For Quick Alerts
  ALLOW NOTIFICATIONS  
  For Daily Alerts

  ಡಿಸ್ಕವರಿ ಚಾನೆಲ್ ಗೆ ನೂತನ ಹೆಸರು

  By Mrutyunjaya Kalmat
  |

  ನವದೆಹಲಿ, ಅ. 24 : ಮಾಹಿತಿ ಜತೆಗೆ ಮನರಂಜನೆಯನ್ನೂ ಒದಗಿಸುವ ಮೂಲಕ ಈಗಾಗಲೇ ಮನೆ ಮಾತಾಗಿರುವ ಡಿಸ್ಕವರಿ ಚಾನೆಲ್ ಹೊಸ ಅವತಾರದೊಂದಿಗೆ ವೀಕ್ಷಕರ ಮುಂದೆ ಪ್ರತ್ಯಕ್ಷವಾಗಿದೆ. ಟ್ರಾವೆಲ್ ಲಿವಿಂಗ್ ಚಾನೆಲ್ (ಟಿಎಲ್‌ಸಿ) ನಾಮಾಂಕಿತದೊಂದಿಗೆ ಹೊಸ ಲುಕ್ ಪಡೆದುಕೊಂಡಿರುವ ಡಿಸ್ಕವರಿ, ಹೊಸ ಬಗೆಯ ಕಾರ್ಯಕ್ರಮ ಪ್ರಸಾರ ಮಾಡುವ ಇರಾದೆ ವ್ಯಕ್ತಪಡಿಸಿದೆ.

  ಸದಾ ಒತ್ತಡದಲ್ಲಿ ಜೀವನ ನಡೆಸುವ ಜನ ಅತಿ ಹೆಚ್ಚಾಗಿ ಇಷ್ಟಪಡುವ ವಲಯ ಎಂದರೆ ಪ್ರವಾಸೋದ್ಯಮ. ಆ ವಲಯನ್ನೇ ಗುರಿಯಾಗಿಸಿಕೊಂಡು ಟಿಎಲ್‌ಸಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ವೀಕ್ಷಕರ ಮನ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಡಿಸ್ಕವರಿ ನೆಟ್‌ವರ್ಕ್‌ನ ಭಾರತೀಯ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಹುಲ್ ಜೊಹ್ರಿ.

  ಭಾರತದಲ್ಲಿ ಈಗಾಗಲೇ ನಾಲ್ಕು ಕೋಟಿಗೂ ಹೆಚ್ಚು ಮಂದಿ ಟಿಎಲ್‌ಸಿ ವೀಕ್ಷಿಸುತ್ತಿದ್ದಾರೆ. ಆ ಸಂಖ್ಯೆ ಡಿಸೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ ಐದು ಕೋಟಿಗೆ ತಲುಪುತ್ತದೆ ಎಂಬ ನಿರೀಕ್ಷೆ ಅವರದು.

  ಹನ್ನೊಂದು ಸರಣಿ : ಜಗತ್ತಿನ ನಾನಾ ದೇಶಗಳ ಜನರ ಆಚಾರ, ವಿಚಾರ, ಆಹಾರ, ಆರೋಗ್ಯ, ವಸ್ತ್ರ, ಆಭರಣ, ಗೃಹಾಲಂಕಾರ, ಪರಿಸರಕ್ಕೆ ಸಂಬಂಧಿಸಿದ ಹನ್ನೊಂದು ಹೊಸ ಸರಣಿಗಳನ್ನು ಟಿಎಲ್‌ಸಿ ವೀಕ್ಷಕರ ಮುಂದಿಡುತ್ತಿದೆ. ಆರು ನಿರೂಪಕರು ಈ ಎಲ್ಲ ಕಾರ್ಯಕ್ರಮಗಳಿಗೆ ಜೀವ ತುಂಬುತ್ತಿದ್ದಾರೆ. ಜಗತ್ತಿನ ಯಾವ ಮೂಲೆಯಲ್ಲಿ ಏನಿದೆ ? ಎಂಬುದನ್ನು ತನ್ನ ಕಾರ್ಯಕ್ರಮಗಳ ಮೂಲಕ ಟಿಎಲ್‌ಸಿ ಜನರಿಗೆ ತಿಳಿಸಿಕೊಡಲಿದೆ.

  ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಟಿಎಲ್‌ಸಿ ಸಮಾರಂಭದಲ್ಲಿ ಗ್ಲೋಬಲ್ ಟ್ರೆಕ್ಕರ್ ಸರಣಿಯ ನಿರೂಪಕ ಇಯಾನ್ ರೈಟ್, ವರ್ಲ್ಡ್ ಕೆಫೆ ಏಷ್ಯಾ ಕಾರ್ಯಕ್ರಮದ ಬಾಬ್ಬಿ ಚಿನ್ ಮತ್ತು ಥ್ರಸ್ಟಿ ಟ್ರಾವೆಲರ್ ಸರಣಿಯ ನಿರೂಪಕ ಕೆವಿನ್ ಬ್ರೌಚ್ ತಮ್ಮ ಅನುಭವಗಳನ್ನು ಸುದ್ದಿಗಾರರ ಜತೆ ಹಂಚಿಕೊಂಡರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X