»   »  ಬದುಕು ಜಟಕಾ ಬಂಡಿ ಎಂಬ ರಿಯಾಲಿಟಿ ಶೋ

ಬದುಕು ಜಟಕಾ ಬಂಡಿ ಎಂಬ ರಿಯಾಲಿಟಿ ಶೋ

Subscribe to Filmibeat Kannada
Malavika
ತಮಿಳು ಟಿವಿ ಧಾರಾವಾಹಿಯಲ್ಲಿ ಬಿಜಿಯಾಗಿದ್ದ ಕನ್ನಡದ ಮಾಳವಿಕಾ ಮತ್ತೆ ಕನ್ನಡಕ್ಕೆ ಹಿಂತಿರುಗಿದ್ದಾರೆ. ಜೀ ಕನ್ನಡ ಪ್ರಸ್ತುತ ಪಡಿಸುತ್ತಿರುವ 'ಬದುಕು ಜಟಕಾ ಬಂಡಿ'ಎಂಬ ರಿಯಾಲಿತಿ ಶೋ ಮೂಲಕ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ.

ಮೇ 25ರಿಂದ ಸೋಮವಾರದಿಂದ ಶುಕ್ರವಾರದ ತನಕ ಸಂಜೆ 7ಕ್ಕೆ ಪ್ರತಿ ದಿನ ಬದುಕು ಜಟಕಾ ಬಂಡಿ ಪ್ರಸಾರವಾಗುತ್ತಿದೆ. ಜೀ ಕನ್ನಡ ಮತ್ತು ಮೆಡಿಟೆಕ್ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ರೂಪಿಸಿವೆ. ಈ ಚಿತ್ರದ ನಿಜವಾದ ಹೀರೋಯಿನ್ ಮಾಳವಿಕಾ ಎಂದರೆ ತಪ್ಪಾಗುವುದಿಲ್ಲ.

ಈ ಕಾರ್ಯಕ್ರಮ ನಿಜ ಜೀವದಲ್ಲಿ ನಡೆದ ಘಟನೆಗಳನ್ನು ತೆರೆದಿಡುತ್ತದೆ. ತಮ್ಮ ಮನಸ್ಸಿನ ಭಾವನೆಗಳನ್ನು ಹೃದಯ ಕಲಕುವ ಘಟನೆಗಳನ್ನು ಹಂಚಿಕೊಳ್ಳಬೇಕು ಎನ್ನುವವರಿಗೆ ಈ ಕಾರ್ಯಕ್ರಮ ಮುಕ್ತ ವೇದಿಕೆ ಇದ್ದಂತೆ. ಈ ಕಾರ್ಯಕ್ರಮದ ನಿರೂಪಣೆ ನನಗೆ ಒಂದು ಸವಾಲಿದ್ದಂತೆ ಎನ್ನುತ್ತಾರೆ ಮಾಳವಿಕಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada