Just In
Don't Miss!
- News
ಶೌರ್ಯ ಪ್ರಶಸ್ತಿಗೆ ಚಿಕ್ಕಾಸೂ ಬೆಲೆ ನೀಡದ ಕೇರಳ ಸರಕಾರ; ವೃದ್ಧೆಯ ದಶಕಗಳ ಹೋರಾಟ
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನರೇಂದ್ರಬಾಬು ಶರ್ಮ ವಿಶೇಷ ಪ್ರವಚನಕ್ಕೆ ಬ್ರಹ್ಮಾಂಡ ಪ್ರತಿಕ್ರಿಯೆ
ಈ ನಿಟ್ಟಿನಲ್ಲಿ 20ನೇ ಮಾರ್ಚ್ 2011ರ ಭಾನುವಾರ ಬೆಂಗಳೂರಿನ ಜೆ.ಪಿ. ನಗರದಲ್ಲಿ ಆಯೋಜಿಸಲಾಗಿದ್ದ ನರೇಂದ್ರಬಾಬು ಶರ್ಮ ಅವರ ಪ್ರವಚನ ದಿನಾಂಕ 26 ಹಾಗೂ 27ನೇ ಮಾರ್ಚ್ 2011ರ ಶನಿವಾರ ಹಾಗೂ ಭಾನುವಾರದಂದು ಬೆಳಗ್ಗೆ 8.30 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಟಿ ವಿ ವಾಹಿನಿಗಳು ಸಾರ್ವಜನಿಕ ಪ್ರವಚನ ಏರ್ಪಡಿಸುವುದು ಕನ್ನಡ ಕಿರುತೆರೆವಾಹಿನಿಯಲ್ಲಿ ಇದೇ ಮೊದನೆಯದಾಗಿದ್ದು ಜೀ ಕನ್ನಡ ಏರ್ಪಡಿಸಿದ್ದ ನರೇಂದ್ರಬಾಬು ಶರ್ಮ ಅವರ ಪ್ರವಚನ ಮಾಲೆಗೆ ಅಭೂತಪೂರ್ವವಾದ ಪ್ರತಿಕ್ರಿಯೆ ದೊರಕಿತ್ತು. ವಿಶ್ವಕಪ್ ಕ್ರಿಕೆಟ್‌ನ ಜ್ವರದ ನಡುವೆಯೂ ಬೆಂಗಳೂರಿನಂತಹ ರಾಜಧಾನಿಯಲ್ಲಿ 8 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ತಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪ್ರವಚನಗಳ ಮೂಲಕ ನರೇಂದ್ರಬಾಬು ಶರ್ಮ ಅವರು ರಾಜ್ಯದ ಜನತೆಯ ಜೀವನಕ್ಕೆ ಉಪಯುಕ್ತವಾದ ವಿಚಾರಗಳನ್ನು ಜೀ ಕನ್ನಡದ ಮೂಲಕ ನಿತ್ಯವೂ ಹಂಚಿಕೊಳ್ಳುತ್ತಿದ್ದು ಅಪಾರ ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ಇವರ ವಿಚಾರಧಾರೆಗೆ ಮನಸೋತಿರುವ ಭಕ್ತಕೋಟಿ ಇವರನ್ನು ಸಂಪರ್ಕಿಸಲು ನಿತ್ಯವೂ ಪ್ರಯತ್ನಿಸುತ್ತಿರುವುದು ವಾಹಿನಿಯ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ವೀಕ್ಷಕರು ಅವರನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ವಿವಿಧ ಪ್ರವಚನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜೀ ಸೌಥ್‌ಹೆಡ್ ಡಾ. ಗೌತಮ್ ಮಾಚಯ್ಯ ಹೇಳಿದ್ದಾರೆ. ಇನ್ನು ಮುಂದೆಯೂ ವಾಹಿನಿ ಇಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆ ಆಯೋಜಿಸಲಿದೆ ಎಂದು ಜೀ ಕನ್ನಡದ ಪ್ರಕಟಣೆ ತಿಳಿಸಿದೆ.