»   » ಜೀ ಕನ್ನಡದಲ್ಲಿ ಹಾಲು ಜೇನು ನಾನು ನೀನು ಶೋ

ಜೀ ಕನ್ನಡದಲ್ಲಿ ಹಾಲು ಜೇನು ನಾನು ನೀನು ಶೋ

Posted By:
Subscribe to Filmibeat Kannada
Haalu Jenu Naanu Neenu
ನೂತನ ದಂಪತಿಗಳು ಮಧುಚಂದ್ರದಲ್ಲಿ ಮಿಂದೇಳಲು ಸುವರ್ಣಾವಕಾಶವೊಂದು ಅವರ ಮುಂಬಾಗಿಲಿಗೆ ಬಂದು ಬಿದ್ದಿದೆ. ಈ ಅಪೂರ್ವ ಅವಕಾಶವನ್ನು ಜೀ ಕನ್ನಡ ವಾಹಿನಿ ತನ್ನ ನೂತನ ರಿಯಾಲಿಟಿ ಶೋ 'ಹಾಲು ಜೇನು ನಾನು ನೀನು'ನಲ್ಲಿ ಕಲ್ಪಿಸಲಿದೆ.

ಈ ರಿಯಾಲಿಟಿಶೋನ ನಿರೂಪಕಿ ಛಾಯಾಸಿಂಗ್. ಇದು ಅವರ ಮೊದಲ ಕಿರುತೆರೆ ಕಾರ್ಯಕ್ರಮ. 'ಹಾಲು ಜೇನು ನಾನು ನೀನು' ರಿಯಾಲಿಟಿ ಶೋನಲ್ಲಿ ಒಟ್ಟು ನಾಲ್ಕು ಸುತ್ತುಗಳಿರುತ್ತವೆ. ಹಾಸ್ಯ, ಭಾವನಾತ್ಮಕ ಮತ್ತು ಸ್ಪರ್ಧಾತ್ಮಕ ಅಂಶಳಿಂದ ಕೂಡಿರುತ್ತದೆ. ಮೂರನೇ ಸುತ್ತಿನಲ್ಲಿ ಗೇಮ್ ಶೋ. ನಾಲ್ಕನೇ ಸುತ್ತಿನಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಶೋನಲ್ಲಿ ಗೆದ್ದ ದಂಪತಿಗಳಿಗೆ ವಿದೇಶದಲ್ಲಿ ಮಧುಚಂದ್ರ ಅವಕಾಶ ಸಿಗಲಿದೆ. ಈ ಸದಾವಕಾಶ ಸೂಪರ್ ವಿನ್ನರ್‌ಗೆ ಮಾತ್ರ. ಇನ್ನು ವಿನ್ನರ್ ಹಾಗೂ ರನ್ನರ್ ಅಪ್‌ಗೂ ಬಂಪರ್ ಬಹುಮಾನಗಳಿರುತ್ತವೆ. ಈ ಶೋನಲ್ಲಿ ಹಾಸ್ಯಕ್ಕೂ ಒತ್ತು ನೀಡಲಾಗಿದೆ.

ಗಂಡಹೆಂಡತಿ ನಡುವೆ ತಪ್ಪೊಪ್ಪಿಗೆ ಮತ್ತು ಶಿಕ್ಷೆ, ಉಡುಗೊರೆ, ಡ್ಯುಯೆಟ್, ಮಿಮಿಕ್ರಿ ಅಂಶಗಳೂ ಇರುತ್ತವೆ. ಏ.9ರಿಂದ ಪ್ರತಿ ಸೋಮವಾರ ಮತ್ತು ಮಂಗಳವಾರ ರಾತ್ರಿ 9 ರಿಂದ 10 ಗಂಟೆಗೆ 'ಹಾಲು ಜೇನು ನೀನು ನಾನು' ಪ್ರಸಾರವಾಗಲಿದೆ. ಶೋನ ಪ್ರಾಯೋಜಕರು ಹಿಮಾನಿ ನವರತ್ನ ಕೂಲ್ ಟಾಲ್ಕ್. (ಒನ್‌ಇಂಡಿಯಾ ಕನ್ನಡ)

English summary
The Zee Network’s Kannada offering Zee-Kannada will start airing a 1 hr reality show 'Haalu Jenu Neenu Naanu' for married couple, twice a week. Haalu Jenu Neenu Naanu will be on every Monday and Tuesday at 9 to 10 pm IST from 9th April, 2012. Actress Chaya Singh is heading reality show.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X