For Quick Alerts
  ALLOW NOTIFICATIONS  
  For Daily Alerts

  ಫೆ.18ಕ್ಕೆ 'ಜನಶ್ರೀ' ವಾಹಿನಿಗೆ ಒಂದು ವರ್ಷದ ಸಂಭ್ರಮ

  By Rajendra
  |

  'ಜನ ಮನ ದನಿ'ಯಾಗಿ ಆರಂಭವಾದ ಜನಶ್ರೀ ವಾಹಿನಿ ಇದೇ 18 ಫೆಬ್ರವರಿ 2012ಕ್ಕೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ ಮುನ್ನುಗ್ಗುತ್ತಿದೆ. ಹಲವಾರು ಸುದ್ದಿ ವಾಹಿನಿಗಳ ಸ್ಪರ್ಧೆಯ ನಡುವೆ ತನ್ನದೇ ಆದಂತಹ ಶೈಲಿಯಲ್ಲಿ ಜನಶ್ರೀ ಜನಪ್ರಿಯವಾಗಿರುವುದು ಗಮನಾರ್ಹ ಸಂಗತಿ.

  "ಸರಿಯಾಗಿ 12 ತಿಂಗಳ ಕೆಳಗೆ ಪ್ರಸಾರ ಆರಂಭಿಸಿದ ಜನಶ್ರೀ ವಾಹಿನಿ ಎಲ್ಲರ ನಿರೀಕ್ಷೆಗೂ ಮಿಗಿಲಾಗಿ ನಿಷ್ಪಕ್ಷಪಾತ ಸುದ್ದಿ, ವಿಶ್ಲೇಷಣೆಗಳಿಂದ ನಿಜಕ್ಕೂ ಜನ ಮನ ದನಿಯಾಗಿದೆ. ಸುದ್ದಿಯ ಹೂರಣದ ಜೊತೆ ಜನರ ಆಶೋತ್ತರಗಳಿಗೆ ದನಿಯಾಗಿರುವ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಜನ ಮನ ಗೆಲ್ಲುವಲ್ಲಿ ಸಫಲವಾಗಿವೆ" ಎಂದಿದ್ದಾರೆ ಜನಶ್ರೀ ರೂವಾರಿ ಅನಂತ ಚಿನಿವಾರ್.

  ಜ್ಯೋತಿಷ್ಯ, ಭವಿಷ್ಯ ಆಧಾರಿತ ಚರ್ಚೆಗಳು, ರೋಚಕತೆ ಬಿಂಬಿಸುವ ಹಸಿಬಿಸಿ ಸುದ್ದಿಗಳಿಂದ ದೂರವಿರುವ ಜನಶ್ರೀ ವಾಹಿನಿ ಉಳಿದ ವಾಹಿನಿಗಳಿಗಿಂತ ಭಿನ್ನ ಎನ್ನಬಹುದು. ಟಿಆರ್‌ಪಿಯಲ್ಲೂ ವಾಹಿನಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿರುವುದೇ ಇದಕ್ಕೆ ಸಾಕ್ಷಿ.

  ಮೋಸ ಹೋಗಬೇಡಿ, ಒಂದು ಒಳ್ಳೆ ಕೆಲಸ, ದೈವ ಸನ್ನಿಧಿ, ದೇಶ ವಿದೇಶ, ನೋಡಿ ಸ್ವಾಮಿ ಎಂಬ ಕಾರ್ಯಕ್ರಮಗಳು ವೈವಿಧ್ಯಮಯವಾಗಿವೆ. ಜನಶ್ರೀ ವಾಹಿನಿಯಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿರುವ ಕಾರ್ಯಕ್ರಮಗಳೆಂದರೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶವಾಗಿಟ್ಟು ಬಿತ್ತರವಾಗುತ್ತಿರುವ 'ಮನೆ ಪಾಠ' ಹಾಗೂ 'ಜಾಬ್ ಜಂಕ್ಷನ್' ನಂತಹ ಕಾರ್ಯಕ್ರಮಗಳು. ಗಣಿಧಣಿಗಳ ರಾಜಕೀಯ ಮುಖವಾಣಿಯಂತೆ ಎಂದೂ ತೋರಿಸಿಕೊಳ್ಳದ ಜನಶ್ರೀ ವಾಹಿನಿಗೆ ಹ್ಯಾಪಿ ಬರ್ತ್‌ಡೇ. (ಒನ್‌ಇಂಡಿಯಾ ಕನ್ನಡ)

  English summary
  Janasri News channel completes one year. The channel is celebrating its first birthday on 18th February, 2012. Instead of telecasting astrology in morning slot the channel is broadcasting employment opportunities for youth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X