For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯನ್ನೇ ಹೆಚ್ಚು ಪ್ರೀತಿಸುತ್ತಿರುವ ಚಂದ್ರಕಲಾ

  |

  ಬೆಳ್ಳಿತೆರೆಯಲ್ಲಿ 'ಋಣಾನುಬಂಧ' ಚಿತ್ರದ ಸೌಮ್ಯ ಸ್ವಭಾವದ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿರುವ ನಟಿ ಚಂದ್ರಕಲಾ ಮೋಹನ್, ಕಿರುತೆರೆಯಲ್ಲಿ ಕಿರುಚಾಡುವ ಗಯ್ಯಾಳಿ ಪಾತ್ರಗಳಲ್ಲೇ ಹೆಚ್ಚು ಪರಿಚಿತ. ಸದ್ಯ ಕೃಷ್ಣ-ರುಕ್ಮಿಣಿ ಧಾರಾವಾಹಿಯ ಗೌಡತಿ ಹಾಗೂ 'ಬೆಂಕಿಯಲ್ಲಿ ಅರಳಿದ ಹೂವು' ನಲ್ಲಿ ಖಳನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಮಂಡ್ಯದ ಹೊಸಹಳ್ಳಿಯವರಾದ ಚಂದ್ರಕಲಾ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಕುರುಕ್ಷೇತ್ರ, ದಕ್ಷಯಜ್ಞ, ಶ್ರೀ ಕೃಷ್ಣ ಸಂಧಾನ, ರ್ತನ ಮಾಂಗಲ್ಯ, ಬಸ್ ಕಂಡಕ್ಡರ್, ಸತಿ ಸಂಸಾರದ ಜ್ಯೋತಿ, ಗೌಡ್ರ ಗದ್ಲ, ಹೀಗೆ ಬಹಳಷ್ಟು ನಾಟಕಗಳಲ್ಲಿ ನಟಿಸಿದ್ದಾರೆ.

  ಮದುವೆಯಾದ ನಂತರ ದೂರದರ್ಶನದಲ್ಲಿ ಪ್ರಸಾರವಾದ 'ಮರೀಚಿಕೆ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶ ಮಾಡಿದ ಇವರು ನಂತರ ಜೀವನ, ಕುಸುಮಾಂಜಲಿ, ರಂಗೋಲಿ, ಗೋಧೂಳಿ, ಎಸ್ಸೆಸ್ಸೆಲ್ಸಿ ನನ್ಮಕ್ಳು, ಮೂಡಲ ಮನೆ ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಜೊತೆಗೆ ರಾಜಧಾನಿ, ಭದ್ರ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿ ಎಲ್ಲಾ ಕಡೆ ಸಲ್ಲಬಲ್ಲವರು ಎನಿಸಿಕೊಂಡಿದ್ದಾರೆ.

  ಉಮಾಶ್ರೀ ಅವರಂತೆ ಮಧ್ಯ ವಯಸ್ಸಿನಲ್ಲಿರುವಾಗಲೇ ಮದುಕಿ ಪಾತ್ರ ಮಾಡುವಾಸೆ ಎನ್ನುವ ಇವರು ತಮಗೆ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತಾರೆ. ಪದ್ಮಜಾ ರಾವ್, ರವಿ ಆರ್ ಗರಣಿಯವರ ಜೊತೆ ಸದ್ಯಕ್ಕೆ ಇವರ ನಟನಾಯಾನ ಮುಂದುವರಿದಿದೆ. (ಒನ್ ಇಂಡಿಯಾ ಕನ್ನಡ)

  English summary
  Actress Chandrakala acts in serial Krishna Rukmini and Benkiyalli Aralida Hoovu. She got Best Supporting Actress State Award for the film director Ramamurthy 'Runanubandh.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X