For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಅಣ್ಣಾವ್ರ ಐತಿಹಾಸಿಕ ಚಿತ್ರ ಮಯೂರ

  By Rajendra
  |

  ಮೊಟ್ಟಮೊದಲ ಬಾರಿಗೆ ಜೀ ಕನ್ನಡ ವಾಹಿನಿ ವರನಟ ಡಾ.ರಾಜ್ ಕುಮಾರ್ ಅಭಿನಯದ ಐತಿಹಾಸಿಕ 'ಮಯೂರ' ಚಿತ್ರವನ್ನು ಇದೇ ಭಾನುವಾರ (ಏ.22) ಪ್ರಸಾರ ಮಾಡುತ್ತಿದೆ. ಏ.24ರ ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರವನ್ನು ಪ್ರಸಾರ ಮಾಡುತ್ತಿರುವುದಾಗಿ ವಾಹಿನಿ ತಿಳಿಸಿದೆ. ಏ.22ರ ಸಂಜೆ 5 ಗಂಟೆಗೆ ಈ ಅಮೋಘ ಚಿತ್ರವನ್ನು ವೀಕ್ಷಿಸಬಹುದು.

  1975ರಲ್ಲಿ ತೆರೆಕಂಡ ಈ ಚಿತ್ರ 25 ವಾರಗಳ ಅಮೋಘ ಪ್ರದರ್ಶನ ಕಂಡು ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಹೊಸ ದಾಖಲೆಗೆ ನಾಂದಿ ಹಾಡಿತು. ಈ ಚಿತ್ರದಲ್ಲಿ ಕನ್ನಡಿಗರು ಹಾಗೂ ಕರುನಾಡಿನ ಔದಾರ್ಯವನ್ನು ಎತ್ತಿಹಿಡಿಯಲಾಗಿದೆ. ರಾಜ ಮನೆತನಕ್ಕೆ ದ್ರೋಹವೆಸಗಿದ ಪಲ್ಲವರ ಅಟ್ಟಹಾಸವನ್ನು ಮಟ್ಟಹಾಕುವುದೇ ಕಥೆಯ ಸಾರಾಂಶ.

  ದೇವುಡು ನರಸಿಂಹಶಾಸ್ತ್ರಿ ಅ ವರ ಕಾದಂಬರಿ ಆಧಾರಿತ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿತ್ತು. ಈ ಚಿತ್ರದ ಬಹುತೇಕ ಭಾಗವನ್ನು ಮೈಸೂರು ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ. ಟಿ.ಪಿ.ವೇಣುಗೋಪಾಲ್ ನಿರ್ಮಾಣದ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದರು. ರಾಜ್ ಕುಮಾರ್, ಮಂಜುಳ, ಕೆ.ಎಸ್.ಅಶ್ವತ್ಥ್, ವಜ್ರಮುನಿ, ಶ್ರೀನಾಥ್ ಅಮೋಘ ಅಭಿನಯ ಚಿತ್ರದ ಜೀವಾಳ.

  ಜಿ.ಕೆ.ವೆಂಕಟೇಶ್ ಸಂಗೀತದ ಈ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ರಾಜ್ ಕುಮಾರ್ ಹಾಡಿರುವ ಚಿ.ಉದಯಶಂಕರ್ ಸಾಹಿತ್ಯದ "ನಾನಿರುವುದೆ ನಿಮಗಾಗಿ... ಹಾಗೂ "ಈ ಮೌನವ ತಾಳೆನು....ಹಗಲೋ ಇರುಳೋ ನನಗೊಂದೂ..." ಹಾಡುಗಳು ಕೇಳಿದರೆ ಇಂದಿಗೂ ಎದೆತುಂಬಿ ಬರುತ್ತದೆ. (ಒನ್‌ಇಂಡಿಯಾ ಕನ್ನಡ)

  English summary
  Zee Kannada will be airing Kannada movie ‘Mayura’ that earned the sobriquet of "King of Cinema’ for the late Dr. Rajkuamr, a doyen of the Sandalwood industry. The film will be aired on Sunday, 22 April at 5 pm IST. It was released in 1975, this film created a record with its completing 25 weeks at the box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X