ಭೀತಿ ಹುಟ್ಟಿಸುವ ಜ್ಯೋತಿಷಿಗಳಿಗೆ ಶಿಕ್ಷೆ ಏಕಿಲ್ಲ?

ದಢೂತಿ ಜ್ಯೋತಿಷಿಯೊಬ್ಬರಂತೂ ಟಿವಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಅನಗತ್ಯ ಭೀತಿ ಹರಡುತ್ತಿದ್ದಾರೆ. ಅವರ ಜಾಣ್ಮೆ ಎಷ್ಟಿದೆಯೆಂದರೆ ಅವರು ಮಾತನಾಡುವುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ. ಭೂಕಂಪ, ಪ್ರವಾಹವೇ ಆಗುವುದೆಂದು ತಾನು ಹೇಳಲಾರೆ, ಆದರೆ ಏನೋ ಒಂದು ಆಗಲಿದೆ ಎಂದು ಅವರು ಹೇಳುತ್ತಾರೆ. ಮಾ.19ರಂದೇ ಸಂಭವಿಸುವುದೆಂದು ಹೇಳಲಾರೆ, ಮುಂದೆ ಯಾವಾಗಲೂ ಸಂಭವಿಸಬಹುದು ಎನ್ನುತ್ತಾರೆ.
ಮುಂದಕ್ಕೆ ಲಾರಿಯಡಿಗೆ ನಾಯಿ ಬಿದ್ದು ಸತ್ತರೂ 'ನೋಡಿ, ನಾನು ಹೀಗೆ ಹೇಳಿರಲಿಲ್ಲವೆ " ಎಂದು ಅವರು ಹೇಳಿದರೂ ಹೇಳಿಯಾರೆ. ಹಿಂದೊಮ್ಮೆ ಇದೇ ರೀತಿ ಟಿವಿ ಜ್ಯೋತಿಷಿಯೊಬ್ಬರು ಬಂಟ್ವಾಳಕ್ಕೆ ಬಂದಿದ್ದಾಗ ಮುಂದಿನ ತಿಂಗಳು ಇಂತಿಷ್ಟೇ ತಾರೀಕಿನಂದು ಪ್ರಳಯ ಸದೃಶ ಮಳೆ ಬಂದು ಬಂಟ್ವಾಳವು ಭೀಕರ ಪ್ರವಾಹಕ್ಕೆ ತುತ್ತಾಗಲಿದೆ ಎಂದು ಹೇಳಿಹೋಗಿದ್ದರು. ಆದರೆ ಅವರು ಹೇಳಿದ ದಿನದಂದು ಬಂಟ್ವಾಳದಲ್ಲಿ ಸುಡು ಬಿಸಿಲಿತ್ತು.
ಇದೀಗ ಜನತೆಯಲ್ಲಿ ಭಾರೀ ಭಯಭೀತಿ ಬಿತ್ತುವಲ್ಲಿ ಈ ಕಪಟ ಜ್ಯೋತಿಷಿಗಳು ಸಫಲರಾಗಿದ್ದಾರೆ. ಒಂದುವೇಳೆ ನಾಡಿದ್ದು ಏನೂ ಸಂಭವಿಸಲಿಲ್ಲವೆಂದಾದರೆ ಅವರು ಈ ರೀತಿ ಅನವಶ್ಯ ಭೀತಿ ಬಿತ್ತಿದ್ದಕ್ಕೆ ಸೂಕ್ತ ಶಿಕ್ಷೆ ಪಡೆಯಬೇಡವೆ? ಅವರೇನೋ ಮರುದಿನದಿಂದ ಬೇರೆಯೆ ತೆರನಾದ ನೆಪ ಹೇಳಲು ಆರಂಭಿಸಿಯಾರು. ಆದರೆ ಜನಗಳು ಅವರಿಗೆ ಪಾಠ ಕಲಿಸಲು ಈಗಲೆ ಸಿದಟಛಿರಾಗಿರುವುದೊಳಿತು. ಇಲ್ಲದಿದ್ದರೆ ಮುಂದೊಂದು ದಿನ ಹೊಸದಾದ ವಿಷಯ ಎತ್ತಿ ಅವರು ಜನರಲ್ಲಿ ಭೀತಿ ಸೃಷ್ಟಿಸತೊಡಗುತ್ತಾರೆ.


Click it and Unblock the Notifications











