಕೂ ನಿಖಿತಾರನ್ನು ಕರೆಸಿಕೊಳ್ಳುವ ಜರೂರತ್ ನನಗಿಲ್ಲ.
* ಕಠಾರಿವೀರ ಚಿತ್ರ ಖಂಡಿತ ಗೆಲ್ಲುತ್ತೆ ಎನ್ನುವ ವಿಶ್ವಾಸನನಗಿದೆ. ಒಂದು ವೇಳೆ ಈ ಚಿತ್ರ ಸೋತರೆ ಮತ್ತೆ ನಾನು ಚಿತ್ರ ನಿರ್ಮಿಸುವುದಿಲ್ಲ.

English summary
Producer Muniratna in tv9 Chakravyuha programme on last Sunday i.e. 15.04.12. He said, we will meet in Ambarish residence on April 18th to decide the release date of movie God Father and Katari Veera.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada