»   » 100 ಅಡಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ

100 ಅಡಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ

Posted By:
Subscribe to Filmibeat Kannada

ಡ್ಯಾನ್ಸ್ ಶೋಗಳೆಂದ್ರೆ...ಕಲರ್ ಫುಲ್ ಸೆಟ್, ವರ್ಣರಂಜಿತ ವೇದಿಕೆ, ಇರುವ ವೇದಿಕೆಯಲ್ಲೇ ಭಿನ್ನ ವಿಭಿನ್ನ ನೃತ್ಯ ಪ್ರದರ್ಶನ, ಕೊನೆಗೆ ಅದೇ ವೇದಿಕೆಯಲ್ಲಿ ಫೈನಲ್.

ಒಂದೇ ವೇದಿಕೆಯಲ್ಲಿ ಒಂದು ಇಡೀ 'ಡ್ಯಾನ್ಸ್ ಶೋ' ಚಿತ್ರೀಕರಣವಾಗಿರುವುದನ್ನ ನೀವು ಹಲವು ವಾಹಿನಿಗಳಲ್ಲಿ ನೋಡಿದ್ದೀರಾ. ಎಲ್ಲರಿಗಿಂತ ಕೊಂಚ ವಿಭಿನ್ನವಾಗಿ ಆಲೋಚಿಸಿರುವ ಕನ್ನಡದ ಜನಪ್ರಿಯ ಸುವರ್ಣ ವಾಹಿನಿ, 'ಡ್ಯಾನ್ಸ್ ಡ್ಯಾನ್ಸ್' ಶೋ ಮೂಲಕ ಒಂದು ಹೊಸ ಸಾಹಸಕ್ಕೆ ಕೈ ಹಾಕಿದೆ. [ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಡ್ಯಾನ್ಸ್ ಶೋ.!]

a-new-adventure-in-suvarna-channel-s-dance-dance-show

ದಕ್ಷಿಣ ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ ನಡೆದಿದೆ. ಒಟ್ಟು 10 ಜೋಡಿಗಳು 100 ಅಡಿ ಎತ್ತರದ ವೇದಿಕೆಯ ಮೇಲೆ ಭಯ ಬಿಟ್ಟು ನೃತ್ಯ ಪ್ರದರ್ಶನ ಮಾಡಿದ್ದಾರೆ.

a-new-adventure-in-suvarna-channel-s-dance-dance-show

ಜೋಡಿಗಳ ಸಾಹಸ ಕಂಡು ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ನಿಬ್ಬೆರಗಾಗಿದ್ದಾರೆ. ನಿರ್ಣಾಯಕರಾಗಿರುವ ಶರ್ಮಿಳಾ ಮಾಂಡ್ರೆ ಮತ್ತು ಶ್ರುತಿ ಹರಿಹರನ್ ಕೂಡ ಜೋಡಿಗಳ ಸಾಹಸಕ್ಕೆ ಭೇಷ್ ಅಂದಿದ್ದಾರೆ.

ಮೈ ಜುಂ ಎನಿಸುವ 'ಡ್ಯಾನ್ಸ್ ಡ್ಯಾನ್ಸ್' ಶೋ ಫೆಬ್ರವರಿ 8 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

English summary
Kannada Entertainment Channel Suvarna has come up with a new adventure by setting up the Dance stage 100 feet above the ground level in Dance Dance show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada