»   » ಜೀ ಕನ್ನಡಲ್ಲಿ ಹೌಸ್ ಫುಲ್; ನಕ್ಕು ಹಗುರಾಗಿ!

ಜೀ ಕನ್ನಡಲ್ಲಿ ಹೌಸ್ ಫುಲ್; ನಕ್ಕು ಹಗುರಾಗಿ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಥಾನ ಪಡೆದಿರುವ ನಿರ್ದೇಶಕ, ನಟ ಹೇಮಂತ್ ಹೆಗಡೆ ನಟಿಸಿ ನಿರ್ದೇಶಿಸಿರುವ 'ಹೌಸ್‌ಫುಲ್' ಚಿತ್ರ ಜನವರಿ 30ರ ಶನಿವಾರ ಸಂಜೆ 5.30 ಗಂಟೆಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕಳೆದ ಸಾಲಿನಲ್ಲಿ ಯಶಸ್ವೀ ಎನ್ನಿಸಿದ ಬೆರಳೆಣಿಕೆಯ ಚಿತ್ರಗಳಲ್ಲಿ ಹೌಸ್‌ಫುಲ್ ಕೂಡ ಒಂದು. 100% ಕಾಮಿಡಿ 0% ಬೋರು ಎಂಬುದು ಇದರ ಘೋಷವಾಕ್ಯ. ಇದಕ್ಕೆ ತಕ್ಕಂತೆ ಹೇಮಂತ್ ಹೆಗಡೆ, ದಿಗಂತ್ ಜೋಡಿ ಆರಂಭದಿಂದ ಕೊನೆಯತನಕವೂ ನೋಡುಗರನ್ನು ನಗೆಗಡಲಲ್ಲಿ ಮುಳುಗಿಸುತ್ತದೆ.

ದಿಗಂತ್ ಶ್ರೀಮಂತ. ಸಿನಿಮಾ ನಟನಾಗುವ ಹುಚ್ಚಿದೆ. ಹೇಮಂತ್‌ಗೆ ನಿರ್ದೇಶಕನಾಗುವ ಹುಚ್ಚು. ಸರಿಯಾದ ಸಮಯ ನೋಡಿ ದಿಗಂತ್‌ನನ್ನು ಬಲೆಗೆ ಬೀಳಿಸಿಕೊಳ್ಳುತ್ತಾನೆ. ಈ ನಡುವೆ ದಿಗಂತ್ ಹುಚ್ಚಾಟಗಳಿಗೆ ಕಡಿವಾಣ ಹಾಕಲು ಆಫ್ರಿಕ ಮಾವ ಬಲವಂತರಾವ್ ಬೇರೆಯದೇ ತಂತ್ರ ಹೆಣೆಯುತ್ತಾರೆ. ಈ ಸಿಕ್ಕಿನಲ್ಲಿ ಸಿಕ್ಕಿ ಸುತ್ತುವ ಕಾಮಿಡಿ ಆಫ್ ಎರರ‍್ಸ್ ಚಿತ್ರದ ಕಥೆಯ ಜೀವಾಳ.

ನಾಯಕಿಯರಾಗಿ ವಿಶಾಖಾ ಸಿಂಗ್ ಮತ್ತು ಗೌರಿ ಚಮಕ್ ಚಮಕಾಗಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ. ಗುಳಿಕೆನ್ನೆಯ ದಿಗಂತ್ ನಗೆಯಲ್ಲೇ ಹುಚ್ಚೆಬ್ಬಿಸುತ್ತಾರೆ. ಮಾವ ಬಲವಂತರಾವ್ ಪಾತ್ರಕ್ಕೆ ಲೋಕನಾಥ್ ಜೀವತುಂಬಿದ್ದಾರೆ. ಕಿರಣ್ ಸಂಗೀತದಲ್ಲಿ ಹಾಡುಗಳು ಸೊಗಸಾಗಿವೆ.

ಮುಂಬಯಿಯ ಮಾವೆರಿಕ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಹೌಸ್‌ಫುಲ್ ಚಿತ್ರೀಕರಣ ಸಂದರ್ಭದಲ್ಲಿ ಚಾರ್ಲಿಚಾಪ್ಲಿನ್ ಪ್ರತಿಮೆಯ ವಿವಾದ ಸಾಕಷ್ಟು ಗಾಳಿ ಎಬ್ಬಿಸಿತ್ತು. ಕೊನೆಗೂ ಕಡಲಿನ ತಡಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಿಸಲು ಹೇಮಂತ್‌ಗೆ ಸಾಧ್ಯವಾಗಿರಲಿಲ್ಲ. ಅದೇನೇ ಇರಲಿ, ಜೀ ಕನ್ನಡದಲ್ಲಿ ಹೌಸ್‌ಫುಲ್ ನೋಡಿ; ವಾರಾಂತ್ಯದಲ್ಲಿ ನಕ್ಕು ಹಗುರಾಗಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada