»   » ಅನು ಪ್ರಭಾಕರ್ ಬರಲಿದ್ದಾರೆ ನಿಮ್ಮ ಮನೆಗೆ

ಅನು ಪ್ರಭಾಕರ್ ಬರಲಿದ್ದಾರೆ ನಿಮ್ಮ ಮನೆಗೆ

Subscribe to Filmibeat Kannada
Anu Prabhakar will be coming to your home
ಜೀ ಕನ್ನಡ ಗೃಹಿಣಿಯರನ್ನು ಗಮನದಲ್ಲಿರಿಸಿಕೊಂಡು ಹೋಂ ಮಿನಿಸ್ಟರ್ ಎಂಬ ಹೊಸ ರಿಯಾಲಿಟಿ ಶೋವನ್ನು ಪ್ರಾರಂಭಿಸಿದೆ. ಈ ಶೋವನ್ನು ಖ್ಯಾತ ನಟಿ ಅನು ಪ್ರಭಾಕರ್ ನಡೆಸಿಕೊಡಲಿದ್ದು ಈ ಶೋ ಮೂಲಕ ಅನುಪ್ರಭಾಕರ್ ಅವರನ್ನು ಕರ್ನಾಟಕದ ಆಯ್ದ ಮನೆಗಳಿಗೆ ಆಹ್ವಾನಿಸಿಕೊಳ್ಳುವ ಅಪರೂಪದ ಅವಕಾಶವೊಂದನ್ನು ಜೀ ಕನ್ನಡ ನೀಡುತ್ತಿದೆ.

ದೂರವಾಣಿ ಸಂಖ್ಯೆ ಆಧರಿಸಿ ಆಯ್ಕೆಯಾಗುವ ಸ್ಪರ್ಧಿಗಳೆ ಈ ಶೋನ ಕೇಂದ್ರ ಬಿಂದು. ನಿಗದಿತ ಬಡಾವಣೆಗಳ ಎರಡು ಮನೆಗಳನ್ನು ಅಯ್ದುಕೊಂಡು ಗೃಹಿಣಿಯರ ನಡುವೆ ಸರಳ ಸ್ಪರ್ಧೆಗಳು ಹಾಗೂ ಹಾಸ್ಯ ಪ್ರಧಾನ ಆಟಗಳನ್ನು ಏರ್ಪಡಿಸಲಾಗುತ್ತದೆ. ನಗುವಿನಲೆಯ ನಡುವೆ ಹಂತಹಂತವಾಗಿ ಸೋಲುಗೆಲುವುಣ್ಣುವವರಿಗೆ ಭರ್ಜರಿ ಬಹುಮಾನಗಳ ಕೊಡುಗೆಯೂ ಇಲ್ಲಿದೆ. ಅಂತಿಮವಾಗಿ ಎರಡೂ ಕುಟುಂಬಗಳ ನಡುವೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಅಂತಿಮ ವಿಜೇತರಿಗೆ ಹೋಂ ಮಿನಿಸ್ಟರ್ ಪಟ್ಟದೊಂದಿಗೆ ಚಿನ್ನವನ್ನು ಸಹ ಕೊಳ್ಳೆ ಹೊಡೆಯುವ ಸದಾವಕಾಶವನ್ನು ಸಹ ಹೋಂಮಿನಿಸ್ಟರ್ ನೀಡಲಿದೆ.

ಯಾವುದೇ ಸ್ಟುಡಿಯೋಗಳ ಹಂಗಿಲ್ಲದೆ ಸ್ಪರ್ಧೆ ಸ್ಪರ್ಧಾರ್ಥಿಗಳ ಸ್ವಗೃಹದಲ್ಲಿಯೇ ನಡೆಯುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷ. ಶೋಗೆ ಆಯ್ಕೆಗೊಂಡವರ ಮನೆಗೆ ಅನುಪ್ರಭಾಕರ್ ಅವರೊಂದಿಗೆ ಹೋಂಮಿನಿಸ್ಟರ್ ತಂಡ ತೆರಳಲಿದ್ದು ಸ್ಪಧಿಗಳ ಮನೆಯಂಗಳದಲ್ಲಿ ವೈವಿಧ್ಯಮಯ ಆಟಗಳ ಚಿತ್ತಾರ ಅನಾವರಣಗೊಳ್ಳಲಿದೆ. ಕನ್ನಡ ನಾಡಿನ ಮನೆಮನೆಯ ಹೋಂಮಿನಿಸ್ಟರ್‌ಗಳ್ನನು ಗುರುತಿಸಿ ಗೌರವಿಸುವ ಸಲುವಾಗಿ ಜೀ ಕನ್ನಡದ ಹೋಂಮಿನಿಸ್ಟರ್ ತಂಡ ರಾಜ್ಯದಾದ್ಯಂತ ಸಂಚರಿಸಲಿದೆ.

ಕಾರ್ಯಕ್ರಮ ಇದೇ ತಿಂಗಳ 21ರಿಂದ ಪ್ರಾರಂಭವಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ರಿಂದ 6.30ರವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada