twitter
    For Quick Alerts
    ALLOW NOTIFICATIONS  
    For Daily Alerts

    ಕೋಲಾರದಿಂದ ಕಿರುತೆರೆಗೆ ಪಡುವಾರಳ್ಳಿ ಪಡ್ಡೆಗಳು

    By Mahesh
    |

    ಕಿರುತೆರೆಯಲ್ಲಿನ ಮನೋರಂಜನೆ ಎಂಬ ಮಾಧ್ಯಮಕ್ಕೆ ಹೊಸ ಭಾಷ್ಯ ಬರೆದಿರುವ ಸುವರ್ಣ ವಾಹಿನಿ, ಸದಾ ಹೊಸತನಕ್ಕೆ ಹಂಬಲಿಸುತ್ತಿರುತ್ತದೆ. ಇಲ್ಲಿಯವರೆಗೆ ಕನ್ನಡದ ಜನತೆ ನೋಡಿರದ ಭಿನ್ನ ಬಗೆಯ ಕಾರ್ಯಕ್ರಮಗಳನ್ನ ಸುವರ್ಣ ವಾಹಿನಿ ಆರಂಭಿಸಿದೆ. ಸುವರ್ಣದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿರಬಹುದು ಅಥವಾ ಧಾರಾವಾಹಿಗಳು, ನೋಡುಗರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

    ಕೋಲಾರ ಸಮೀಪದ ಸುಂದರ ಹಳ್ಳಿಯೊಂದರಲ್ಲಿ ಪಡುವಾರಹಳ್ಳಿ ಪಡ್ಡೆಗಳು ಚಿತ್ರೀಕರಣಗೊಳ್ಳಲಿದೆ. ಹೊಸ ಹಾಸ್ಯ ಪ್ರತಿಭೆಗಳಿಗೆ ಜೊತೆ ಜೊತೆಗೆ, ಕನ್ನಡದ ಹಿರಿಯ ಹಾಸ್ಯ ನಟರುಗಳು ಕೂಡ ಈ ಧಾರಾವಾಹಿಯಲ್ಲಿ ನಟಿಸಲಿದ್ದಾರೆ.

    ಲಕುಮಿ, ಗುರು ರಾಘವೇಂದ್ರ ವೈಭವ, ಕ್ಲಾಸ್ ಮೇಟ್ಸ್, ಪ್ರೀತಿಯಿಂದ ಧಾರಾವಾಹಿಗಳು ನಾಡಿನೆಲ್ಲೆಡೆ ಮನೆ ಮಾತಾಗಿವೆ. ಪ್ರತಿಯೊಂದು ಧಾರಾವಾಹಿ ಕೂಡ ಸಿದ್ಧಸೂತ್ರಗಳನ್ನು ಬದಿಗಿರಿಸಿರುವ, ಹೊಸ ಪ್ರಯತ್ನಗಳಾಗಿರುವುದೇ ಇದಕ್ಕೆ ಕಾರಣ. ಮಾಮೂಲಿನ ಅತ್ತೆ ಸೊಸೆ ಜಗಳದ ಧಾರಾವಾಹಿಗಳಂತೆ ಇಲ್ಲದ ಈ ಧಾರಾವಾಹಿಗಳನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

    ಜನಮೆಚ್ಚುಗೆಯ ದಾರಿಯಲ್ಲಿ ಸಾಗುತ್ತಿರೋ ಸುವರ್ಣ, ಈಗ ಹೊಸದೊಂದು ಹಾಸ್ಯ ಧಾರಾವಾಹಿ, "ಪಡುವಾರಳ್ಳಿ ಪಡ್ಡೆಗಳು" ಆರಂಭಿಸುತ್ತಿದೆ. ನಿತ್ಯದ ಅದದೇ ಮಾಮೂಲಿನ ಕಾರ್ಯಕ್ರಮಗಳನ್ನು ನೋಡಿ ಬೋರ್ ಬಂದಿರೋ ಮಂದಿಗಾಗಿ, ಭಿನ್ನ ಬಗೆಯ ಕಾಮಿಡಿಯನ್ನ ಉಣಬಡಿಸಲು ಹೊರಟಿದೆ. ಕನ್ನಡದ ಪ್ರಸಿದ್ಧ ಹಾಸ್ಯನಟ, ಸುವರ್ಣ ವಾಹಿನಿಯಲ್ಲಿ ಹಿಂದೆ ಪ್ರಸಾರವಾದ ಯಶಸ್ವೀ ಕಾಮಿಡಿ ಧಾರಾವಾಹಿ ಎಸ್.ಎಸ್.ಎಲ್.ಸಿ ನನ್ ಮಕ್ಳು ನಿರ್ದೇಶನ ಮಾಡಿದ್ದ ಮಾಸ್ಟರ್ ಆನಂದ್, ಈ ಧಾರಾವಾಹಿಯ ನಿರ್ದೇಶಕರು.

    "ಎಲ್ಲ ಕಾಮಿಡಿ ಧಾರಾವಾಹಿಗಳು ನಗರ ಪ್ರದೇಶವನ್ನು ಕೇಂದ್ರೀಕರಿಸಿರುತ್ತವೆ. ಆದರೆ ನಮ್ಮ ಧಾರಾವಾಹಿ ಸಂಪೂರ್ಣ ಹಳ್ಳಿಯ ಪರಿಸರದಲ್ಲಿ ಚಿತ್ರಿಕರಣಗೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕ ಮಾಸ್ಟರ್ ಆನಂದ್. ಹಳ್ಳಿಯ ದೈನಂದಿನ ಜೀವನ, ಅಲ್ಲಿ ನಡಿಯೋ ಹಾಸ್ಯ ಸನ್ನಿವೇಶಗಳು ಈ ಪಡುವಾರಳ್ಳಿ ಪಡ್ದೆಗಳು ಧಾರಾವಾಹಿಯ ಜೀವಾಳ ಅನ್ನೋದು ಅವರ ಅಭಿಮತ.

    "ಮಾಸ್ಟರ್ ಆನಂದ್ ಪ್ರತಿಭಾವಂತ ನಟ, ನಿರ್ದೇಶಕ. ಈ ಹಿಂದೆ ಮಾಸ್ಟರ್ ಆನಂದ್ ನಿರ್ದೇಶಿಸಿದ್ದ ಎಸ್.ಎಸ್.ಎಲ್.ಸಿ ನನ್ ಮಕ್ಳು ಧಾರಾವಾಹಿಯನ್ನ ಕರ್ನಾಟಕದ ಮಂದಿ ಮೆಚ್ಚಿಕೊಂಡಿದ್ದರು. ಅದಕ್ಕಿಂತ ಭಿನ್ನವಾಗಿರುವ ಪಡುವಾರಳ್ಳಿ ಪಡ್ಡೆಗಳನ್ನ ಎಲ್ಲರೂ ಇಷ್ಟಪಡಲಿದ್ದಾರೆ ಎಂಬ ವಿಶ್ವಾಸವನ್ನು ಸುವರ್ಣವಾಹಿನಿಯ ಬ್ಯುಸಿನೆಸ್ ಹೆಡ್, ಅನೂಪ್ ಚಂದ್ರಶೇಖರ್ ವ್ಯಕ್ತಪಡಿಸಿದರು. ಪಡುವಾರಹಳ್ಳಿ ಪಡ್ಡೆಗಳು ಧಾರಾವಾಹಿ, ಏ.25 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರ, ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.

    English summary
    Paduvaralli Paddegalu a new comedy serial directed by popular actor Master Anand, will go on air from April 25th at 10.30pm. Earlier Anand's comedy serial SSLC Nan Maklu, ran for over 2 years in Suvarna channel.
    Monday, April 25, 2011, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X