»   » ಜೀ ಕನ್ನಡದಿಂದ ಮರಿ ಕೋಗಿಲೆಗಳಿಗೆ ಆಹ್ವಾನ

ಜೀ ಕನ್ನಡದಿಂದ ಮರಿ ಕೋಗಿಲೆಗಳಿಗೆ ಆಹ್ವಾನ

Posted By:
Subscribe to Filmibeat Kannada
Zee Kannada Sarigamapa little champs
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಮುಂದಿನ ಭಾಗವಾದ ಸರಿಗಮಪ ರಾಕ್ ಅಂಡ್ ರೋಲ್ ಕಾರ್ಯಕ್ರಮದ ಪ್ರತಿಭಾಶೋಧಕ್ಕಾಗಿ ಕರ್ನಾಟಕದಾದ್ಯಂತ ಜೀ ಕನ್ನಡ ತಂಡ ಸಂಚರಿಸಲಿದ್ದು ಬೆಂಗಳೂರಿನಲ್ಲಿ ಡಿಸೆಂಬರ್ 30 ಮತ್ತು 31ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಬೆಂಗಳೂರು ಕಬ್ಬನ್ ಪಾರ್ಕ್ ನ, ಎನ್.ಜಿ.ಒ ಭವನದಲ್ಲಿ ಬೆಳಿಗ್ಗೆ 9 ರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 9 ವರ್ಷದಿಂದ 13 ವರ್ಷದೊಳಗಿನ ಉತ್ತಮವಾಗಿ ಹಾಡುವವರು ಹಾಗೂ ಅದೇ ವಯೋಮಿತಿಯ ಉತ್ತಮ ನೃತ್ಯ ಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಆಯ್ಕೆ ಪ್ರಕ್ರಿಯೆಗೆ ಸ್ವ ವಿವರ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜನ್ಮ ದಾಖಲೆ, ವಿಳಾಸ ದೃಢೀಕರಣದೊಂದಿಗೆ ಹಾಜರಾಗಬಹುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ರಾಮಕೃಷ್ಣ: 98800 34834, ಮಂಜುನಾಥ: 97399 96717

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada