»   » ರಿಯಾಲಿಟಿ ಶೋ ಬಗ್ಗೆ ದರ್ಶನ್ ಬಿಚ್ಚಿಟ್ಟ ಟ್ವೀಟ್ ಮಾತು

ರಿಯಾಲಿಟಿ ಶೋ ಬಗ್ಗೆ ದರ್ಶನ್ ಬಿಚ್ಚಿಟ್ಟ ಟ್ವೀಟ್ ಮಾತು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಹಾಗೂ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆ, ನಿಬಂಧನೆಗಳನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಅವರು ಯಾಕೆ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಅವರ ಚಿತ್ರದ ಪ್ರಚಾರಕ್ಕಾಗಿ ಬರುತ್ತಿಲ್ಲವೇಕೆ? ಶೋಗೆ ಬರಲು ದರ್ಶನ್ ಅವರು ಹಾಕಿರುವ ಕಂಡೀಷನ್ ಏನು ಎಂಬುದನ್ನು ಅವರ ಟ್ವೀಟ್ ಗಳ ಮೂಲಕ ತಿಳಿದುಕೊಳ್ಳಬಹುದು.

ಭಾನುವಾರ ಆರಂಭಗೊಂಡ ವೀಕೆಂಡ್ ವಿತ್ ರಮೇಶ್ ಟಾಕ್ ಶೋ ಮುಂಬರುವ ಸಂಚಿಕೆಗಳಲ್ಲಿ ದರ್ಶನ್ ಅವರು ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ಕೇಳಿ ದರ್ಶನ್ ಅವರಿಗೆ ಅವರ ಅಭಿಮಾನಿಗಳು ಪ್ರಶ್ನಿಸತೊಡಗಿದ್ದರಂತೆ. ಹೀಗಾಗಿ, ರಿಯಾಲಿಟಿ ಶೋ ಬಗ್ಗೆ ದರ್ಶನ್ ಅವರು ಸರಣಿ ಟ್ವೀಟ್ ಗಳ ಮೂಲಕ ಉತ್ತರ ನೀಡಿದ್ದಾರೆ.

ಜೊತೆಗೆ 'ಮಜಾ ವಿಥ್ ಸೃಜಾ' ಶೋನಲ್ಲಿ ಭಾಗವಹಿಸಿದ್ದು ಏಕೆ? ಈ ಕಾರ್ಯಕ್ರಮದಿಂದ ಬಂದ ಹಣವನ್ನು ಎಲ್ಲಿಗೆ ನೀಡಲಾಗುತ್ತಿದೆ. ರೈತರ ಬಗ್ಗೆ ನಾವು ಕಾಳಜಿ ವಹಿಸಬಾರದೇಕೆ ಎಂಬ ಪ್ರಶ್ನೆಗಳನ್ನು ದರ್ಶನ್ ಮುಂದಿಟ್ಟಿದ್ದಾರೆ. ಅಭಿಮಾನಿಗಳ ಜೊತೆಗೆ ಸಂವಹನಕ್ಕಿಳಿದಿಳಿರುವ ದರ್ಶನ್ ಅವರ ಟ್ವೀಟ್ ನಿಂದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ನನ್ನ ಕಂಡೀಷನ್ ಗೆ ಒಪ್ಪಿದರೆ ನಾನು ರೆಡಿ

ಈ ಬಗ್ಗೆ ಸ್ಪಷ್ಟನೆ ಕೇಳಿ ದರ್ಶನ್ ಅವರಿಗೆ ಅವರ ಅಭಿಮಾನಿಗಳು ಪ್ರಶ್ನಿಸತೊಡಗಿದ್ದರಂತೆ. ಹೀಗಾಗಿ, ರಿಯಾಲಿಟಿ ಶೋ ಬಗ್ಗೆ ದರ್ಶನ್ ಅವರು ಸರಣಿ ಟ್ವೀಟ್ ಗಳ ಮೂಲಕ ಉತ್ತರ ನೀಡಿದ್ದಾರೆ.

ರೈತರ ಆತ್ಮಹತ್ಯೆ ಸರಣಿಯಿಂದ ದುಃಖವಾಗಿದೆ

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಸರಣಿಯಿಂದ ದುಃಖವಾಗಿದೆ. ಯಾವುದೇ ರಿಯಾಲಿಟಿ ಶೋ ಇರಲಿ, ಅದರೆ, ಅದರಿಂದ 1 ಲಕ್ಷ ರು ರೈತರ ಕುಟುಂಬಕ್ಕೆ ಪರಿಹಾರ ನೀಡಲು ಸಿದ್ಧವಾದರೆ ಮಾತ್ರ ನಾನು ಬರಲು ರೆಡಿ ಎಂದಿದ್ದಾರೆ.

ಮಜಾ ಟಾಕೀಸ್ ಗೆ ನಾನು ಹೋಗಲು ಕಾರಣ?

ಮಜಾ ಟಾಕೀಸ್ ಗೆ ನಾನು ಹೋಗಲು ಸೃಜನ್ ಲೋಕೇಶ್ ಗೆಳೆತನ ಕಾರಣ ನಿಜ. ಅದರೆ, ನಾನು ಹಾಗೂ ಅವನು ಮಾತಾಡಿಕೊಂಡಂತೆ ಮಜಾ ಟಾಕೀಸ್ ನ ಲಾಭಾಂಶದಲ್ಲಿ ದಾನ ಧರ್ಮಕ್ಕೆ ಎಂದು ಒಂದಿಷ್ಟು ಹಣ ಮೀಸಲಾಗಿಡಲಾಗಿದೆ. ನಾನು ಇಲ್ಲಿ ಮನರಂಜನೆ ನೀಡಲು ಬಂದಿದ್ದೇನೆ ಆದರೆ, ಸಮಾಜಕ್ಕೆ ಒಳ್ಳೆಯದು ಮಾಡುವುದು ನನ್ನ ಕರ್ತವ್ಯ.

ರಿಯಾಲಿಟಿ ಶೋ ಬಗ್ಗೆ ದರ್ಶನ್ ಮಾತು

ರಿಯಾಲಿಟಿ ಶೋ ಬಗ್ಗೆ ನಾನು ಕಳೆದ ಕೆಲವರ್ಷಗಳಿಂದ ಪ್ರಶ್ನೆಗಳನ್ನು ಕೇಳಿಸಿಕೊಳ್ಳುತ್ತಾ ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಹೀಗಾಗಿ ನನ್ನ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದೇನೆ.

ನನ್ನ ನಿಬಂಧನೆಗಳಿಗೆ ಒಪ್ಪಿದರೆ ನಾನು ರೆಡಿ

ನನ್ನ ಚಿತ್ರಗಳಿಗೆ ರಿಯಾಲಿಟಿ ಶೋ ಗಳಲ್ಲಿ ಪ್ರಚಾರ ಅಗತ್ಯವಿಲ್ಲ. ಪ್ರಚಾರಕ್ಕಾಗಿ ಹೋದರೂ ನನ್ನ ನಿರ್ಮಾಪಕರ ಸಲುವಾಗಿ ಹೋಗುತ್ತೇನೆ, ಅದರೆ, ಅದು ಕೂಡಾ ನನ್ನ ದಾನ ಧರ್ಮದ ನಿಬಂಧನೆಗೆ ಒಳಪಟ್ಟಿರಬೇಕು.

English summary
Actor Darshan Thoogudeepa tweeted(dasadarshan) and clarified about his appearance in Kannada Television reality shows. If and only if my conditions fulfilled I am ready to attend the show he said.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada