For Quick Alerts
  ALLOW NOTIFICATIONS  
  For Daily Alerts

  ಕಸ್ತೂರಿಯಲ್ಲಿ 'ಧಮ್' ರಿಯಾಲಿಟಿ ಶೋ

  By Staff
  |

  ಕಸ್ತೂರಿ ವಾಹಿನಿಯಲ್ಲಿ ಡಾನ್ಸ್ ರಿಯಾಲಿಟಿ ಶೋ 'ಧಮ್' ಈಗಾಗಲೇ ಪ್ರಸಾರವನ್ನು (ಡಿ.21) ಆರಂಭಿಸಿದೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದು ಧಮ್ ನ ಅಡಿಬರಹ. ಪ್ರತಿಭಾವಂತ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹಾಗು ನಿಜವಾದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಮಹತ್ವಾಕಾಂಕ್ಷೆಯಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದು ಕಸ್ತೂರಿ ವಾಹಿನಿ ತಿಳಿಸಿದೆ.

  ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8ಗಂಟೆಗೆ 'ಧಮ್' ಪ್ರಸಾರವಾಗುತ್ತಿದೆ. ಎಲ್ಲಾ ಕಾರ್ಯಕ್ರಮಗಳು ವಾರದಲ್ಲಿ ಒಂದೆರಡು ಸಂಚಿಕೆಗಳ ಮೂಲಕ ರಂಜಿಸಿದರೆ 'ಧಮ್' ವಾರದ ಐದು ದಿನ ರಂಜಿಸಲಿರುವುದು ವಿಶೇಷ. ಕನ್ನಡ ಚಿತ್ರೋದ್ಯಮಕ್ಕೆ ಪ್ರಭುದೇವ, ಹೃತಿಕ್ ರೋಷನ್, ಮೈಕೇಲ್ ಜಾಕ್ಸನ್ ರಂತಹ ನೃತ್ಯ ಪ್ರತಿಭೆಗಳು 'ಧಮ್' ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬರಲಿದ್ದಾರೆ.

  ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಅಷ್ಟೆಅಲ್ಲದೆ ಈ ಸ್ಪರ್ಧೆಗೆ ಹೊರ ರಾಜ್ಯಗಳಿಂದಲೂ ಸಹ ನೃತ್ಯಪಟುಗಳು ಬಂದು ಮನರಂಜನೆಯ ರಸದೌತಣವನ್ನು ನೀಡಲಿದ್ದಾರೆ. ಕಸ್ತೂರಿ ವಾಹಿನಿಯವರು ಅರ್ಪಿಸುವ ಈ ಕಾರ್ಯಕ್ರಮವನ್ನು ಜಗನ್ನಾಥ್ ಮಂಗಳಮೂರ್ತಿ ಯವರು ನಿರ್ದೇಶಿಸುತ್ತಿದ್ದಾರೆ.. ಈಗಾಗಲೆ ಹಲವಾರು ಯಶಸ್ವಿ ರಿಯಾಲಿಟಿ ಶೋಗಳನ್ನು ಕೊಟ್ಟ ಇವರು ರಾಷ್ಟ್ರಮಟ್ಟದಲ್ಲಿ ದಕ್ಷಿಣ ಭಾರತದ ಏಕೈಕ ರಾಷ್ಟ್ರಿಯ ರತ್ನ ಪ್ರಶಸ್ತಿ ಪುರಸ್ಕೃತರು.

  ಈ ಕಾರ್ಯಕ್ರಮದ ನಿರೂಪಕರು ಕನ್ನಡ ಉದಯೋನ್ಮುಖ ನಾಯಕ ನಟ ನವೀನ್ ಕೃಷ್ಣ, 10th Class A Section ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕ. ಕನ್ನಡ ಚಿತ್ರರಂಗದ ನೃತ್ಯ ನಿರ್ದೇಶಕ ದಿಗ್ಗಜರಲ್ಲೊಬ್ಬರಾದ ಮಾಲೂರು ಶ್ರೀನಿವಾಸ್‌ ಹಾಗೂ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆಗೈದ ಮಿನಲ್ ತೀರ್ಪುಗಾರರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X