For Quick Alerts
ALLOW NOTIFICATIONS  
For Daily Alerts

  ಚಿತ್ರಪಟ: ಸ್ಟಾರ್ ಸುವರ್ಣದಲ್ಲಿ 63ನೇ 'ಫಿಲ್ಮ್ ಫೇರ್' ಪ್ರಶಸ್ತಿಯ ಝಲಕ್

  By Suneetha
  |

  ಸಿನಿಮಾ ಸಾಧಕರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಕಲರ್ ಫುಲ್ ಸಮಾರಂಭ ಇದೇ ಭಾನುವಾರ (ಆಗಸ್ಟ್ 7) ಸಂಜೆ 4.30ಕ್ಕೆ, ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

  ಹೈದರಾಬಾದ್ ನ ಇತಿಹಾಸದಲ್ಲಿ ಅಚ್ಚಳಿಯದ ದಿನವಾಗಿ ಹೊರಹೊಮ್ಮಿ, ಇಡೀ ದಕ್ಷಿಣ ಭಾರತದ 4 ಭಾಷೆಗಳ ಸಿನಿಮಾ ತಾರೆಯರು ಒಂದೇ ವೇದಿಕೆಯನ್ನು ಹಂಚಿಕೊಂಡ ಸುಮಧುರ ಕ್ಷಣ.

  ಪ್ರತಿಷ್ಠಿತ 63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 18 ರಂದು ಹೈದರಾಬಾದ್ ನಲ್ಲಿರುವ 'ಹೈದರಾಬಾದ್ ಕನ್ವೆನ್ಷನ್ ಸೆಂಟರ್'ನಲ್ಲಿ ಅದ್ಧೂರಿಯಾಗಿ ನಡೆದಿತ್ತು.[63ನೇ ಫಿಲಂಫೇರ್ ಪ್ರಶಸ್ತಿ: ಪುನೀತ್ ಮತ್ತು ಪಾರುಲ್ 'ದಿ ಬೆಸ್ಟ್'.!]

  63ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದ ಬೃಹತ್ ವೇದಿಕೆಯಲ್ಲಿ ಒಟ್ಟು 46 ಪ್ರಶಸ್ತಿಗಳಿದ್ದು, ಕಲಾವಿದರಿಗೆ, ತಂತ್ರಜ್ಞರಿಗೆ, ಗಾಯಕರಿಗೆ, ಸಾಹಿತ್ಯಕ್ಕೆ, ಉತ್ತಮ ಚಿತ್ರಕ್ಕೆ ಹಾಗೂ ನಿರ್ಮಾಪಕರಿಗೆ ಈ ಪ್ರಶಸ್ತಿಗಳು ಸಂದಿವೆ. ಜೊತೆಗೆ ಜೀವಮಾನ ಸಾಧನೆಗೆ ವಿಶೇಷ ಗೌರವವನ್ನು ಇದೇ ಸಂದರ್ಭದಲ್ಲಿ ನೀಡಲಾಗಿದೆ.

  ಇನ್ನು ಕನ್ನಡ ಚಿತ್ರರಂಗಕ್ಕೆ ಒಟ್ಟು 13 ಪ್ರಶಸ್ತಿಗಳು ಲಭಿಸಿದ್ದು, ಅವುಗಳಲ್ಲಿ ಉತ್ತಮ ನಾಯಕ-ನಾಯಕಿ, ಸಹಕಲಾವಿದರು, ಹಿನ್ನಲೆ ಗಾಯಕ, ಉತ್ತಮ ಚಿತ್ರ ಮತ್ತು ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಪ್ರಮುಖವಾಗಿವೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ....

  ಸ್ಟಾರ್ ನಟ-ನಟಿಯರ ಕಲರವ

  ವೈಭವಪೂರ್ಣ ಸಮಾರಂಭದಲ್ಲಿ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್, ಮೇಗಾ ಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಡೈಲಾಗ್ ‍ಕಿಂಗ್ ಸಾಯಿಕುಮಾರ್, ಖುಷ್ಬು, ಜಯಪ್ರದಾ, ಸುಮಲತಾ, ಸುಧಾರಾಣಿ, ರಾಗಿಣಿ ಧ್ವಿವೇದಿ, ಪಾರುಲ್ ಯಾದವ್ ಹೀಗೆ ಇನ್ನು ಅನೇಕ ಘಟಾನುಘಟಿ ಸ್ಟಾರ್ ನಟ-ನಟಿಯರು ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದಿದ್ದಾರೆ. [ಯಾರು ಅತ್ಯುತ್ತಮ ನಟ: ಯಶ್ ಅಥವಾ ಪುನೀತ್.?]

  ನಟಿ ಅಮೂಲ್ಯ

  ಕನ್ನಡ ಚಿತ್ರರಂಗದ ಸ್ಟಾರ್ ನಟಿ, ಬೇಬಿ ಡಾಲ್ ಅಮೂಲ್ಯ ಅವರು 63ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದಾರೆ.[63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ]

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ತಮಿಳಿನ ಖ್ಯಾತ ನಟ ಆರ್ಯ ಅವರಿಂದ 'ರಣವಿಕ್ರಮ' ನಟನೆಗಾಗಿ 'ಉತ್ತಮ ನಟ' ಪ್ರಶಸ್ತಿ ಸ್ವೀಕರಿಸಿದ ಕನ್ನಡ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

  ನಟಿ ಪಾರುಲ್ ಯಾದವ್

  'ಆಟಗಾರ' ಚಿತ್ರದ ಅಭಿನಯಕ್ಕಾಗಿ 'ಉತ್ತಮ ನಟಿ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಟಿ ಪಾರುಲ್ ಯಾದವ್. ನಟಿ ಸುಮಲತಾ ಅವರು ಪ್ರಶಸ್ತಿ ನೀಡಿ ಗೌರವಿಸಿದರು.[61ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಮಸ್ತಾನಿ' ಬಗಲಿಗೆ 9 ಪ್ರಶಸ್ತಿ]

  ನಟಿ ಹರಿಪ್ರಿಯಾ ಝಲಕ್

  ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ಹರಿಪ್ರಿಯಾ ಅವರ ಭರ್ಜರಿ ನೃತ್ಯದ ಝಲಕ್ ಹೀಗಿದೆ.

  ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್

  ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರಿಗೆ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿತು.

  ನಟಿ ಪ್ರಣೀತಾ ಸುಭಾಶ್

  'ಪೊರ್ಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಪ್ರಣೀತಾ ಸುಭಾಶ್ ಅವರು ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದರು.

  ನಟಿ ರಾಗಿಣಿ ದ್ವಿವೇದಿ

  ಕನ್ನಡ ನಟಿ ರಾಗಿಣಿ ದ್ವಿವೇದಿ ಅವರು ತೆಲುಗು ನಟರಾದ ಅಲ್ಲು ಅರ್ಜುನ್ ಮತ್ತು ರಾಣಾ ದಗ್ಗುಬಾಟಿ ಅವರ ಜೊತೆ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾದ ಪರಿ.

  ಶೀತಲ್ ಶೆಟ್ಟಿ-ನಿರಂಜನ್

  ಖ್ಯಾತ ವಾರ್ತಾವಾಚಕಿ ಶೀತಲ್ ಶೆಟ್ಟಿ ಅವರು ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕರಾಗಿ ನಿರಂಜನ್ ಅವರ ಜೊತೆ ಕಾಣಿಸಿಕೊಂಡಿದ್ದಾರೆ.

  ಇದೇ ಭಾನುವಾರ

  63ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದ ಈ ಎಲ್ಲಾ ಮನಮೋಹಕ ಕ್ಷಣಗಳು ಇದೇ ಭಾನುವಾರ (ಆಗಸ್ಟ್ 7) ಸಂಜೆ 4.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  'Filmfare' honours the best actors and the best technicians from the 4 Southern languages in a grand event. This year, it was held in Hyderabad glittering with stars and celebration. This extraordinary event will be telecast on Sunday, 7th August 2016 at 4:30 PM on ‘Star Suvarna’.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more