»   »  ಸಚ್ ಕಾ ಸಾಮ್ನಾ ಪ್ರೇರಣೆ; ಯುವಕ ಆತ್ಮಹತ್ಯೆ

ಸಚ್ ಕಾ ಸಾಮ್ನಾ ಪ್ರೇರಣೆ; ಯುವಕ ಆತ್ಮಹತ್ಯೆ

Posted By:
Subscribe to Filmibeat Kannada

ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ 'ಸಚ್ ಕಾ ಸಾಮ್ನಾ' ಮುಗ್ಧರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ನಿದರ್ಶನ. ಈ ಕಾರ್ಯಕ್ರಮವನ್ನು ಅನುಸರಿಸಿದ ಯುವಕನೊಬ್ಬ ಪತ್ನಿಯ ಮೇಲೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಗ್ರೇಟರ್ ನೋಯ್ಡಾ ದಲ್ಲಿ ನಡೆದಿದೆ.

'ಸಚ್ ಕಾ ಸಾಮ್ನಾ' ಟಿವಿ ಶೋನಿಂದ ಸ್ಪೂರ್ತಿಗೊಂಡ ಸುರೀಂದರ್ ಮತ್ತು ಆತನ ಗರ್ಭಿಣಿ ಪತ್ನಿ ರತ್ನಾ(ಗಂಡ ಮತ್ತು ಹೆಂಡತಿ ಹೆಸರುಗಳನ್ನು ಬದಲಾಯಿಸಲಾಗಿದೆ) ಮನೆಯಲ್ಲಿ ಅದೇ ರೀತಿಯ ಆಟವಾಡಲು ನಿರ್ಧರಿಸಿದರು. ಮೊದಲು ಗಂಡನಿಗೆ ಪತ್ನಿ ಕೆಲ ಪ್ರಶ್ನೆಗಳನ್ನು ಕೇಳಿದಳು ಅದಕ್ಕೆ ಆತ ಉತ್ತರವನ್ನು ನೀಡಿ ತನ್ನ ಸರದಿ ಆರಂಭಿಸಿದ. ಪತ್ನಿ ಆಗ ಆಟ ಆಡಲು ಹಿಂದೇಟು ಹಾಕತೊಡಗಿದಳು. ಆದರೆ ಅದಕ್ಕೆ ಒಪ್ಪದ ಪತಿ 'ಗರ್ಭದಲ್ಲಿರುವ ನಿನ್ನ ಮಗುವಿನ ಮೇಲೆ ಆಣೆ ಮಾಡಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು ಎಂದು ಪಟ್ಟು ಹಿಡಿದ ನಂತರ ಪತ್ನಿ ಒಲ್ಲದ ಮನಸ್ಸಿನಿಂದ ಆಟ ಮುಂದುವರಿಸಿದಳು.

ನಮ್ಮ ಮದುವೆಯಾಗುವ ಮುಂಚೆ ನೀನು ಯಾರನ್ನಾದರೂ ಪ್ರೀತಿಸಿದ್ದಿಯಾ ಎನ್ನುವ ಪ್ರಶ್ನೆಗೆ ಪತ್ನಿ, ಹೌದು ಅತ್ಯಂತ ಡೀಪ್ ಆಗಿ ವ್ಯಕ್ತಿಯೊಬ್ಬರನ್ನು ಪ್ರೀತಿಸುತ್ತಿದ್ದೆ ಎಂದು ಒಪ್ಪಿಕೊಂಡಳು. ವಿವಾಹಪೂರ್ವ ಲೈಂಗಿಕ ಕ್ರಿಯೆ ನಡೆಸಿದ್ದಿಯಾ ಎನ್ನುವ ಪ್ರಶ್ನೆಗೆ ಕೂಡಾ ಹೌದು ಎಂದು ಆಕೆ ಉತ್ತರಿಸಿದಳು. ಇದರಿಂದ ತೀವ್ರ ನಿರಾಶೆಗೊಂಡ ಸುರೀಂದರ್ ತನ್ನ ಕೋಣೆಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ .

(ಏಜನ್ಸೀಸ್)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X