»   » ಉದಯ ಟಿವಿಯಲ್ಲಿ ಕಿಚ್ಚ ಸುದೀಪ್ 'ಕೆಂಪೇಗೌಡ'

ಉದಯ ಟಿವಿಯಲ್ಲಿ ಕಿಚ್ಚ ಸುದೀಪ್ 'ಕೆಂಪೇಗೌಡ'

Posted By:
Subscribe to Filmibeat Kannada
kempegowda
ಉದಯ ವಾಹಿನಿಯಲ್ಲಿ ಇದೇ ಶುಕ್ರವಾರ, ದಿನಾಂಕ 23.03.2012 ರಂದು ಕಿಚ್ಚ ಸುದೀಪ್ ಹಾಗೂ ಗ್ಲಾಮರ್ ರಾಣಿ ರಾಗಿಣಿ ಅಭಿನಯದ 'ಕೆಂಪೇಗೌಡ' ಪ್ರಸಾರವಾಗಲಿದೆ. ಈ ಸೂಪರ್ ಹಿಟ್ ಚಿತ್ರ ಸಾಯಂಕಾಲ 6-00 ಗಂಟೆಗೆ ಟಿವಿ ಪರದೆಯಲ್ಲಿ ಮೂಡಿಬರಲಿದೆ. ಸಾಯಿಕುಮಾರ್ ತಮ್ಮ ರವಿಶಂಕರ್, ಈ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರಧಾರಿ.

ಕಳೆದ ವರ್ಷ ಬಿಡುಗಡೆಯಾಗಿದ್ದ 'ಕೆಂಪೇಗೌಡ' ಚಿತ್ರ, ಶತದಿನೋತ್ಸವ ಆಚರಿಸಿದೆ. ತಮಿಳಿನಲ್ಲಿ ನಟ ಸೂರ್ಯ ಅಭಿನಯಿಸಿದ್ದ 'ಸಿಂಗಂ' ಹೆಸರಿನ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ಕೂಡ ಜಯಭೇರಿ ಭಾರಿಸಿತ್ತು. ಅದೇ ಚಿತ್ರ ಕನ್ನಡದಲ್ಲಿ ಕೂಡ ಸೂಪರ್ ಹಿಟ್ ಎನಿಸಿ ಬಿಡುಗಡೆಯಾದ ನಾಲ್ಕೂ ಭಾಷೆಗಳಲ್ಲಿ ಸೂಪರ್ ಹಿಟ್ ಎನಿಸಿದೆ.

ಇಂಥ ಚಿತ್ರ ಕನ್ನಡದ 'ಕೆಂಪೇಗೌಡ' ನಾಳೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಿನಿ ಅಭಿಮಾನಿಗಳು ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ 'ಯುಗಾದಿ' ಹಬ್ಬದ ಜೊತೆಗೆ ಕೆಂಪೇಗೌಡ ಹಬ್ಬ ಕೂಡ ಸಿಗಲಿದ್ದು 'ಡಬ್ಬಲ್ ಧಮಾಕಾ' ಅನುಭವಿಸುವ ಸದಾವಕಾಶ. 'ತಪ್ಪದೇ ವೀಕ್ಷಿಸಿ' ಎಂದು ಉದಯ ಟಿವಿ ಜಾಹೀರಾತು ಹೇಳುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Kichcha Sudeep Movie Kempegowda telecasts on Friday, 23rd March in Udaya Channel. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X