ಕಿರುತೆರೆ ಲೋಕಕ್ಕೆ ವಿ ಹರಿಕೃಷ್ಣ ಕಾಮಿಡಿ ಕಿಕ್

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೆಸರು, ಪ್ರಶಸ್ತಿಗಳನ್ನು ಸಂಗೀತ ನಿರ್ದೇಶನದ ಮೂಲಕ ಪಡೆದಿರುವ ಸಂಗೀತ ನಿರ್ದೇಶಕ ಹರಿಕೃಷ್ಣ, ಸಾಕಷ್ಟು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರಲ್ಲದೇ ಬಹಳಷ್ಟು ಚಿತ್ರಗಳಿಗೆ ಸಂಗೀತ ನೀಡುವ ಅವಕಾಶಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಹೀಗಿದ್ದೂ ಕಿರುತೆರೆಯತ್ತ ಹೊರಳಿದ್ದಾರೆ.
ಇದೀಗ ಕಿರುತೆರೆಯತ್ತ ತಮ್ಮ ಚಿತ್ತವನ್ನು ನೆಟ್ಟಿರುವ ಈ ಸಂಗೀತ ಮಾಂತ್ರಿಕ, ಅಲ್ಲೂ ಸಕ್ಸಸ್ ಪಡೆಯಲಿದ್ದಾರಾ ಎಂಬುದನ್ನು ಭವಿಷ್ಯ ನಿರ್ಧರಿಸಲಿದೆ. ಸದ್ಯಕ್ಕೆ ಸುವರ್ಣದಲ್ಲಿ 'ಪಡವಾರಳ್ಳಿ ಪಡ್ಡೆಗಳು' ಎಂಬ ಹಾಸ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಹರಿಕೃಷ್ಣರ ಧಾರಾವಾಹಿ ಅದನ್ನು ನಿಲ್ಲಿಸಲಿದೆಯೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Music Director V Harikrishna produces comedy serial for Suvarna Channel shortly.


Click it and Unblock the Notifications











