For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಟಿವಿ ಎಡಿಟರ್ ರಂಗನಾಥ್ 'ಪಬ್ಲಿಕ್' ಆಗಿದ್ದಾರೆ

  By Mahesh
  |

  ಪತ್ರಕರ್ತ ಎಚ್.ಆರ್ ರಂಗನಾಥ್ ಅವರು ಈಗ ಅಕ್ಷರಶಃ ಪಬ್ಲಿಕ್ ಆಗುತ್ತಿದ್ದಾರೆ. ಇದೇ ತಿಂಗಳ 26ರಂದು ಅವರ ಹೊಸ ಚಾನಲ್ ಬಿಡುಗಡೆ ಆಗಲಿದೆ. ಇದಕ್ಕಾಗಿ ಪಬ್ಲಿಕ್ ಚಾನೆಲ್ ನವರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

  ನಮ್ಮ ಫೇಸ್ ಬುಕ್ ವರದಿಗಾರರ ಪ್ರಕಾರ ಬೆಂಗಳೂರು ಸುಮಾರು 180 ಕಡೆ ಪಬ್ಲಿಕ್ ಸುದ್ದಿ ವಾಹಿನಿಯ ಹೋರ್ಡಿಂಗ್ ಗಳನ್ನು ಹಾಕಲು ಸಿದ್ಧತೆ ನಡೆದಿದೆ. ಹೋರ್ಡಿಂಗ್ ನ ಮೊದಲ ವಿನ್ಯಾಸ ಸದ್ಯಕ್ಕೆ ರಂಗನಾಥ್ ಅವರ 'ಫ್ಯಾನ್ ಪೇಜ್'ನಲ್ಲಿದೆ.

  ಹೋರ್ಡಿಂಗ್ ಚಿತ್ರ ವಿನ್ಯಾಸ ಚಿತ್ರದಲ್ಲಿ ಏನಿದೆ? : ಮತ್ತೆ ಬರ್ತಿದಾರೆ ಕಾದು ನೋಡಿ ಎಂಬ ಹೆಡ್ಡಿಂಗ್ ಕೆಳಗಡೆ ಪಬ್ಲಿಕ್ ಟಿವಿ ಲೋಗೋ ಹಾಗೂ ಅದರ ಘೋಷ ವಾಕ್ಯ" ಯಾರ ಆಸ್ತಿಯೂ ಅಲ್ಲ... ಇದು ನಿಮ್ಮ ಟಿವಿ" ಕಾಣಿಸುತ್ತದೆ.

  ಆದರೆ, ವಿನ್ಯಾಸದಲ್ಲಿ ಎದ್ದು ಕಾಣುತ್ತಿರುವುದು ಎಡಿಟರ್ ಎಚ್ ಆರ್ ರಂಗನಾಥ್ ಅವರ ಭಂಗಿ.. ನೀಲಿ ಬಣ್ಣದ ಶರ್ಟ್ ಧರಿಸಿರುವ ರಂಗಣ್ಣ ಕೈಲಿ ಪೆನ್ ಹಿಡಿದು ಪೋಸ್ ನೀಡಿದ್ದಾರೆ.

  ಅವರ ಹಳೆ ವಿನ್ಯಾಸ ಬುಶ್ ಅಪ್ ಶರ್ಟ್ ಮಾಯವಾಗಿದೆ. 'ಬ್ಲೂ ಫಾರ್ ವಿಕ್ಟರಿ' ಎಂಬ ಸಂದೇಶ ಸಾರುವಂತೆ ನೋಡುತ್ತಿದ್ದಾರೆ. ಆದರೆ, ಅವರ ಎಂದಿನ ಬಿಳಿ ಮಿಶ್ರಿತ ಕಪ್ಪು ಗಡ್ಡ ಮಾತ್ರ ಟ್ರೇಡ್ ಮಾರ್ಕ್ ಆಗಿ ಉಳಿಸಿಕೊಳ್ಳಲಾಗಿದೆ.

  ಈ ಪ್ರಚಾರ ವಿನ್ಯಾಸ ನೋಡಿ ಕೆಲವು ಕೊಂಕು ನುಡಿದಿದ್ದಾರೆ ಕೂಡಾ. ಮಾಧ್ಯಮ ಎಂಬುದು ಒಬ್ಬ ವ್ಯಕ್ತಿಯ ಕೆಲಸವಲ್ಲ. ಒಬ್ಬರನ್ನು ಈ ರೀತಿ ಬಿಂಬಿಸುವುದು ಒಳ್ಳೆ ಸಂಸ್ಕೃತಿಯಲ್ಲ ಎಂಬ ಸಂದೇಶಗಳು ಫೇಸ್ ಬುಕ್ ನಲ್ಲಿ ಕಾಣಿಸಿದೆ. ಜೊತೆಗೆ ರಂಗಣ್ಣ ಅವರಿಗೆ ಶುಭ ಹಾರೈಸಿದ ಅನೇಕ ಸಂದೇಶಗಳು ಇವೆ.

  ಒಟ್ಟಿನಲ್ಲಿ ಪಬ್ಲಿಕ್ ಟಿವಿ ಶಿಸ್ತಿನಿಂದ ಪ್ರಚಾರ ಕಾರ್ಯಕ್ಕೆ ಸಜ್ಜಾಗಿದೆ. ಹೋರ್ಡಿಂಗ್ ಪ್ರಚಾರ ನಂತರ ವಿಡಿಯೋ ಕ್ಲಿಪಿಂಗ್ ಜಾಹೀರಾತು ನೀಡುವ ಇರಾದೆ ಕೂಡಾ ಇದೆ. ರಂಗಣ್ಣ ಅವರ ಐಡಿಯಾಗಳು ಒಂದೊಂದಾಗಿ ಪಬ್ಲಿಕ್ ಮುಂದೆ ಬೆತ್ತಲಾಗಿದೆ.

  English summary
  Public TV a upcoming Kannada news channel has scheduled to go on air on 26 January India Republic Day has began promotion activities.Over 180 hoardings will be placed across Bangalore will be displayed with Chairman and Managing director of Public TV HR Ranganath in a different looks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X