»   » ಆರು ಜನ 'ಕಾಮನ್ ಮ್ಯಾನ್'ಗೆ ಒಲಿದ 'ದೊಡ್ಮನೆ' ಅವಕಾಶ

ಆರು ಜನ 'ಕಾಮನ್ ಮ್ಯಾನ್'ಗೆ ಒಲಿದ 'ದೊಡ್ಮನೆ' ಅವಕಾಶ

Posted By:
Subscribe to Filmibeat Kannada

ಕಳೆದ ನಾಲ್ಕು ಸೀಸನ್ ಗಳಿಗೆ ಹೋಲಿಸಿದರೆ, ಈ ಬಾರಿಯ ಕನ್ನಡದ 'ಬಿಗ್ ಬಾಸ್' ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಇದೇ ಮೊದಲ ಬಾರಿಗೆ 'ಬಿಗ್' ಮನೆಯೊಳಗೆ ಜನ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗಿದೆ.

ಕಾಮನ್ ಮ್ಯಾನ್ ಗೂ 'ಬಿಗ್ ಬಾಸ್' ವೇದಿಕೆ ನೀಡಿದ್ದು, ಸೆಲೆಬ್ರಿಟಿಗಳ ಜೊತೆಗೆ ಶ್ರೀಸಾಮಾನ್ಯರು 'ದೊಡ್ಮನೆ'ಯೊಳಗೆ ಕಾಲಿಡಲಿದ್ದಾರೆ.

'ಬಿಗ್ ಬಾಸ್ ಕನ್ನಡ-5': ಈ ಬಾರಿ ಹೊಸದೇನಿದೆ.?

ಹಾಗಾದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎಷ್ಟು ಜನ ಸೆಲೆಬ್ರಿಟಿಗಳು ಇರ್ತಾರೆ.? ಎಷ್ಟು ಜನ ಕಾಮನ್ ಮ್ಯಾನ್ ಇರ್ತಾರೆ.? ಎಂಬ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮುಂದೆ ಓದಿರಿ...

ಒಟ್ಟು ಸೆಲೆಬ್ರಿಟಿ ಸ್ಪರ್ಧಿಗಳ ಸಂಖ್ಯೆ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಒಟ್ಟು 17 ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. 17 ಸ್ಪರ್ಧಿಗಳ ಪೈಕಿ 11 ಸೆಲೆಬ್ರಿಟಿಗಳು 'ಬಿಗ್ ಬಾಸ್' ಮನೆ ಪ್ರವೇಶ ಮಾಡಲಿದ್ದಾರೆ.

'ಬಿಗ್ ಬಾಸ್'ಗೆ ಬಂದಿರುವ ವಿಚಿತ್ರ, ವಿಭಿನ್ನ ಆಡಿಷನ್ ಗಳ ವಿಡಿಯೋ ನೋಡಿ

ಆರು ಜನಸಾಮಾನ್ಯರಿಗೆ ಸುವರ್ಣಾವಕಾಶ

ಕರ್ನಾಟಕದ ವಿವಿಧ ಭಾಗಗಳಿಂದ ಆಯ್ಕೆ ಆಗಿರುವ ಒಟ್ಟು ಆರು ಜನಸಾಮಾನ್ಯರಿಗೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

'ಬಿಗ್ ಬಾಸ್'ಗೆ ಜನಸಾಮಾನ್ಯರ ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಜನ ಸಾಮಾನ್ಯರ ಆಡಿಷನ್ಸ್

ಸುಮಾರು ನಲವತ್ತು ಸಾವಿರ ಜನರು ತಮ್ಮ ವಿಡಿಯೋ ಸಮೇತ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗಿಯಾಗಲು ಅರ್ಜಿ ಹಾಕಿದ್ದರು. ಆ ಪೈಕಿ 150 ಜನರನ್ನು ಮುಖಾಮುಖಿ ಭೇಟಿ ಮಾಡಿ ಒಟ್ಟು 6 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

ಕುತೂಹಲ ಇದೆ

ಸೆಲೆಬ್ರಿಟಿ ಹಾಗೂ ಕಾಮನ್ ಮ್ಯಾನ್ ಮಿಕ್ಸ್ ಇರುವ ಈ ಬಾರಿಯ 'ಬಿಗ್ ಬಾಸ್' ಹೇಗೆ ಮೂಡಿ ಬರುತ್ತದೆ ಎಂಬುದನ್ನ ನೋಡಲು ಇನ್ನೆರಡೇ ದಿನ ಕಾಯಿರಿ. ಭಾನುವಾರದಿಂದ 'ಬಿಗ್ ಬಾಸ್ ಕನ್ನಡ-5' ಆರಂಭ ಆಗಲಿದೆ.

English summary
6 Common Men and 11 Celebrities to contest in Bigg Boss Kannada 5 Reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X