»   » ಜೀ ಕನ್ನಡದಲ್ಲಿ ಎದ್ದೇಳು ಮಂಜುನಾಥ

ಜೀ ಕನ್ನಡದಲ್ಲಿ ಎದ್ದೇಳು ಮಂಜುನಾಥ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅಭಿನಯದ 2009ನೇ ಸಾಲಿನ ಹಿಟ್ ಚಿತ್ರ 'ಎದ್ದೇಳು ಮಂಜುನಾಥ' ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ದಿನಾಂಕ 26.12.09 ರ ಶನಿವಾರ ಸಂಜೆ 6 ಗಂಟೆಗೆ ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ವಿಶೇಷತೆಗಳ ಹೂರಣ ಎಂದೆನಿಸಿರುವ ಎದ್ದೇಳು ಮಂಜುನಾಥ ಚಿತ್ರ ಯಶಸ್ವಿ ನಿರ್ದೇಶಕ ಗುರುಪ್ರಸಾದ್ ಅವರ ಸಾರಥ್ಯದಲ್ಲಿ ಮೂಡಿಬಂದಿದ್ದು, ಕಳೆದ ಜುಲೈ ತಿಂಗಳಿನಲ್ಲಷ್ಟೇ ತೆರೆಕಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಸೋಮಾರಿತನ ಹಾಗೂ ಕುಡಿತದ ಚಟ ಒಂದು ಸುಂದರ ಸಂಸಾರವನ್ನು ಹೇಗೆ ಅವನತಿಯ ಅಂಚಿಗೆ ಕೊಂಡೊಯ್ಯುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ನವಿರಾಗಿ ನಿರೂಪಿಸಲಾಗಿದೆ. ಜಗ್ಗೇಶ್ ವೃತ್ತಿ ಜೀವನದ ಮಹತ್ವಾಕಾಂಕ್ಷೆಯ ಚಿತ್ರವೂ ಇದಾಗಿದೆ. 2009ರಲ್ಲಿ ಸಾಲು ಸಾಲು ಚಿತ್ರಗಳು ಸೋಲುಂಡಿದ್ದರೂ 'ಎದ್ದೇಳು ಮಂಜುನಾಥ' ಚಿತ್ರ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಬಾರಿ ಗಳಿಕೆ ಮಾಡುವ ಮೂಲಕ ಯಶಸ್ವಿಯಾಗಿತ್ತು.

ಚಿತ್ರದಲ್ಲಿ ಆರು ಮಧುರವಾದ ಹಾಡುಗಳಿದ್ದು ಆರತಿ ಎತ್ತಿರೇ.., ಮನೆಗೊಬ್ಬ ಮಂಜುನಾಥ ಮೇಡ್ ಇನ್ ಇಂಡಿಯಾ.., ಹಾಗೂ ಪ್ರಪಂಚವೇ ದೇವರು.., ಹಾಡುಗಳು ಕನ್ನಡಿಗರ ನಾಲಿಗೆ ಮೇಲೆ ಉಲಿಯುತ್ತಿವೆ. ಚಿತ್ರದ ಬಹಳಷ್ಟು ಭಾಗ ಕೇವಲ 10 ಚದರಡಿಯ ಕೋಣೆಯೊಂದರಲ್ಲಿ ಚಿತ್ರೀಕರಣಗೊಳ್ಳುವ ಮೂಲಕ ದಾಖಲೆ ನಿರ್ಮಿಸಿತ್ತು.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಹಿಟ್ ಹಾಗೂ ಅದ್ದೂರಿ ಚಿತ್ರಗಳನ್ನು ಆದಷ್ಟು ಬೇಗ ನಾಡಿನ ಪ್ರೇಕ್ಷಕ ಮಹಾಶಯರಿಗೆ ತಲುಪಿಸುವಲ್ಲಿ ಸದಾ ಮುಂದಿರುವ ಕನ್ನಡಿಗರ ಕಣ್ಮಣಿ ಜೀ ಕನ್ನಡ 2009ನೇ ಸಾಲಿನ ಹೊಚ್ಚ ಹೊಸ ಸೂಪರ್ ಡೂಪರ್ ಚಿತ್ರವೊಂದನ್ನು ಪುನಹ ತನ್ನ ವೀಕ್ಷಕರ ಮನೆ ಬಾಗಿಲಿಗೆ ಈ ಮೂಲಕ ತರುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada