For Quick Alerts
  ALLOW NOTIFICATIONS  
  For Daily Alerts

  ಸುವರ್ಣ ನ್ಯೂಸ್‌ನಲ್ಲಿ ರಾತ್ರಿ 11ಕ್ಕೆ ಲೈಂಗಿಕ ಸಮಸ್ಯೆಗಳು

  By Rajendra
  |

  ಸುವರ್ಣ ಸುದ್ದಿ ವಾಹಿನಿ ಲೈಂಗಿಕ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ವಿಶೇಷ ಹಾಗೂ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ. ರಾತ್ರಿ 11 ಗಂಟೆಗೆ ವಾರದಲ್ಲಿ ಎರಡು ದಿನ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಸಾಮಾನ್ಯವಾಗಿ ವೀಕ್ಷಕರು ನಿದ್ದೆಗೆ ಜಾರುವ ಈ ಸಮಯದಲ್ಲಿ ಸುದ್ದಿ ವಾಹಿನಿಗಳು ಹಳೆಯ ವಾರ್ತೆಗಳನ್ನೇ ಮರುಪ್ರಸಾರ ಮಾಡಿ ಕೈತೊಳೆದುಕೊಳ್ಳುತ್ತಿದ್ದವು.

  ಆದರೆ ಸುವರ್ಣ ವಾಹಿನಿ ಹಾಗೆ ಮಾಡದೆ 'ಪದ್ಮಿನಿ ಕ್ಲಿನಿಕ್' ಲೈವ್ ಷೋ ಆರಂಭಿಸಿ ಟಾರ್ಗೆಟ್ ವೀಕ್ಷಕರನ್ನು ಸೆಳೆಯುತ್ತಿದೆ. ಸಾಮಾನ್ಯವಾಗಿ ದಿನದ ಉಳಿದ ಸಮಯದಲ್ಲಿ ಲೈಂಗಿಕ ಸಮಸ್ಯೆಗಳ ಕಾರ್ಯಕ್ರಮ ಪ್ರಸಾರ ಮಾಡಿದರೆ ಮನೆಮಂದಿಗೆಲ್ಲಾ ಮುಜುಗರವಾಗುವ ಸಾಧ್ಯತೆಯಿತ್ತು. ಸುವರ್ಣ ವಾಹಿನಿ ಇದನ್ನು ತಪ್ಪಿಸಿದೆ.

  ಈ ಕಾರ್ಯಕ್ರಮವನ್ನು ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮ ದಿನದಿಂದ ದಿನಕ್ಕೆ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ ಬೆಳವಣಿಗೆ. ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳಲು ದಾರಿ ಹುಡುಕುತ್ತಿರುವ ಉಳಿದ ಸುದ್ದಿ ವಾಹಿಗಳ ನಿದ್ದೆಗೂ ಸಂಚಕಾರ ಬಂದಿದೆ.

  ಇದೇ ರೀತಿಯ ಕಾರ್ಯಕ್ರಮಗಳನ್ನು ಹಲವು ಚಾನಲ್‌ಗಳು ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಅಂದಹಾಗೆ ಜ.28ರ ರಾತ್ರಿ 11ಕ್ಕೆ ಈ ಕಾರ್ಯಕ್ರಮ ನೋಡಬಹುದು, ಸಮಸ್ಯೆಗಳೇನಾದರೂ ಇದ್ದರೆ ಲೈಂಗಿಕ ತಜ್ಞರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಬಹುದು. (ಒನ್‌ಇಂಡಿಯಾ ಕನ್ನಡ)

  English summary
  Padmini Clinic live show, is playing Sat, January 28 at 11:00 PM on Suvarna News Channel. In this programme Dr.Padmini Prasad answers live the queries regarding Sexual problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X