»   » ಜಗ್ಗೇಶ್ ಕೋಟ್ಯಾಧಿಪತಿ ಶೋಗೆ ಅದ್ಭುತ ಪ್ರತಿಕ್ರಿಯೆ

ಜಗ್ಗೇಶ್ ಕೋಟ್ಯಾಧಿಪತಿ ಶೋಗೆ ಅದ್ಭುತ ಪ್ರತಿಕ್ರಿಯೆ

Posted By:
Subscribe to Filmibeat Kannada
Kayyalli Koti Haelbittu Hodeeri
ಉದಯ ಟಿವಿಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆಟಕ್ಕೆ ಮೊದಲೇ ಕೋಟಿ ಕೊಟ್ಟು ಆಟ ಆಡಿಸುವ ಸೂಪರ್ ಹಿಟ್ ಗೇಮ್ ಶೋ "ಕೈಯಲ್ಲಿ ಕೋಟಿ ಹೇಳಿ ಬಿಟ್ಟು ಹೊಡೀರಿ" ನವರಸ ನಾಯಕ ಜಗ್ಗೇಶ್‌ ನಿರೂಪಣೆಯೊಂದಿಗೆ 15 ಸಂಚಿಕೆಗಳನ್ನು ಯಶಸ್ವಿಯಾಗಿ ಚಿತ್ರೀಕರಿಸಲಾಗಿದೆ. ಕೇವಲ 7 ಪ್ರಶ್ನೆಗಳಿಗೆ ಉತ್ತರಿಸಿ 1 ಕೋಟಿ ಗೆಲ್ಲುವ ಸದಾವಕಾಶವನ್ನು ಗೇಮ್ ಶೋ ನೀಡುತ್ತಿದೆ.

ಪ್ರತೀ ಸಂಚಿಕೆಯಲ್ಲೂ ಒಮ್ಮೆಗೆ ಒಂದು ಕೋಟಿ ಹಣ ಕಂಡೊಡನೆ ಉದ್ರೇಕಗೊಳ್ಳುವ ಸ್ಪರ್ಧಿಗಳು ಅದೇ ದುಡ್ಡಿನೊಂದಿಗೆ ಆಟ ಪ್ರಾರಂಭಿಸುತ್ತಾರೆ. ಸ್ಪರ್ಧಿಗಳಿಗೆ ಆಟದ ನಿಯಮದಂತೆ 7 ಪ್ರಶ್ನೆಗಳಿರುತ್ತದೆ. ನಿರೂಪಕರು ಪ್ರತಿ ಸಂಚಿಕೆಯಲ್ಲೂ ಆಟದ ನಿಯಮಗಳನ್ನು ಹೇಳಿ ಸ್ಪರ್ಧಿಗಳನ್ನು ಸಿದ್ಧಗೊಳಿಸುತ್ತಾರೆ.

ಇಡೀ ಆಟದಲ್ಲಿ ಜಗ್ಗೇಶ್‌ರ ಪಂಚ್ ಡೈಲಾಗ್ "ಟಾಪಾ ಡ್ರಾಪಾ" ಹೈಲೈಟ್ ಆಗಿ ನಿಲ್ಲುತ್ತದೆ. ಮೋಜು ಮಸ್ತಿಯೊಂದಿಗೆ ಬುದ್ಧಿಗೆ ಕಸರತ್ತು ನೀಡುತ್ತಾ ಸೋಲು-ಗೆಲುವುಗಳ ನಿರೀಕ್ಷೆಯಲ್ಲಿ ಪ್ರೇಕ್ಷಕರು ಉಸಿರು ಬಿಗಿಹಿಡಿದು ಕುರ್ಚಿಗೆ ಅಂಟಿಕೊಂಡು ಕೂಡುವಂತೆ ಮಾಡುತ್ತದೆ.

ಈವರೆಗಿನ ಆಟಗಳಲ್ಲಿ ಸ್ಪರ್ಧಿಗಳು ಗೆದ್ದಿದ್ದ ಕೇವಲ ರು.20 ಲಕ್ಷಗಳನ್ನು ಮಾತ್ರ. ಆದರೆ ಕೋಟಿ ಹಣದ ನಿಧಿಯನ್ನು ಗೆಲ್ಲಬಲ್ಲ ಕುತೂಹಲ ಉದಯ ಟಿವಿ ವೀಕ್ಷಕರಿಗೆ ಇದ್ದೇ ಇದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ. (ಒನ್‌ಇಂಡಿಯಾ ಕನ್ನಡ)

English summary
Kannada actor Navarasa Nayaka Jaggesh hosted Udaya TV game show Kayyalli Koti Haelbittu Hodeeri receives good response from audience. It is a high stakes money game show event with extraordinary jeopardy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada