»   » ಮೇ.29ರಂದು ಜೀ ಕನ್ನಡ ನೋಡಲು ಮರೀಬೇಡಿ

ಮೇ.29ರಂದು ಜೀ ಕನ್ನಡ ನೋಡಲು ಮರೀಬೇಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೆರವೇರಿದ ಇನ್ನೋವೆಟಿವ್ ಫಿಲಿಂ ಸಿಟಿ ಪ್ರಶಸ್ತಿ ಪ್ರಧಾನ ಸಮಾರಂಭದ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದ್ದು ಮೇ .29ರ ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಅದ್ದೂರಿ ಸಮಾರಂಭ ಬೆಂಗಳೂರಿನ ಹೊರವಲಯದಲ್ಲಿರುವ ಇನ್ನೋವೆಟಿವೆ ಫಿಲಿಂ ಸಿಟಿಯಲ್ಲಿ ಮೇ .1ನೇ ತಾರೀಕು ನೆರವೇರಿತ್ತು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಚಿತ್ರರಂಗದ ಅಗ್ರಗಣ್ಯರಾದ ಪಾರ್ವತಮ್ಮ ರಾಜ್ ಕುಮಾರ್, ಅಂಬರೀಷ್, ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ನಟಿ ರಮ್ಯಾ, ಪೂಜಾಗಾಂಧಿ ಹಾಗೂ ಹಿರಿಯ ಕಲಾವಿದರು ಈ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಪ್ರಶಸ್ತಿ ಪ್ರಧಾನ ಸಮಾರಂಭದೊಂದಿಗೆ ಖ್ಯಾತ ನಟ ನಟಿಯರು ಹಾಗೂ ಉದಯೋನ್ಮುಕ ಕಲಾವಿದರ ವೈವಿಧ್ಯಮಯ ನೃತ್ಯ ಹಾಗೂ ಹಾಸ್ಯ ಪ್ರಧಾನ ಕಾರ್ಯಕ್ರಮಗಳು ಪ್ರದರ್ಶನಗೊಂಡಿದ್ದವು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮೈನವಿರೇಳಿಸುವ ಪ್ರದರ್ಶನಗಳು ಕಾರ್ಯಕ್ರಮದಲ್ಲಿ ಪ್ರಸಾರವಾಗಲಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada