»   » ಸುವರ್ಣ ಟಿವಿಯಲ್ಲಿ ಜೂಲಿ ಲಕ್ಷ್ಮಿ ನಗೆ ಟಾನಿಕ್ ನೀನಾ ನಾನಾ

ಸುವರ್ಣ ಟಿವಿಯಲ್ಲಿ ಜೂಲಿ ಲಕ್ಷ್ಮಿ ನಗೆ ಟಾನಿಕ್ ನೀನಾ ನಾನಾ

Posted By:
Subscribe to Filmibeat Kannada
Actress Lakshmi
ಹಿರಿಯ ಸಿನಿಮಾ ತಾರೆ ಲಕ್ಷ್ಮಿ ಕನ್ನಡ ಕಿರುತೆರೆಗೆ ಮತ್ತೆ ಮರಳಿದ್ದಾರೆ. ಈ ಹಿಂದೆ ಸುವರ್ಣ ವಾಹಿನಿಗೆ 'ಇದು ಕತೆಯಲ್ಲ ಜೀವನ' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮ ಮೂಲಕ ಲಕ್ಷ್ಮಿ ಅವರು ಅದೆಷ್ಟೋ ನೊಂದ ಬದುಕುಗಳಿಗೆ ಸಾಂತ್ವನ ನೀಡಿದ್ದಾರೆ.

'ಇದು ಕತೆಯಲ್ಲ ಜೀವನ' ಎಂಬ ಕಾರ್ಯಕ್ರಮ ನೊಂದವರ ಕಣ್ಣೀರೊರೆಸುವುದಾಗಿತ್ತು. ಆದರೆ ಈಗ 'ನಾನಾ ನೀನಾ' ಎಂದು ನಗಿಸಲು ನೀನು ನಗುವೆನು ನಾನು...ಹಾಸ್ಯ ರಸ ಉಕ್ಕಿಸಲು ಬರುತ್ತಿದ್ದಾರೆ ಲಕ್ಷ್ಮಿ. ಈ ಕಾರ್ಯಕ್ರಮ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಜುಲೈ 23ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಮಾತ್ರ.

ಈ ಕಾರ್ಯಕ್ರಮ ಒಂಥರಾ ನಗೆ ಟಾಕಿನ್ ಇದ್ದಂತೆ. ಮಲಗುವ ಮುನ್ನ ಈ ಕಾರ್ಯಕ್ರಮ ನೋಡಿ ಮನಸಾರೆ ನಕ್ಕು ಮನಸ್ಸು ಹಗುರ ಮಾಡಿಕೊಂಡು ಹಾಸಿಗೆಗೆ ಹೊರಳಿದರೆ ಹಾಯಾಗಿ ನಿದ್ದೆ ಬರುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಕಾರ್ಯಕ್ರಮ ಪ್ರಭಾವ ಬೀರಲಿದೆ ಎನ್ನುತ್ತಾರೆ ಲಕ್ಷ್ಮಿ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Senior actress Lakshmi again back to small screen. Earlier she was heading the tearjerker ‘Kathe Alla Jeevana’ and now in a laughter with good values in it 'Neena Naana' for Suvarna channel. The programme is going on air from July 23rd at 9 pm on every Saturday and Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada