ಏಪ್ರಿಲ್‌ನಲ್ಲಿ ಸ್ಯಾಂಡಲ್‌ವುಡ್ ಟೆಲಿ ಪ್ರಶಸ್ತಿಗಳು ಪ್ರಕಟ

ಸ್ಯಾಂಡಲ್‌ವುಡ್ ಟೆಲಿ ಅವಾರ್ಡ್ಸ್ (ಎಸ್‌ಟಿಎ), ಸ್ಯಾಂಡಲ್‌ವುಡ್ ಕಿರುತೆರೆ ಪ್ರಶಸ್ತಿಗಳು ಕರ್ನಾಟಕ ಟೆಲಿವಿಷನ್ ಉದ್ಯಮದಲ್ಲಿಯೇ ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮ. ಕರ್ನಾಟಕದ ಎಲ್ಲ ಟೆಲಿವಿಷನ್ ಚಾನೆಲ್‌ಗಳನ್ನೂ ಗಮನದಲ್ಲಿ ಇರಿಸಿಕೊಂಡು ಸಂಗೀತ, ಮನೋರಂಜನೆ, ಜೀವನಶೈಲಿ, ಫ್ಯಾಷನ್ ಇತ್ಯಾದಿ ಜನಪ್ರಿಯ ವಿಭಾಗಗಳು ಮತ್ತು ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಸ್ಯಾಂಡಲ್‌ವುಡ್ ಕಿರುತೆರೆ ಪ್ರಶಸ್ತಿ, ಟೆನ್ ಆನ್ ಟೆನ್ಜ್ ಮೀಡಿಯಾ ಸಂಸ್ಥೆಯ ಪರಿಕಲ್ಪನೆ.
ಟೆನ್ ಆನ್ ಟೆರ್ನ್ಜ್ ಪ್ರತಿ ವರ್ಷ ಈ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಈ ಬಾರಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದಿನ ಏಪ್ರಿಲ್‌ನಲ್ಲಿ ನಡೆಯಲಿದೆ. ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿರುವ ಟೆನಿಸ್ ಅಂಕಣದಲ್ಲಿ ಈ ಕಾರ್ಯಕ್ರಮ ಆಕರ್ಷಕವಾಗಿ ನಡೆಯಲಿದೆ.ನಗರದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಖ್ಯಾತ ತಾರೆಯರಾದ ಕಿಟ್ಟಿ ಮತ್ತು ನೀತು ಅವರು ಪ್ರಶಸ್ತಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿರುತೆರೆಯ ಕಲಾವಿದರನ್ನು ಗುರುತಿಸುವ ಇಂಥ ಪ್ರಯತ್ನಗಳಿಗೆ ಶುಭ ಹಾರೈಸಿದರು.
2009ರ ಜುಲೈಯಿಂದ 2010ರ ಜುಲೈ ನಡುವಣ ಪ್ರಸಾರವಾದ ಟೆಲಿವಿಷನ್ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳಿಗೆ ಸುಮಾರು 40 ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತಿದೆ. ಅತ್ಯುತ್ತಮ ಕಥೆ, ಚಿತ್ರಕಥೆ, ಉತ್ತಮ ಸಂಭಾಷಣೆ, ಉತ್ತಮ ನಿರ್ದೇಶಕ, ಉತ್ತಮ ಸುದ್ದಿ ಚಾನೆಲ್, ಉತ್ತಮ ಮನೋರಂಜನಾ ಚಾನೆಲ್, ವರ್ಷದ ಅತ್ಯುತ್ತಮ ಧಾರಾವಾಹಿ ಇತ್ಯಾದಿ ಪ್ರಶಸ್ತಿಗಳನ್ನು ಇಲ್ಲಿ ಹೆಸರಿಸಬಹುದು .


Click it and Unblock the Notifications











