»   » ಉದಯ ವಾಹಿನಿಯಲ್ಲಿ ಮನೋಜ್ಞ ಚಿತ್ರ ರಂಗನಾಯಕಿ

ಉದಯ ವಾಹಿನಿಯಲ್ಲಿ ಮನೋಜ್ಞ ಚಿತ್ರ ರಂಗನಾಯಕಿ

Posted By:
Subscribe to Filmibeat Kannada
Ranganayaki on Udaya Movies
ಕನ್ನಡ ಚಿತ್ರರಂಗದ ಕಡುವ್ಯಾಮೋಹಿ ಪುಟ್ಟಣ್ಣ ಕಣಗಾಲರ ಕಲಾತ್ಮಕ ಶೈಲಿಯಲ್ಲಿ ಮೂಡಿಬಂದ ಚಿತ್ರ 'ರಂಗನಾಯಕಿ' ಇದೇ ಭಾನುವಾರ (ಆ.21) ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಸರಿಯಾಗಿ ಬಿಸಿಬಿಸಿ ಕಾಫಿಯೊಂದಿಗೆ ಟಿವಿ ಮುಂದೆ ಕೂತು 'ರಂಗನಾಯಕಿ' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಅಂಬರೀಷ್ ಮತ್ತು ಆರತಿ ನಟಿಸಿದ ಈ ಚಿತ್ರ ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನವನ್ನು ಕುರಿತದ್ದು.ಆರತಿಯವರ ಮನೋಜ್ಞ ಅಭಿನಯದಿಂದಾಗಿ ಅವರು ಇಂದಿಗೂ ಕನ್ನಡ ಚಲನಚಿತ್ರರಂಗದಲ್ಲಿ ರಂಗನಾಯಕಿ ಎಂದೇ ಗುರುತಿಸಲ್ಪಡುತ್ತಾರೆ. ಅವರ ಚಿತ್ರರಂಗ ಜೀವನದಲ್ಲಿ ಇದೊಂದು ಮೈಲಿಗಲ್ಲು.

ಉದಯ ವಾಹಿನಿಯಲ್ಲಿ ರಂಗನಾಯಕಿ ಬಳಿಕ ಬೆಳಗ್ಗೆ 10ಕ್ಕೆ ಮತ್ತೊಂದು ಯಶಸ್ವಿ ಚಿತ್ರ 'ಫ್ರೆಂಡ್ಸ್' ಪ್ರಸಾರವಾಗಲಿದೆ; ಸಂಜೆ 4ಕ್ಕೆ ಜೀಬೂಂಬಾ; ರಾತ್ರಿ 8ಕ್ಕೆ ಕುಬೇರ; ರಾತ್ರಿ 11ಕ್ಕೆ ಅಮರ್ ಅಕ್ಬರ್ ಆಂಟೋನಿ. ಇವಿಷ್ಟು ಚಿತ್ರಗಳನ್ನು ಉದಯ ಮೂವೀಸ್ ವಾಹಿನಿಯಲ್ಲಿ ಸವಿಬಹುದು. ಉಳಿದ ವಾಹಿನಿಗಳಲ್ಲಿ ಪ್ರಸಾರವಾಗುವ ಚಿತ್ರಗಳ ವಿವರ ಹೀಗಿದೆ.

ಕಸ್ತೂರಿ: ಸಂಜೆ 3ಕ್ಕೆ ಮೌರ್ಯ ಚಿತ್ರ ಪ್ರಸಾರವಾಗಲಿದೆ. ಎಸ್ ನಾರಾಯಣ್ ನಿರ್ದೇಶನದ ಚಿತ್ರದ ತಾರಾಬಳಗದಲ್ಲಿ ಪುನೀತ್ ರಾಜ್ ಕುಮಾರ್, ಮೀರಾ ಜಾಸ್ಮಿನ್ ಇದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕಿದ್ದು ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಪಕರು.

ಡಿಡಿ ಚಂದನ: ಸಂಜೆ 4ಕ್ಕೆ ಶ್ರೀಗಂಧ ಚಿತ್ರ ಪ್ರಸಾರವಾಗಲಿದೆ. ರಾಘವೇಂದ್ರ ರಾಜ್ ಕುಮಾರ್, ನಾಗೇಂದ್ರ ಶಾ, ಹಂಸಲೇಖ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಸಂಪತ್ ಕುಮಾರ್ ನಿರ್ದೇಶನದ ಚಿತ್ರ ಇದಾಗಿದೆ.

ಉದಯ ಟಿವಿ: ಮಧ್ಯಾಹ್ನ 12ಕ್ಕೆ ಅನು; ಸಂಜೆ 3 ಗಂಟೆಗೆ ಪ್ರೀತ್ಸೋದ್ ತಪ್ಪಾ; ಸಂಜೆ 6 ಗಂಟೆಗೆ ಶಂಕರ್ ಐಪಿಎಸ್; ರಾತ್ರಿ 9ಕ್ಕೆ ಪ್ರೀತಿ ಪ್ರೇಮ ಚಿತ್ರಗಳು ಪ್ರಸಾರವಾಗಲಿವೆ. 'ಶಂಕರ್ ಐಪಿಎಸ್' ಚಿತ್ರ ಹೊಚ್ಚಹೊಸ ಚಿತ್ರವಾಗಿದ್ದು ದುನಿಯಾ ವಿಜಯ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರ.

ಸುವರ್ಣ ವಾಹಿನಿ: ಮಧ್ಯಾಹ್ನ 1 ಗಂಟೆಗೆ ಬಳ್ಳಾರಿನಾಗ ಹಾಗೂ ಸಂಜೆ 4ಗಂಟೆಗೆ ಕಿಚ್ಚಹುಚ್ಚ ಚಿತ್ರಗಳು ಪ್ರಸಾರವಾಗಲಿವೆ. ವಿಷ್ಣುವರ್ಧನ್ ಅಭಿನಯದ ಚಿತ್ರ ಬಳ್ಳಾರಿ ನಾಗ ಹಾಗೂ ಸುದೀಪ್ ಅಭಿನಯ ಚಿತ್ರ ಕಿಚ್ಚ ಹುಚ್ಚ.

ಈಟಿವಿ ಕನ್ನಡ: ಸಂಜೆ 4 ಗಂಟೆಗೆ ಸಿಕ್ಸರ್ ಚಿತ್ರ ಪ್ರಸಾರವಾಗಲಿದೆ. ಕ್ರಿಕೆಟ್ ಪಟು ಆಗಬೇಕು ಎಂದು ಕನಸು ಕಾಣುವ ಯುವಕನ ಕಥಾಹಂದರದ ಚಿತ್ರ. ಚಿತ್ರದ ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಸ್ಮಿತಾ, ದೇವಿಕಾ ಮುಂತಾದವರಿದ್ದಾರೆ. ಶಶಾಂಕ್ ನಿರ್ದೇಶನದ ಚಿತ್ರ.

ಜೀ ಕನ್ನಡ: ಸಂಜೆ 5ಕ್ಕೆ ಜೋಗಿ; ಬೆಳಗ್ಗೆ 11ಕ್ಕೆ ಶ್ರೀಕೃಷ್ಣ ಚಿತ್ರಗಳು ಪ್ರಸಾರವಾಗಲಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಜೋಗಿ. ಪ್ರೇಮ್ ನಿರ್ದೇಶನ ಈ ಚಿತ್ರ ತಾಚಿಕೊಂಡಿದ್ದ ಕನ್ನಡ ಚಿತ್ರರಂಗವನ್ನು ಎದ್ದು ನಿಲ್ಲಿಸಿತ್ತು. ಜೆನ್ನಿಫರ್ ಕೊತ್ವಾಲ್ ಚಿತ್ರದ ನಾಯಕಿ. ಪೌರಾಣಿಕ ಚಿತ್ರವಾದ ಶ್ರೀಕೃಷ್ಣಅನಿಮೇಷನ್ ಚಿತ್ರವಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Ranganayaki is a 1981 Kannada movie by Puttanna Kanagal starring Ambarish, Aarathi, Ramakrishna, Ashok, Rajanand.The movie explores the nuance of Oedipus Complex. The heroine, a popular theatre artist, falls in love with a rich, young man. The movie is playing Tomorrow, August 21 at 7:00 AM IST on Udaya Movies Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada