»   » ಸ್ಟಾರ್ ಸುವರ್ಣ 'ಪರಿವಾರ್ ಅವಾರ್ಡ್ಸ್'ನಲ್ಲಿ ಸಿನಿಮಾ ತಾರೆಯರ ಕಲರವ

ಸ್ಟಾರ್ ಸುವರ್ಣ 'ಪರಿವಾರ್ ಅವಾರ್ಡ್ಸ್'ನಲ್ಲಿ ಸಿನಿಮಾ ತಾರೆಯರ ಕಲರವ

Posted By:
Subscribe to Filmibeat Kannada

ಸಂಬಂಧದ ಹೊಸ ಸ್ಪಂದನ ಎಂಬ ಮುನ್ನುಡಿಯೊಂದಿಗೆ ಕನ್ನಡಿಗರ ಭಾವನೆಗಳಲ್ಲಿ ಬೆಸೆದುಕೊಂಡಿರುವ ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ '5ನೇ ಸ್ಟಾರ್ ಸುವರ್ಣ ಪರಿವಾರ್ ಅವಾರ್ಡ್ಸ್' ಕಾರ್ಯಕ್ರಮವು ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳ ಕಲಾವಿದರು ಹಾಗೂ ತಂತ್ರಜ್ಞರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಜನ ಮೆಚ್ಚಿದ ನಾಯಕ -ನಾಯಕಿ, ಜನ ಮೆಚ್ಚಿದ ಧಾರಾವಾಹಿ ಸೇರಿದಂತೆ ಒಟ್ಟು 36 ಅವಾರ್ಡ್ಸಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ಪರಿವಾರದ ನಟ ನಟಿಯರು ಭರ್ಜರಿಯಾಗಿ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಇವರಿಗೆ ಜೊತೆಯಾಗಿ ಸಿನಿಮಾ ತಾರೆಯರು ಕೂಡ ಭಾಗಿಯಾಗಿ ಕಾರ್ಯಕ್ರಮದ ಮೆರಗುನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಯಾರೆಲ್ಲಾ ಭಾಗವಹಿಸಿದ್ದರು ಎಂಬುದನ್ನ ಚಿತ್ರಗಳ ಸಮೇತ ಮುಂದೆ ನೋಡಿ.....

5ನೇ 'ಪರಿವಾರ್ ಪ್ರಶಸ್ತಿ'

'ಸ್ಟಾರ್ ಸುವರ್ಣ ಪರಿವಾರ್ ಅವಾರ್ಡ್' ಇದು ಕಿರುತೆರೆಯ ಕಲಾವಿದರ ಸಂಭ್ರಮ. ಧಾರವಾಹಿಯ ನಟ, ನಟಿ, ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ಕಲಾವಿದರಲ್ಲಿ ಅತ್ಯುತ್ತಮರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮ.

ರಾಕಿಂಗ್ ಸ್ಟಾರ್ ಯಶ್

ಸುರ್ವಣ ಪರಿವಾರ್ ಅವಾರ್ಡ್ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿದ್ದು, ಅದರ ಪ್ರೋಮೋ ಕೂಡ ಈಗಾಗಲೇ ಬಿಡುಗಡೆಯಾಗಿದೆ.

ರಾಗಿಣಿ ಡ್ಯಾನ್ಸ್

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ಭಾಗವಹಿಸಿದ್ದು, ಕಲರ್ ಫುಲ್ ಸ್ಟೇಜ್ ಮೇಲೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

'ಆಪರೇಷನ್ ಅಲಮೇಲಮ್ಮ' ಟೀಮ್ ಭಾಗಿ

ಸುವರ್ಣ ಪರಿವಾರ್ ಅವಾರ್ಡ್ ಕಾರ್ಯಕ್ರಮದಲ್ಲಿ 'ಆಪರೇಷನ್ ಅಲಮೇಲಮ್ಮ' ಚಿತ್ರದ ನಾಯಕ ರಿಷಿ ಹಾಗೂ ನಾಯಕಿ ಶ್ರದ್ಧಾ ಶ್ರೀನಾಥ್ ಕೂಡ ಅತಿಥಿಯಾಗಿದ್ದರು

ಸಿನಿಮಾ ತಾರೆಯರ ರಂಗು

ಯಶ್, ರಾಗಿಣಿ ಅಷ್ಟೇ ಅಲ್ಲದೇ, ಸೃಜನ್ ಲೋಕೇಶ್, ಹರ್ಷಿಕಾ ಪೂಣಚ್ಚ, ಅನುಪ್ರಭಾಕರ್, ಶ್ರಾವ್ಯಾ ರಾವ್, ರಘು ಮುಖರ್ಜಿ, ರಘು ದೀಕ್ಷಿತ್, ಭಾವನಾ, ಶರ್ಮಿಳಾ ಮಾಂಡ್ರೆ, ಹಾಗೂ ರಾಜೇಶ್ ನಟರಂಗ ಕೂಡ 'ಸುವರ್ಣ ಪರಿವಾರ್ ಅವಾರ್ಡ್' ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.

ಫುಲ್ ಮನರಂಜನೆ

ಇವರ ಜೊತೆ ನಾವೂ ಕಮ್ಮಿ ಇಲ್ಲ ಅಂತ ಪರಿವಾರದ ಪುಟಾಣಿಗಳಾದ 'ನೀಲಿ' ಧಾರಾವಾಹಿಯ ಸಾನ್ವಿ, 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ದೀಕ್ಷಾ, 'ತ್ರಿವೇಣಿ ಸಂಗಮ' ಧಾರಾವಾಹಿಯ ಅಜಿಂತ್ಯಾ ಹಾಗೂ ತ್ರಿವೇಣಿ ಕೂಡಾ ಕುಣಿದು ಕುಪ್ಪಳಿಸಿದರು.

ಅಕುಲ್ ಬಾಲಾಜಿ ನಿರೂಪಣೆ

ಸ್ಟಾರ್ ಆಂಕರ್ಸ್ ಅಕುಲ್ ಬಾಲಾಜಿ ಹಾಗೂ ಶ್ವೇತಾ ಚಂಗಪ್ಪ ಈ ಕಾರ್ಯಕ್ರಮವನ್ನ ನಿರೂಪಣೆ ಕಾರ್ಯಕ್ರಮ ಮಾಡಿದ್ದಾರೆ. ಇವರ ಜೊತೆ ಶಾಲಿನಿ ಹಾಗೂ ಪವನ್ ಸಾಥ್ ಕೊಟ್ಟಿದ್ದಾರೆ.

ಯಾವಾಗ ಪ್ರಸಾರ

'5ನೇ ಸ್ಟಾರ್ ಸುವರ್ಣ ಪರಿವಾರ್ ಅವಾರ್ಡ್ಸ' ಇದೇ ಜೂನ್ 17 ಮತ್ತು 18 ರಂದು (ಶನಿವಾರ ಮತ್ತು ಭಾನುವಾರ) ಸಂಜೆ 6 ಗಂಟೆಯಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Celebrities Participants in 5th Star Suvarna Parivar Award at Star Suvarna Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada