»   » ಆಗಸ್ಟ್ ಹೊತ್ತಿಗೆ ರೆಡ್ಡಿಗಳ ಕನಸಿನ ಕೂಸು ಜನನ

ಆಗಸ್ಟ್ ಹೊತ್ತಿಗೆ ರೆಡ್ಡಿಗಳ ಕನಸಿನ ಕೂಸು ಜನನ

Posted By:
Subscribe to Filmibeat Kannada
Reddy brothers set to launch news channel Janashri
ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿ, ಸುಪ್ರೀಂಕೋರ್ಟ್ ಕೇಸುಗಳ ನಡುವೆ ತಮ್ಮತಮ್ಮ ಖಾತೆಗಳ ವ್ಯವಹಾರವನ್ನೂ ನಿಭಾಯಿಸುತ್ತಿರುವ ರೆಡ್ಡಿ ಸೋದರರು ಪ್ಲಸ್ ಶ್ರೀರಾಮುಲು ಅವರ ಬಹುದಿನದ ಕನಸು ಸದ್ಯದಲ್ಲೇ ನನಸಾಗುವ ಸೂಚನೆಗಳು ಕಂಡುಬಂದಿದೆ. ಜೆಡಿಎಸ್,ಕಾಂಗ್ರೆಸ್ ಮುಖವಾಣಿಯಾಗಿ ಕನ್ನಡದಲ್ಲಿ ಸುದ್ದಿವಾಹಿನಿಗಳು ಹುಟ್ಟಿದ ಮೇಲೆ, ರೆಡ್ಡಿಗಳು ತಮ್ಮದೇ ಆದ ಸುದ್ದಿವಾಹಿನಿ ಹುಟ್ಟುಹಾಕುವ ಸನ್ನಾಹದಲ್ಲಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ.

ಈ 24X 7 ಸುದ್ದಿವಾಹಿನಿಗೆ ಗಣಿಧಣಿಗಳು ಎಷ್ಟು ಹಣ ಹೂಡಿದ್ದಾರೆ ಎಂದು ತಿಳಿದುಬಂದಿಲ್ಲ. ಗಣಿಗಾರಿಕೆಯಲ್ಲಿ ತೊಡಗಿಸುವ ಬಂಡಾವಳಕ್ಕೆ ಹೋಲಿಸಿದರೆ, ಸುದ್ದಿವಾಹಿನಿ ಆರಂಭಕ್ಕೆ ಅಲ್ಪ ಪ್ರಮಾಣದ ಮೊತ್ತವಿದ್ದರೆ ಸಾಕು. ಈಗಾಗಲೇ ಕುಮಾರಸ್ವಾಮಿ ಹಾಗೂ ದೇವೇಗೌಡರ ಜೆಡಿಎಸ್ ಮುಖವಾಣಿಯಾಗಿ ಕಸ್ತೂರಿ ವಾಹಿನಿ , ಕಾಂಗ್ರೆಸ್ ಪಕ್ಷದ ಜಾರಕಿಹೊಳಿ ಆರಂಭಿಸಿರುವ 'ಸಮಯ' ವಾಹಿನಿ ಜೊತೆಗೆ ನೇರ ಯುದ್ಧ ಸಾರಲು ರೆಡ್ಡಿಗಳ ಚಾನೆಲ್ ಬರಲಿದೆ.

ಅಂದ ಹಾಗೆ, ಈ ಹೊಸ ಸುದ್ದಿವಾಹಿನಿಗೆ 'ಜನಶ್ರೀ'ಎಂದು ಹೆಸರಿಡಲಾಗಿದೆ. ಕೇಳುವುದಕ್ಕೆ ಯಾವುದೋ ಸರ್ಕಾರಿ ಯೋಜನೆಯ ಹೆಸರಿನಂತಿದ್ದರೂ, ಇದರರ್ಥ ಬೇರೆ ಇದೆ. ಜನಾರ್ದನ ರೆಡ್ಡಿ ಹೆಸರಿನಿಂದ 'ಜನ' ಹಾಗೂ ಶ್ರೀ ರಾಮುಲು ಹೆಸರಿನಿಂದ 'ಶ್ರೀ' ತೆಗೆದು 'ಜನಶ್ರೀ' ಎಂದು ಹೆಸರಿಸಲಾಗಿದೆಯಂತೆ.

ನಗರದ ಶ್ರೀಮಂತ ಬಡಾವಣೆಗಳಲ್ಲಿ ಒಂದೆನಿಸಿರುವ ಕೋರಮಂಗಲದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಜನಶ್ರೀ ವಾಹಿನಿ ಹೊಂದಲಿದೆ. ಅಗಷ್ಟ್ ವೇಳೆಗೆ ಸುದ್ದಿವಾಹಿನಿ ಪ್ರಸಾರ ಆರಂಭವಾಗುವ ಸಾಧ್ಯತೆಯಿದ್ದರೂ, ಶುಭ ಮಹೂರ್ತಕ್ಕಾಗಿ ದಸರಾ ಅಥವಾ ದೀಪಾವಳಿಯ ವರೆಗೂ ಕಾಯಲು ರೆಡ್ಡಿಗಳು ಸಿದ್ಧರಾಗಿದ್ದರಂತೆ. ಈ ಸುದ್ದಿವಾಹಿನಿರಾಜ್ಯದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕನಸಿನ ಕೂಸಾದರೂ, ವಾಹಿನಿಯ ದೈನಂದಿನ ಕೆಲಸದಲ್ಲಿ ಅವರು ತಲೆ ಹಾಕುವುದಿಲ್ಲವಂತೆ. ಅಧಿಕೃತವಾಗಿ ಇನ್ನೂ ಸುದ್ದಿ ಹೊರಬಿದ್ದಿಲ್ಲವಾದ್ದರಿಂದ, ತಾಳ್ಮೆಯಿಂದ ಕಾಯಲೇಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada