»   » ಉದಯ ಟಿವಿಯಲ್ಲಿ ಸಂಗೀತ ಮಹಾಯುದ್ಧ

ಉದಯ ಟಿವಿಯಲ್ಲಿ ಸಂಗೀತ ಮಹಾಯುದ್ಧ

Posted By:
Subscribe to Filmibeat Kannada

ಉದಯ ಟಿವಿಯಲ್ಲಿ ವಿನೂತನ ಕಾರ್ಯಕ್ರಮ 'ಸಂಗೀತ ಮಹಾಯುದ್ಧ' ಜೂ.26ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10ರವರೆಗೆ ನಡೆಯಲಿದೆ. ಸಾಯಿಬಾಬ ಟೆಲಿ ಫಿಲ್ಮ್ ನಿರ್ಮಿಸುತ್ತಿರುವ ಕಾರ್ಯಕ್ರಮ ಇದಾಗಿದೆ.

ಗಾಯಕಿ ಸೌಮ್ಯ ರಾವ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕರು ಹಾಗೂ ನಾಯಕರುಗಳಾದ ಎಲ್ ಎನ್ ಶಾಸ್ತ್ರಿ, ರಾಜೇಶ್ ರಾಮನಾಥ್, ಹೇಮಂತ್, ನಂದಿತಾ, ಚೈತ್ರಾ ಹಾಗೂ ಡಾ.ಶಮಿತಾ ತೀರ್ಪುಗಾರರು ಎಂದು ಉದಯ ವಾಹಿನಿ ಕಾರ್ಯಕ್ರಮ ಮುಖ್ಯಸ್ಥರಾದ ನವನೀತ್ ಹಾಗೂ ರವಿ ಮೆನನ್ ತಿಳಿಸಿದ್ದಾರೆ.

ಪ್ರತಿಯೊಬ್ಬ ತೀರ್ಪುಗಾರರಿಗೆ ಮೂರು ಸ್ಪರ್ಧಿಗಳನ್ನು ನೀಡಲಾಗುತ್ತದೆ. ಒಬ್ಬ ಕಿರಿಯ ಹಾಗೂ ಇಬ್ಬರು ವಯಸ್ಕರು ಇರಲಿದ್ದಾರೆ. ಸಂಗೀತ ಮಹಾಯುದ್ಧ ದ ವಿಶೇಷವೆಂದರೆ ಇಲ್ಲಿ ತೀರ್ಪುಗಾರರು ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. ಈ ವಿಶೇಷ ಸಂಗೀತ ಕಾರ್ಯಕ್ರಮ 14 ವಾರಗಳ ಕಾಲ ನಡೆಯಲಿದೆ. ಪ್ರತಿ ಹಂತದಲ್ಲಿ 3 ಸುತ್ತುಗಳಿರಲಿವೆ ಎಂದು ಅವರು ವಿವರಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada