For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ನಟಿ ರಮ್ಯಾ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ 'ಕನ್ನಡ ಕೋಟ್ಯಾಧಿಪತಿ' ಕ್ವಿಜ್ ಶೋಗೆ ಕ್ಷಣಗಣನೆ ಶುರುವಾಗಿದೆ. ಈ ಕಾರ್ಯಕ್ರಮವನ್ನು ಸವಿಯಲು ಸುವರ್ಣ ವಾಹಿನಿ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಶೋನ ಮೊದಲ ಸೆಲೆಬ್ರಿಟಿಯಾಗಿ ಗೋಲ್ಡನ್ ಗರ್ಲ್ ರಮ್ಯಾ ಕಾಣಿಸುತ್ತಿದ್ದಾರೆ.

  ಈ ಬಗ್ಗೆ ಮಾತನಾಡಿರುವ ರಮ್ಯಾ, ನನ್ನ ಸಿನಿ ವೃತ್ತಿಜೀವನ ಆರಂಭವಾಗಿದ್ದೇ 'ಅಪ್ಪು' ಜೊತೆಗಿನ ಚಿತ್ರದೊಂದಿಗೆ. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿದ್ದು, ಶೀಘ್ರದಲ್ಲೇ ಶೂಟಿಂಗ್‌ಗಾಗಿ ಚೆನ್ನೈಗೆ ಹೊರಡಲಿದ್ದೇನೆ. ಶೋನಲ್ಲಿ ಗೆದ್ದ ಹಣವನ್ನು ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರ ನಿಧಿಗೆ ಸಮರ್ಪಿಸುವುದಾಗಿ ಹೇಳಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿರುವ ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಮಾರ್ಚ್ 12, 2012ರಿಂದ ಪ್ರಾರಂಭವಾಗಲಿದೆ. ಸೋಮವಾರದಿಂದ ಗುರುವಾರದವರೆಗೆ ಸಾಯಂಕಾಲ 8 ಗಂಟೆಗೆ ಈ ಕಾರ್ಯಕ್ರಮ ನೋಡಿ ಆನಂದಿಸಬಹುದು. (ಏಜೆನ್ಸೀಸ್)

  English summary
  Golden Girl Ramya will be the first celebrity guest on Puneet Rajkumar’s quiz show Kannadada kotyadipathi. Soon the actress heading to Chennai to shoot for the episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X