ಬಲಗಾಲಿಟ್ಟು ಬಂದ ತುಂಟಾಟದ ಚಿಟ್ಟೆ ಛಾಯಾ ಸಿಂಗ್

ರೌಡಿ ಅಳಿಯ, ಆಕಾಶ ಗಂಗೆ, ಬಲಗಾಲಿಟ್ಟು ಒಳಗೆ ಬಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅದ್ಯಾಕೋ ಆಕೆಗೆ ಸಿನಿಮಾರಂಗದಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗಲೇ ಇಲ್ಲ. ಪ್ರತಿಭಾವಂತೆಯಾದರೂ ಚಿತ್ರರಂಗ ಅವರಲ್ಲಿ ಅದೇನು ಕೊರತೆ ಕಂಡಿತೋ ಎಂಬಂತೆ ಛಾಯಾ ಸಿಂಗ್ ಮಡಿಲಿಗೆ ಸಿನಿಮಾ ಬೀಳಲಿಲ್ಲ. ಕಿರುತೆರೆಯಲ್ಲಿ ಆಕೆಯೇ ಉಳಿಯಲಿಲ್ಲವೋ ಏನೋ!
ಒಟ್ಟಿನಲ್ಲೀಗ ಜೀ ವಾಹಿನಿಯಲ್ಲಿ ಸದ್ಯದಲ್ಲೇ ಪ್ರಾರಂಭವಾಗಲಿರುವ ಗಂಡ-ಹೆಂಡಿರ ರಿಯಾಲಿಟಿ ಶೋ "ನಾನು ನೀನು ಹಾಲು ಜೇನು' ವನ್ನು ನಟಿ ಛಾಯಾ ಸಿಂಗ್ ನಡೆಸಿಕೊಡಲಿದ್ದಾರೆ. ಮತ್ತೆ ಕಿರುತೆರೆಯತ್ತ ಮುಖಮಾಡಿರುವ ಛಾಯಾ, ಇದೀಗ ಪೂರ್ಣಪ್ರಮಾಣದಲ್ಲಿ ಕಿರಿತೆರೆಯಲ್ಲೇ ಸೆಟ್ಲ್ ಆದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಸುದ್ದಿ ಮೂಲಗಳು. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Actress Chaya Singh to host Zee Kannada Reality Show, 'Nanu Neenu Halu Jenu' very shortly.


Click it and Unblock the Notifications











